• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಶ್ಮೀರ ಲೂಟಿಕೋರರನ್ನು ಕೊಲೆ ಗೈಯಿರಿ, ಭಯೋತ್ಪಾದಕರಿಗೆ ರಾಜ್ಯಪಾಲರ ಕರೆ

|

ಶ್ರೀನಗರ, ಜುಲೈ 22:ವಿವಾದಿತ ಹಾಗೂ ಕಠಿಣ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

ಕಣಿವೆ ರಾಜ್ಯದ ಮುಗ್ಧರನ್ನು ಟಾರ್ಗೆಟ ಮಾಡುವ ಬದಲು ಜಮ್ಮು ಕಾಶ್ಮೀರವನ್ನು ಲೂಟಿ ಮಾಡಿದವರನ್ನು ಕೊಲೆ ಮಾಡಿ ಎಂದು ಭಯೋತ್ಪಾದಕರಿಗೆ ಸತ್ಯಪಾಲ್ ಹೇಳಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ರಾಜ್ಯಪಾಲರು ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆಗಾಗಿ ಗನ್ ಎತ್ತಿಕೊಂಡವರ ತಮ್ಮದೇ ರಾಜ್ಯದ ಹಾಗೂ ಊರಿನ ಮುಗ್ಧರನ್ನು ಕೊಲೆ ಮಾಡುತ್ತಿದ್ದಾರೆ.

ಕಾಶ್ಮೀರದ ಭದ್ರತಾ ಸಿಬ್ಬಂದಿಯನ್ನು ಈ ಭಯೋತ್ಪಾದನೆ ಸಾಯಿಸುತ್ತಿದೆ.ಇದರ ಬದಲಾಗಿ ಕಾಶ್ಮೀರವನ್ನು ಲೂಟಿ ಮಾಡಿದವರನ್ನು ಕೊಲೆ ಮಾಡಿ , ಇಲ್ಲಿಯವರೆಗೆ ಅಂತಹ ಒಂದು ಘಟನೆಯಾದರೂ ನಡೆದಿದೆಯೇ ಎಂದು ಪ್ರಶ್ನಿಸಿದ್ದಾರೆ.

ಹಾಗೆಯೇ ಮಾತು ಮುಂದುವರೆಸಿರುವ ಸತ್ಯಪಾಲ್ ಕಣಿವೆ ರಾಜ್ಯದಲ್ಲಿ ರಕ್ತ ಹರಿಯುತ್ತಿರುವಾಗ ಮಾತುಕತೆ ಅಸಾಧ್ಯ ಗನ್ ಕೆಳಗಿಟ್ಟು ಪ್ರತ್ಯೇಕತಾವಾದಿಗಳು ಮಾತುಕತೆಗೆ ಬಂದರೆ ಕೇಂದ್ರ ಸರ್ಕಾರ ಮಾತುಕತೆಗೆ ಸಿದ್ಧವಾಗಿದೆ ಎಂದಿದ್ದಾರೆ.

ಆದರೆ ಸತ್ಯಪಾಲ್ ಮಲ್ಲಿಕ್ ಅವರ ವಿವಾದಿತ ಹೇಳಿಕೆ ಪ್ರತಿಪಕ್ಷಗಳ ಕೆಂಗಣ್ಣಿಗೆ ಕಾರಣವಾಗಿದೆ.

ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಈ ಕುರಿತು ಟ್ವೀಟ್ ಮಾಡಿ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯು ರಾಜಕಾರಣಿಗಳನ್ನು ಕೊಲೆ ಮಾಡಲು ಭಯೋತ್ಪಾಕರಿಗೆ ಮನವಿ ಮಾಡುತ್ತಿರುವುದು ಅಸಹ್ಯ ಈ ರೀತಿಯ ಹೇಳಿಕೆ ಬದಲಿಗೆ, ಇತ್ತೀಚಿನ ದಿನಗಳಲ್ಲಿ ದೆಹಲಿಯಲ್ಲಿ ಅವರ ಕಾರ್ಯ ನಿರ್ವಹಣೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಅವರಿಗೆ ತಿರುಗೇಟು ನೀಡಿದ್ದಾರೆ.

English summary
Jammu Kashmir governor Satyapal malik issues controversial statement over Killing corrupt politicians those who looted the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X