• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೀನಾ ಬಳಿಕ ಲಡಾಖ್ ಗಡಿಯಲ್ಲಿ ಪಾಕಿಸ್ತಾನ ಸೇನೆಯ ಜಮಾವಣೆ

|
Google Oneindia Kannada News

ಲಡಾಖ್, ಜುಲೈ 1: ಭಾರತದೊಂದಿಗೆ ಚೀನಾ ವಿವಾದದ ಬಳಿಕ ಇದೀಗ ಲಡಾಖ್‌ನ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಸೇನೆಯು ಜಮಾವಣೆಯಾಗಿದೆ.

ಇದರಲ್ಲಿ ಚೀನಾ ಕೈವಾಡ ಇದೆ, ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಚೀನಾ, ಪಾಕಿಸ್ತಾನದ ಉಗ್ರರೊಂದಿಗೆ ನೇರವವಾಗಿ ಚರ್ಚೆಗೆ ಇಳಿದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರದಲ್ಲಿ ತೊಡಗುವಂತೆ ಕುಮ್ಮಕ್ಕು ನೀಡುತ್ತಿದೆ.

ಕಾಶ್ಮೀರದ ಗಡಿಯಲ್ಲಿ ಪಾಕ್‌ನಿಂದ ಅಪ್ರಚೋದಿತ ಗುಂಡಿನ ದಾಳಿ: ಇಬ್ಬರು ಯೋಧರು ಹುತಾತ್ಮಕಾಶ್ಮೀರದ ಗಡಿಯಲ್ಲಿ ಪಾಕ್‌ನಿಂದ ಅಪ್ರಚೋದಿತ ಗುಂಡಿನ ದಾಳಿ: ಇಬ್ಬರು ಯೋಧರು ಹುತಾತ್ಮ

ಅಚ್ಚರಿಯೆಂಬಂತೆ ಉತ್ತರ ಲಡಾಖ್​ ಗಡಿಗೆ ಹೊಂದಿಕೊಂಡಿರುವ ಗಿಲ್ಗಿಟ್​- ಬಲ್ಟಿಸ್ತಾನ್​ನಲ್ಲಿ ಪಾಕಿಸ್ತಾನ ಕೂಡ ಭಾರಿ ಪ್ರಮಾಣದಲ್ಲಿ ಸೇನೆ ನಿಯೋಜಿಸಿದೆ. ಪಾಕಿಸ್ತಾನದ 20 ಸಾವಿರಕ್ಕೂ ಅಧಿಕ ಸೈನಿಕರು ಇಲ್ಲಿ ಬೀಡು ಬಿಟ್ಟಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಕಾಶ್ಮೀರದಲ್ಲಿ 100ಕ್ಕೂ ಹೆಚ್ಚು ಉಗ್ರರಿಂದ ಆಂತರಿಕವಾಗಿಯೇ ದಾಳಿ ನಡೆಸುವ ಉದ್ದೇಶ ಐಎಸ್​ಐನದ್ದಾಗಿದೆ. ಕೆಲವು ದಿನಗಳಿಂದ ಜಮ್ಮು ಕಾಶ್ಮೀರದಲ್ಲಿ 120ಕ್ಕೂ ಅಧಿಕ ಉಗ್ರರನ್ನು ಸೇನೆ ಹೊಡೆದುರುಳಿಸಿದೆ.

ಇವರಲ್ಲಿ 100ಕ್ಕೂ ಅಧಿಕ ಜನರು ಸ್ಥಳೀಯರೇ ಆಗಿದ್ದಾರೆ ಎಂಬುದು ಆತಂಕದ ವಿಷಯವಾಗಿದೆ.ಉಗ್ರ ಸಂಘಟನೆ ಅಲ್​ ಬದರ್​ ಜತೆ ಚೀನಾ ಮಾತುಕತೆಯಲ್ಲಿ ತೊಡಗಿದ್ದು, ಭಾರತದಲ್ಲಿ ಹಿಂಸಾಚಾರ ನಡೆಸುವಂತೆ ಸೂಚಿಸಿದೆ.

ಚೀನಾ ಜತೆ ಸೇರಿಕೊಂಡು ಭಾರತದ ಮೇಲೆ ದಾಳಿ ನಡೆಸುವ ಉದ್ದೇಶ ಪಾಕಿಸ್ತಾನದ್ದಾಗಿದೆ. ಚೀನಾದ ಕುಮ್ಮಕ್ಕಿನಿಂದಾಗಿಯೇ ಯುದ್ದೋನ್ಮಾದ ಉಗ್ರರನ್ನು ಭಾರತಕ್ಕೆ ನುಸುಳುವಲ್ಲಿ ಪಾಕಿಸ್ತಾನದ ಐಎಸ್‌ಐಎಸ್ ಸಜ್ಜಾಗಿದೆ.

English summary
Sources say Pakistan has started moving troops along the Gilgit-Baltistan area and the Chinese army is holding talks with terror organisation Al Badr to incite violence in Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X