• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಮ್ಮು ಕಾಶ್ಮೀರಕ್ಕೆ ಗುಲಾಂ ನಬಿ ಆಜಾದ್‌ಗೆ ಎಂಟ್ರಿ ಇಲ್ಲ

|

ಶ್ರೀನಗರ, ಆಗಸ್ಟ್ 20: ಜಮ್ಮು ಕಾಶ್ಮೀರಕ್ಕೆ ಕಾಲಿಡದಂತೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ನನ್ನು ಜಮ್ಮು ವಿಮಾನ ನಿಲ್ದಾಣದಲ್ಲೇ ಅವರನ್ನು ದೆಹಲಿಗೆ ವಾಪಸ್ ಕಳುಹಿಸಲಾಗಿದೆ.

ಈ ಕುರಿತು ಗುಲಾಂ ನಬಿ ಆಜಾದ್ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳೀಯ ಆಡಳಿತ ಮಂಡಳಿಯ ವರ್ತತೆ ಸರಿ ಇಲ್ಲ, ಪ್ರಮುಖ ರಾಜಕೀಯ ಪಕ್ಷದ ಮುಖಂಡರು ಕಾಶ್ಮೀರಕ್ಕೆ ಭೇಟಿ ನೀಡಬಾರದು ಎಂದರೆ ಇನ್ಯಾರು ಹೋಗಬೇಕು ಎಂದು ಪ್ರಶ್ನಿಸಿದ್ದಾರೆ.

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಗುಲಾಂ ನಬಿ ಆಜಾದ್‌ಗೆ ಆಘಾತ

ಗುಲಾಂ ನಬಿ ಆಜಾದ್ ಅವರು ಮಂಗಳವಾರ ಮಧ್ಯಾಹ್ನ ಜಮ್ಮುವಿನ ವಿಮಾನ ನಿಲ್ದಾಣಕ್ಕೆ ಬಂದಿದ್ದರು, ಆದರೆ ಅವರನ್ನು ನಿಲ್ದಾಣದಿಂದ ಹೊರಗೆ ಹೋಗಲು ಅವಕಾಶ ಮಾಡಿಕೊಡಲಿಲ್ಲ. ಸುಮಾರು ನಾಲ್ಕು ಗಂಟೆ ಹೊತ್ತಿಗೆ ವಾಪಸ್ ದೆಹಲಿಗೆ ಕಳುಹಿಸಲಾಯಿತು ಎನ್ನುವ ಮಾಹಿತಿ ಲಭ್ಯವಾಗಿದೆ.

ಗುಲಾಂ ನಬಿ ಆಜಾದ್ ಅವರು ಜಮ್ಮು ಕಾಶ್ಮೀರಕ್ಕೆ ಬರಲು ಯತ್ನಿಸಿದ್ದ ಇದು ಎರಡನೇ ಬಾರಿಯಾಗಿದೆ. ಆಗಸ್ಟ್ 8ರಂದು ಸಹ ವಿಮಾನ ನಿಲ್ದಾಣದಲ್ಲಿ ತಡೆದು ವಾಪಸ್ ಕಳುಹಿಸಿದ್ದರು. ಇದೀಗ ಮತ್ತೆ ದೆಹಲಿಗೆ ಮರಳಿ ಕಳುಹಿಸಿದ್ದಾರೆ. ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ವಿಧಿ 370ನ್ನು ರದ್ದುಗೊಳಿಸಿದೆ.

ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ವಿಂಗಡಿಸಿದೆ. ಈ ಕುರಿತು ಸ್ಥಳೀಯ ಕಾಂಗ್ರೆಸ್ ಕಾರ್ಯ ಕರ್ತರ ಜೊತೆ ಮಾತುಕತೆಗೆಂದು ಗುಲಾಂ ನಬಿ ತೆರಳಿಸಿದ್ದರು.

English summary
No Entry For Ghulam Nabi Azad In Jammu And Kashmir,the second time in a month the former chief minister was not allowed to visit Jammu and Kashmir sent back to Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X