• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಮ್ಮು-ಕಾಶ್ಮೀರದಲ್ಲಿ 4ಜಿ ಇಂಟರ್ ನೆಟ್ ಬಳಕೆಗೆ ನಿರ್ಬಂಧ

|

ಶ್ರೀನಗರ್, ಅಕ್ಟೋಬರ್.21: ಜಮ್ಮು ಕಾಶ್ಮೀರದಲ್ಲಿ ಆಡಳಿತಾರೂಢ ಪಕ್ಷವು 4ಜಿ ಮೊಬೈಲ್ ಇಂಟರ್ ನೆಟ್ ಸೇವೆ ಬಳಕೆಯ ನಿರ್ಬಂಧವನ್ನು ಮುಂದುವರಿಸಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ 2ಜಿ ಇಂಟರ್ ನೆಟ್ ಸೇವೆಯನ್ನು ಮಾತ್ರ ಬಳಸುವುದಕ್ಕೆ ಅನುಮತಿ ನೀಡಲಾಗಿದೆ.

ಕೇಂದ್ರಾಡಳಿತ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಮೊದಲೇ 4ಜಿ ಮೊಬೈಲ್ ಇಂಟರ್ ನೆಟ್ ಸೇವೆ ಬಳಸುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಇದೀಗ ಈ ನಿರ್ಬಂಧವನ್ನು ನವೆಂಬರ್.12ರವರೆಗೂ ವಿಸ್ತರಿಸಲು ಅಧಿಸೂಚನೆ ಹೊರಡಿಸಲಾಗಿದೆ. ಗಂದರ್ ಬಾಲ್ ಮತ್ತು ಉಧಮಪುರ್ ಜಿಲ್ಲೆಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.

ಜಮ್ಮು ಕಾಶ್ಮೀರದಲ್ಲಿ ಸಾಮಾಜಿಕ ಜಾಲತಾಣ ನಿರ್ಬಂಧ ತೆರವು

ಪ್ರೀ-ಪೇಯ್ಡ್ ಮತ್ತು ಪೋಸ್ಟ್-ಪೇಯ್ಡ್ ಸಿಮ್ ಕಾರ್ಡ್ ಗಳಲ್ಲಿ ಮಾತ್ರ ಈ 2ಜಿ ಇಂಟರ್ ನೆಟ್ ಸೇವೆಯನ್ನು ಪಡೆಯುವ ವ್ಯವಸ್ಥೆಯನ್ನು ಹೊಂದಲಾಗಿದೆ. ಇದರ ಹೊರತಾಗಿ 4ಜಿ ಇಂಟರ್ ನೆಟ್ ಬಳಕೆಗೆ ಯಾವುದೇ ಅವಕಾಶಗಳಿಲ್ಲ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಇಂಟರ್ ನೆಟ್ ಸಂಪರ್ಕವು ಯಾವುದೇ ವೇಗ ಸಂಬಂಧಿತ ನಿರ್ಬಂಧಗಳಿಲ್ಲದೆ, ಮ್ಯಾಕ್-ಬೈಂಡಿಂಗ್ ನೊಂದಿಗೆ ಲಭ್ಯವಾಗಲಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

2019ರಿಂದಲೂ ಇಂಟರ್ ನೆಟ್ ಸೇವೆಗೆ ನಿರ್ಬಂಧ:

ಜಮ್ಮು-ಕಾಶ್ಮೀರಕ್ಕೆ 370ರ ಕಾಯ್ದೆಯಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬೆನ್ನಲ್ಲೇ ಇಂಟರ್ ನೆಟ್ ಸಂಪರ್ಕದ ಮೇಲೆ ನಿರ್ಬಂಧ ಹೇರಲಾಗಿತ್ತು. 2019ರ ಆಗಸ್ಟ್.05ರಂದು ಮೊದಲ ಹಂತದಲ್ಲೇ ಇಂಟರ್ ನೆಟ್ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ತದನಂತರದಲ್ಲಿ ಜನವರಿ.25ರ ವೇಳೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಹಿನ್ನೆಲೆ 2ಜಿ ಇಂಟರ್ ನೆಟ್ ಬಳಕೆಗೆ ಅವಕಾಶ ನೀಡಲಾಗಿತ್ತು.

ಕಳೆದ ಸಪ್ಟೆಂಬರ್.30ರಂದು ಜಮ್ಮು-ಕಾಶ್ಮೀರದಲ್ಲಿ 4ಜಿ ಮೊಬೈಲ್ ಇಂಟರ್ ನೆಟ್ ಸೇವೆ ಬಳಕೆ ಮೇಲಿನ ನಿರ್ಬಂಧವನ್ನು ಅಕ್ಟೋಬರ್.21ರವರೆಗೂ ವಿಸ್ತರಿಸಲಾಗಿತ್ತು. ಇದೀಗ ಅಕ್ಟೋಬರ್.21ರಿಂದ ನವೆಂಬರ್.12ರವರೆಗೂ ವಿಸ್ತರಣೆಯನ್ನು ಮುಂದುವರಿಸಲಾಗಿದೆ.

English summary
Jammu Kashmir Govt Extends Ban On 4G Internet Services Except In Two Districts Till Nov.12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X