• search
 • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಗ್ರ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಈಗಲೂ ಪುಲ್ವಾಮಾದಲ್ಲಿ

By ವಿಕಾಸ್ ನಂಜಪ್ಪ
|
Google Oneindia Kannada News
   Pulwama : ಉಗ್ರ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಈಗಲೂ ಪುಲ್ವಾಮಾದಲ್ಲಿ | Oneindia Kannada

   ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಫೆಬ್ರವರಿ 17: ಪುಲ್ವಾಮಾ ದಾಳಿಗೆ ಬಾಂಬ್ ಜೋಡಿಸಿದ ಹಾಗೂ ಸಿದ್ಧಪಡಿಸಿದ ವ್ಯಕ್ತಿಯ ಗುರುತನ್ನು ತನಿಖಾ ಸಂಸ್ಥೆಗಳು ಪತ್ತೆ ಮಾಡಿವೆ. ಅಧಿಕಾರಿಗಳು ಹೇಳುವ ಪ್ರಕಾರ, ಬಾಂಬ್ ಸಿದ್ಧಪಡಿಸಿದ ವ್ಯಕ್ತಿ ಜನವರಿಯಲ್ಲೇ ಪೂಂಛ್ ವಲಯದ ಮೂಲಕ ಜಮ್ಮು-ಕಾಶ್ಮೀರ ಪ್ರವೇಶಿಸಿದ್ದಾನೆ.

   ತನಿಖೆಯಿಂದ ಗೊತ್ತಾಗಿರುವ ಪ್ರಮುಖ ಅಂಶವೇನೆಂದರೆ, ಮಾಸ್ಟರ್ ಮೈಂಡ್ ಮೊಹಮ್ಮದ್ ಉಮೇರ್ ಈಗಲೂ ಪುಲ್ವಾಮಾ ಪ್ರದೇಶದಲ್ಲೇ ಇದ್ದಾನೆ. ಈ ಇಡೀ ಕಾರ್ಯಾಚರಣೆಯ ನಿಗಾ ಮಾಡಿದವನು ಜೈಶ್ ಇ ಮೊಹಮದ್ ಮುಖ್ಯಸ್ಥನ ಸೋದರ ಸಂಬಂಧಿಯೇ ಆದ ಉಮೇರ್. ಬಾಂಬ್ ತಯಾರಕ ಕಮ್ರನ್ ಹಾಗೂ ಇತರರು ಭಾರತದೊಳಕ್ಕೆ ನುಸುಳಲು ಅನುಕೂಲ ಮಾಡಿಕೊಡುವ ಜವಾಬ್ದಾರಿಯೂ ಆತ ವಹಿಸಿದ್ದ.

   ಗಡಿಯಲ್ಲಿ ಆದೇಶಕ್ಕಾಗಿ ಕಾದಿರುವ ಭಾರತದ 140 ಯುದ್ಧ ವಿಮಾನಗಳುಗಡಿಯಲ್ಲಿ ಆದೇಶಕ್ಕಾಗಿ ಕಾದಿರುವ ಭಾರತದ 140 ಯುದ್ಧ ವಿಮಾನಗಳು

   ಸಲಕರಣೆ ಜತೆಗೆ ಜನವರಿಯಲ್ಲಿ ಪೂಂಛ್ ವಲಯದಲ್ಲಿ ಕಮ್ರನ್ ದೇಶದ ಒಳಗೆ ನುಸುಳಿದ್ದಾನೆ ಎನ್ನಲಾಗುತ್ತಿದೆ. ಆತನ ಜತೆಗೆ ಇತರ ಹತ್ತು ಮಂದಿ ಇದ್ದರು. ಅದರಲ್ಲಿ ಅವರೆಲ್ಲರಿಗೂ ತರಬೇತಿ ನೀಡಿದ್ದ ಅಫ್ಘಾನಿಸ್ತಾನ ಮೂಲದ ವ್ಯಕ್ತಿ ಕೂಡ ಇದ್ದ.

   ಗುಪ್ತಚರ ದಳದ ಅಧಿಕಾರಿಯೊಬ್ಬರು ಒನ್ ಇಂಡಿಯಾಗೆ ನೀಡಿದ ಮಾಹಿತಿ ಪ್ರಕಾರ, ದಾಳಿಕೋರ ಸ್ಥಳೀಯನಾಗಿರಬೇಕು ಎಂಬುದು ಜೈಶ್ ಇ ಮೊಹ್ಮದ್ ಉದ್ದೇಶವಾಗಿತ್ತು. ಆ ಕಾರಣಕ್ಕೆ ಅದಿಲ್ ದರ್ ನ ಆಯ್ಕೆ ಮಾಡಿಕೊಳ್ಳಲಾಯಿತು. ಏಕೆಂದರೆ, ಆಗ ಪಾಕಿಸ್ತಾನವು, ಇದರಲ್ಲಿ ನನ್ನ ಪಾತ್ರವಿಲ್ಲ ಎನ್ನಬಹುದು.

   ಮತ್ತೂ ಕಾರಣ ಏನೆಂದರೆ, ಹೀಗೆ ಸ್ಥಳೀಯರನ್ನು ಆಯ್ಕೆ ಮಾಡಿಕೊಂಡರೆ ಭಯೋತ್ಪಾದನಾ ಕೃತ್ಯಗಳಿಗೆ ಇನ್ನಷ್ಟು ಸ್ಥಳೀಯರಿಗೆ ಆಮಿಷ ಒಡ್ಡಬಹುದು. ನಮಗೆ ಸಣ್ಣ ಪುಟ್ಟ ಕೆಲಸ ಅಷ್ಟೇ ವಹಿಸುತ್ತಾರೆ ಎಂಬ ಆಕ್ಷೇಪ ಸ್ಥಳೀಯ ಉಗ್ರಗಾಮಿಗಳಲ್ಲಿ ಇತ್ತು. ಏಕೆಂದರೆ ಪ್ರಮುಖ ದಾಳಿಗಳನ್ನು ಸಂಘಟಿಸುವಾಗ ಅದನ್ನು ಪಾಕಿಸ್ತಾನಿ ಮೂಲದ ಉಗ್ರರಿಗೆ ನೀಡಲಾಗುತ್ತಿತ್ತು.

   ಸಲಕರಣೆಗಳನ್ನು ಕಣಿವೆ ರಾಜ್ಯದೊಳಗೆ ತರುವ ಮುನ್ನ ದರ್ ಗೆ ವಿಸ್ತೃತವಾದ ತರಬೇತಿ ನೀಡಲಾಗಿದೆ. ಕೆಲವು ಪ್ರಾಯೋಗಿಕ ಪರೀಕ್ಷೆಗಳು ಆಗಿವೆ. ಕಮ್ರನ್ ಹಾಗೂ ಆತನ ಜತೆಗೆ ರಶೀದ್ ಭಾರತದೊಳಕ್ಕೆ ಪ್ರವೇಶಿಸಿ, ಪುಲ್ವಾಮಾದಲ್ಲಿನ ಸುರಕ್ಷಿತವಾದ ಸ್ಥಳಕ್ಕೆ ಸಲಕರಣೆ ಸಾಗಿಸಿದ್ದಾರೆ. ಆ ನಂತರವೂ ಕಾರ್ ಅನ್ನು ಸ್ಫೋಟಿಸಿಕೊಳ್ಳುವುದು ಹೇಗೆ ಎಂಬುದನ್ನು ದರ್ ಗೆ ತಿಳಿಸಿಕೊಡಲಾಗಿದೆ.

   ಪಾಕಿಸ್ತಾನ ಗಡಿ ಸಮೀಪವೇ ವಾಯು ಶಕ್ತಿ ಪ್ರದರ್ಶಿಸಿದ ಭಾರತಪಾಕಿಸ್ತಾನ ಗಡಿ ಸಮೀಪವೇ ವಾಯು ಶಕ್ತಿ ಪ್ರದರ್ಶಿಸಿದ ಭಾರತ

   ಗುಪ್ತಚರ ಇಲಾಖೆ ಮೂಲಗಳ ಪ್ರಕಾರ, ಕಾರಿನಲ್ಲಿ ಬಾಂಬ್ ಅಳವಡಿಸಿದ ನಂತರ ಕಮ್ರನ್ ಹಾಗೂ ರಶೀದ್ ನಾಪತ್ತೆ ಆಗಿದ್ದಾರೆ. ಪಾಕಿಸ್ತಾನ್ ಆಕ್ರಮಿತ ಕಾಶ್ಮೀರಕ್ಕೆ ತೆರಳಿದ್ದಾರೆ. ಭಾರತದಿಂದ ದಾಳಿ ಆಗಬಹುದು ಎಂಬ ಕಾರಣಕ್ಕೆ ಬೇರೆ ಸ್ಥಳಕ್ಕೆ ಹೋಗಿರಬಹುದು ಎಂಬ ಗುಮಾನಿ ಇದೆ.

   ತನಿಖೆಗಳಿಂದ ಗೊತ್ತಾಗಿರುವ ಪ್ರಕಾರ, ಎಂಬತ್ತು ಕೇಜಿಯಷ್ಟು ಆರ್ ಡಿಎಕ್ಸ್ ಬಳಸಲಾಗಿದೆ. ಒಂದು ವಾಹನದಲ್ಲಿ ಎಷ್ಟು ಸ್ಫೋಟಕ ಹಿಡಿಸುತ್ತದೆ ಎಂಬುದನ್ನು ತನಿಖಾ ಸಂಸ್ಥೆಗಳನ್ನು ನಿರ್ಧಾರ ಮಾಡುತ್ತಿವೆ. ಮೊದಲಿಗೆ ಅಂದಾಜಿಸಿದ ಪ್ರಕಾರ: ಬಾಂಬರ್ ಅದಿಲ್ ದರ್ ಸ್ಕಾರ್ಪಿಯೋ ಬಳಸಿದ್ದಾನೆ ಎಂದುಕೊಳ್ಳಲಾಗಿತ್ತು.

   ಆಲ್ಟೋ ಅಥವಾ ಇಕೋ ವಾಹನವನ್ನು ದಾಳಿಗೆ ಬಳಸಿರಬಹುದು ಆ ನಂತರ ತನಿಖೆಯಿಂದ ಗೊತ್ತಾಗಿದೆ. ಘಟನಾ ಸ್ಥಳದಲ್ಲಿ ಸಿಕ್ಕಿರುವ ಬಂಪರ್ ಪ್ರಕಾರ ಆ ಕಾರು ಮಾರುತಿಯದು ಎಂದು ಗೊತ್ತಾಗಿದೆ.

   ಗುಪ್ತಚರ ಇಲಾಖೆ ಪ್ರಕಾರ, ಬಾಂಬ್ ತಯಾರಿಸಿದ ವ್ಯಕ್ತಿ ಕಾಶ್ಮೀರದಿಂದ ಈಗಾಗಲೇ ತಪ್ಪಿಸಿಕೊಂಡಿದ್ದಾನೆ. ಆದರೆ ದಾಳಿಯ ಮಾಸ್ಟರ್ ಮೈಂಡ್ ಇನ್ನೂ ಕಣಿವೆ ರಾಜ್ಯದಲ್ಲೇ ಇದ್ದಾನೆ. ದಾಳಿಯ ಮಾಸ್ಟರ್ ಮೈಂಡ್ ಮೊಹಮ್ಮದ್ ಉಮೇರ್ ಈಗಲೂ ಪುಲ್ವಾಮಾ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾನೆ.

   English summary
   The Intelligence agencies have been able to identify person who prepared and assembled the bomb for the Pulwama attack. Officials say that the bomb maker had entered Jammu and Kashmir in January through the Poonch sector. Investigations have also revealed that the mastermind, Mohammad Umair is still in the Pulwama area. Umair, who is the nephew of Jaish-e-Mohammad chief, oversaw the entire operation, which also included the infiltration of the bomb maker Kamran and others.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X