ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು-ಕಾಶ್ಮೀರದಲ್ಲಿ ಬಾಂಬ್ ಸ್ಫೋಟದ ನೈಜ ವಿಡಿಯೋ ಸಹಿತ ಸುದ್ದಿ!

|
Google Oneindia Kannada News

ಶ್ರೀನಗರ್, ಮೇ.28: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಸುಧಾರಿತ ಸ್ಫೋಟಕ ಸಾಧನ ತುಂಬಿದ್ದ ಕಾರ್ ಸ್ಫೋಟಗೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಕೂದಲೆಳೆ ಅಂತರದಲ್ಲಿ ಸಂಭವಿಸಬೇಕಿದ್ದ ದೊಡ್ಡ ಅನಾಹುತವನ್ನು ಭದ್ರತಾ ಪಡೆ ಮತ್ತು ಪೊಲೀಸರು ತಪ್ಪಿಸಿದ್ದಾರೆ.

ಪುಲ್ವಾಮಾ ಬಳಿ ಕಾರಿನಲ್ಲಿ ಐಇಡಿ ತುಂಬಿಕೊಂಡು ಉಗ್ರರು ಸಂಚರಿಸುತ್ತಿರುವ ಬಗ್ಗೆ ಪೊಲೀಸರಿಗೆ ಕಳೆದ ರಾತ್ರಿ ವೇಳೆಗೆ ಮಾಹಿತಿ ಸಿಕ್ಕಿತ್ತು. ಜಮ್ಮು-ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಸ್ಫೋಟಗಳನ್ನು ನಡೆಸುವುದಕ್ಕೆ ಉಗ್ರರು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ನಾಲ್ಕೂ ದಿಕ್ಕುಗಳಲ್ಲಿ ತೀವ್ರ ನಿಗಾ ವಹಿಸಿದ್ದರು.

ಶಂಕಿತ ವಾಹನದಲ್ಲಿ ಆಗಮಿಸಿದ ಉಗ್ರರು ಸೇನಾ ಪಡೆ ಸಿಬ್ಬಂದಿ ಮತ್ತು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು. ನಂತರದಲ್ಲಿ ಐಇಡಿ ತುಂಬಿದ ವಾಹನವನ್ನು ಸ್ಥಳದಲ್ಲೇ ಬಿಟ್ಟು ಚಾಲಕನ ಸಮೇತ ಎಲ್ಲರೂ ಕತ್ತಲಿನಲ್ಲಿ ತಪ್ಪಿಸಿಕೊಂಡು ಹೋಗಿದ್ದಾರೆ.

ಜಮ್ಮುವಿನಲ್ಲಿ ಇಬ್ಬರು ಹಿಜ್ಬುಲ್ ಭಯೋತ್ಪಾದಕರ ಎನ್ಕೌಂಟರ್ಜಮ್ಮುವಿನಲ್ಲಿ ಇಬ್ಬರು ಹಿಜ್ಬುಲ್ ಭಯೋತ್ಪಾದಕರ ಎನ್ಕೌಂಟರ್

Jammu-Kashmir: The Security Force That Failed The IED Bombing Plot

ಕಾರ್ ನಲ್ಲಿ ಭಾರಿಪ್ರಮಾಣದ ಸ್ಫೋಟಕ ಪತ್ತೆ:

ಉಗ್ರರು ತುಂಬಿಕೊಂಡು ಹೊರಟಿದ್ದ ಕಾರ್ ನಲ್ಲಿ ಭಾರಿ ಪ್ರಮಾಣದ ಸುಧಾರಿತ ಸ್ಫೋಟಕ(IED) ಪತ್ತೆಯಾಗಿವೆ. ಇದರ ಜೊತೆಗೆ ಕಾರಿನ ಕೆಲವು ಭಾಗಗಳಲ್ಲಿ ಸ್ಫೋಟಕಗಳನ್ನು ಇಟ್ಟಿರುವ ಬಗ್ಗೆ ಪೊಲೀಸರು ಮತ್ತು ಭದ್ರತಾ ಪಡೆ ಸಿಬ್ಬಂದಿ ಪತ್ತೆ ಹಚ್ಚಿದರು. ಈ ಹಿನ್ನೆಲೆ ರಾತ್ರಿಯಿಡೀ ವಾಹನದ ಮೇಲೆ ತೀವ್ರ ನಿಗಾ ವಹಿಸಲಾಗಿತ್ತು. ವಾಹನ ನಿಲ್ಲಿಸಿದ್ದ ಸುತ್ತ ಮುತ್ತಲಿನ ಪ್ರದೇಶದಲ್ಲಿ ವಾಸವಿದ್ದ ಜನರನ್ನು ಅಲ್ಲಿಂದ ತೆರವುಗೊಳಿಸಲಾಗಿತ್ತು. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ದೌಡಾಯಿಸಿದರು.

English summary
Jammu-Kashmir: The Security Force That Failed The IED Bombing Plot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X