ದಾಳಿಯ ಮಾಹಿತಿ ಇದ್ದರೂ ಉಗ್ರನನ್ನು ತಡೆಯುವ ಉಪಾಯವೇ ಸಿಕ್ಕಿರಲಿಲ್ಲ
Recommended Video

ಶ್ರೀನಗರ, ಫೆಬ್ರವರಿ 15: ಆತ್ಮಾಹುತಿ ದಾಳಿಕೋರ ದಾಳಿ ಕಾರ್‌ನಲ್ಲಿ ಪ್ರಯಾಣಿಸುತ್ತಿರುವ ಬಗ್ಗೆ ಗುಪ್ತಚರ ವಿಭಾಗ ಭದ್ರತಾ ಪಡೆಗಳಿಗೆ ಮೊದಲೇ ಎಚ್ಚರಿಕೆಯನ್ನು ನೀಡಿತ್ತು. ಈ ಬಗ್ಗೆ ಉನ್ನತ ಮಟ್ಟದ ಸಭೆಯೂ ನಡೆದಿತ್ತು. ಆದರೆ, ಒಂದು ವೇಳೆ ಉಗ್ರ ಪತ್ತೆಯಾದರೂ ಆತನನ್ನು ತಡೆಯುವುದು ಹೇಗೆ ಎಂಬ ಪ್ರಶ್ನೆಗೆ ಸೂಕ್ತ ಪರಿಹಾರವೇ ದೊರೆತಿರಲಿಲ್ಲ ಎಂಬುದು ತಿಳಿದುಬಂದಿದೆ.
ಸಿಆರ್‌ಪಿಎಫ್ ಸೇರಿದಂತೆ ಕಾರ್ ಬಾಂಬ್ ದಾಳಿಯ ವಿವಿಧ ರೂಪಗಳ ಕುರಿತು ಎಲ್ಲ ಭದ್ರತಾ ಪಡೆಗಳಲ್ಲಿಯೂ ಚರ್ಚೆ ನಡೆದಿತ್ತು. ಸಿರಿಯಾ ಮತ್ತು ಅಫ್ಘಾನಿಸ್ತಾನಗಳಲ್ಲಿ ನಡೆಯುವಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಹ ಈ ರೀತಿಯ ದಾಳಿ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿತ್ತು.

ಇಲ್ಲಿ ಓಡಾಡುವ ಕಾರುಗಳನ್ನೂ ಪರಿಶೀಲನೆಗೆ ಒಳಪಡಿಸಲಾಗುತ್ತಿತ್ತು. ಆದರೆ, ಕಾರ್ ಬಾಂಬರ್‌ನನ್ನು ತಡೆಯಲು ಇದು ಸಾಕಾಗಲಿಲ್ಲ. ಕಡಿಮೆ ಸಂಖ್ಯೆಯ ವಾಹನ ಓಡಾಟವಿದ್ದರೆ ಕೂಲಂಕಷ ಪರಿಶೀಲನೆ ಸಾಧ್ಯ. ಅಧಿಕ ಸಂಖ್ಯೆಯ ನಾಗರಿಕ ವಾಹನಗಳು ಓಡಾಡುವಾಗ ಪ್ರತಿ ಕಾರುಗಳನ್ನು ನಿಲ್ಲಿಸಿ ಪರಿಶೀಲನೆ ನಡೆಸುವುದು ಕಷ್ಟವಾಗಿತ್ತು ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications