ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಜೈಲುಗಳಲ್ಲಿ ಅಪ್ರಾಪ್ತರೇ ಇಲ್ಲ

ಶ್ರೀನಗರ್, ಡಿಸೆಂಬರ್.13: ಜಮ್ಮು-ಕಾಶ್ಮೀರದಲ್ಲಿ ಅಪ್ರಾಪ್ತರನ್ನೂ ಕೂಡಾ ಸೆರೆ ಹಿಡಿದು ಜೈಲಿನಲ್ಲಿ ಇಟ್ಟಿರುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ದೇಶದ ಸುಪ್ರೀಂಕೋರ್ಟ್ ಗೂ ಸಾಲು ಸಾಲು ದೂರುಗಳ ದಾಖಲಾಗಿದ್ದವು. ಈಗ ಎಲ್ಲ ಗೊಂದಲಗಳಿಗೂ ತೆರೆ ಬಿದ್ದಿದೆ. ಎಲ್ಲ ಪ್ರಶ್ನೆ ಹಾಗೂ ಅನುಮಾನಗಳಿಗೂ ಉತ್ತರ ಸಿಕ್ಕಿದೆ.

ಜಮ್ಮು-ಕಾಶ್ಮೀರದ ಜೈಲುಗಳಲ್ಲಿ ಅಪ್ರಾಪ್ತರನ್ನು ಇರಿಸಿಲ್ಲ ಎಂಬುದನ್ನು ಅಧಿಕಾರಿಗಳ ತಂಡ ಪತ್ತೆ ಮಾಡಿದೆ. ಈ ಕುರಿತು ತಯಾರಿಸಿದ ಅಂತಿಮ ವರದಿಯನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಲಾಗಿದೆ.

ಕಣಿವೆ ರಾಜ್ಯಕ್ಕೆ 370ರ ಅಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುತ್ತಿದ್ದಂತೆ ಜಮ್ಮು-ಕಾಶ್ಮೀರದಲ್ಲಿ ಪ್ರತಿಭಟನೆಗಳು ತೀವ್ರಗೊಂಡವು. ಕೇಂದ್ರ ಸರ್ಕಾರದ ವಿರುದ್ಧ ಕೆಲವು ಸಂಘಟನೆಗಳು ಹಾಗೂ ಜನರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಉದ್ರಿಕ್ತರನ್ನು ಬಂಧಿಸಿ ಜೈಲಿನಲ್ಲಿ ಇರಿಸಲಾಗಿತ್ತು.

No Minors Detained In Jammu Kashmir Jails- Report To Supreme Court

ಅಪ್ರಾಪ್ತರನ್ನೂ ಸೆರೆ ಹಿಡಿದ ಆರೋಪ ಸುಳ್ಳು:

ಕಣಿವೆ ರಾಜ್ಯದಲ್ಲಿ ಶಾಂತಿ ಕದಡದಂತೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ಸೇನಾ ತುಕಡಿಗಳು, ಪೊಲೀಸರು ತೀವ್ರ ಮುಂಜಾಗ್ರತೆ ವಹಿಸಿದ್ದರು. ಈ ವೇಳೆ ದುಷ್ಕೃತ್ಯ ಎಸಗುವವವರ ಬಗ್ಗೆ ನಿಗಾ ವಹಿಸಿದ್ದು, ಶಂಕಿತರನ್ನು ಬಂಧಿಸಿ ಜೈಲಿನಲ್ಲಿ ಇರಿಸಲಾಗಿತ್ತು. ಇದೇ ಸಂದರ್ಭದಲ್ಲಿ ಕೆಲವು ಅಪ್ರಾಪ್ತರನ್ನೂ ಕೂಡಾ ಸ್ಥಳೀಯ ಅಧಿಕಾರಿಗಳು ಬಂಧಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಪರಿಶೀಲನೆ ನಡೆಸುವಂತೆ ಸುಪ್ರೀಂಕೋರ್ಟ್, ಜಮ್ಮು-ಕಾಶ್ಮೀರದ ಹೈಕೋರ್ಟ್ ನ್ಯಾಯಾಧೀಶರಿಗೆ ಸೂಚನೆ ನೀಡಿತ್ತು.

ಡಿಸೆಂಬರ್.13ರ ಶುಕ್ರವಾರ ಜಮ್ಮು-ಕಾಶ್ಮೀರದ ಜೈಲಿಗಳಿಗೆ ಭೇಟಿ ನೀಡಿದ ಹೈಕೋರ್ಟ್ ನ ನಾಲ್ವರು ನ್ಯಾಯಾಧೀಶರು ಈ ಬಗ್ಗೆ ಪರಿಶೀಲನೆ ನಡೆಸಿದರು. ಅಂತಿಮವಾಗಿ ಯಾವುದೇ ಅಪ್ರಾಪ್ತರನ್ನು ಜೈಲಿನಲ್ಲಿ ಸೆರೆ ಹಿಡಿಯಲಾಗಿಲ್ಲ ಎಂದು ಸುಪ್ರೀಂಕೋರ್ಟ್ ಗೆ ವರದಿ ಸಲ್ಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+