ಜಮ್ಮು- ಕಾಶ್ಮೀರ: ಭಾರತೀಯ ಸೇನೆಯಿಂದ ಮೂವರು ಭಯೋತ್ಪಾದಕರ ಹತ್ಯೆ
ಶೋಪಿಯಾನ್, ಮಾರ್ಚ್ 28: ಭಾರತೀಯ ಸೇನೆ ಗುರುವಾರ ಬೆಳಿಗ್ಗೆ ನಡೆಸಿದ ಎನ್ ಕೌಂಟರ್ ದಾಳಿಯಲ್ಲಿ ಮೂವರು ಭಯೋತ್ಪಾದಕರನ್ನು ಹತ್ಯೆಗೈಯ್ಯಲಾಗಿದೆ.
ಜಮ್ಮು ಕಾಶ್ಮೀರದ ಶೋಪಿಯಾನ್ ನ ಕೆಲ್ಲಾರ್ ಪ್ರದೇಶದಲ್ಲಿ ಅಡಗಿದ್ದ ಭಯೋತ್ಪಾದಕರ ಮೇಲೆ ಸಿಆರ್ ಪಿಎಫ್, ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿ ದಾಳಿ ನಡೆಸಿ, ಮೂವರು ಭಯೋತ್ಪಾದಕರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾದರು.
ಇಲ್ಲಿನ ಹಂಡ್ವಾರ ಪ್ರದೇಶದ ಯಾರೂ ಎಂಬಲ್ಲಿಯೂ ಇಂದು ಬೆಳಿಗ್ಗೆಯಿಂದಲೇ ಗುಂಡಿನ ಚಕಮಕಿ ಆರಂಭವಾಗಿದೆ.

ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಳೆದ ಮಾರ್ಚ್ 22 ರಂದು ಜಮ್ಮುಮತ್ತು ಕಾಶ್ಮೀರದ ಬಂಡಿಪೊರದ ಹಾಜಿನ್ ಎಂಬಲ್ಲಿ ಭಾರತೀಯ ಸೇನೆ ಮೂವರು ಭಯೋತ್ಪಾದಕರನ್ನು ಹತ್ಯೆಗೈದಿತ್ತು.
ಪುಲ್ವಾಮಾದಲ್ಲಿ ನಲವತ್ತಕ್ಕೂ ಹೆಚ್ಚು ಭಾರತೀಯ ಯೋಧರನ್ನು ಜೈಷ್ ಇ ಮೊಹಮ್ಮದ್ ಉಗ್ರನೊಬ್ಬ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ಹತ್ಯೆಗೈದ ನಂತರ ಭಾರತ, ಪಾಕಿಸ್ತಾನದ ಭಯೋತ್ಪಾದಕ ನೆಲೆಯ ಮೇಲೆ ದಾಳಿ ನಡೆಸಿತ್ತು.
ಈ ಘಟನೆಯ ನಂತರ ಗಡಿಯಲ್ಲಿ ಉಗ್ರ ಚಟುವಟಿಕೆಯನ್ನು ಹತ್ತಿಕ್ಕುವವಲ್ಲಿ ಪಣತೊಟ್ಟಿರುವ ಭಾರತೀಯ ಸೇನೆ, ದಿನ ದಿನವೂ ಎನ್ ಕೌಂಟರ್ ದಾಳಿಯಲ್ಲಿ ಭಯೋತ್ಪಾದಕರನ್ನು ಹತ್ಯೆಗೈಯುತ್ತಿದೆ.












Click it and Unblock the Notifications