• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂದಿನ 2 ವರ್ಷಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ನಿರ್ನಾಮ

|
Google Oneindia Kannada News

ಶ್ರೀನಗರ, ನವೆಂಬರ್ 18: ಮುಂದಿನ 2 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡುತ್ತೇವೆ ಎಂದು ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ.

ಒಟ್ಟಿನಲ್ಲಿ ಜಮ್ಮು ಕಾಶ್ಮೀರದಿಂದ ಭಯೋತ್ಪಾದನೆಯನ್ನು ನಿರ್ನಾಮ ಮಾಡಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದರು.

ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಕೇಂದ್ರವೇ ಕಾರಣ: ಮುಫ್ತಿಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಕೇಂದ್ರವೇ ಕಾರಣ: ಮುಫ್ತಿ

ಅನೇಕ ಮಂದಿ ಕಾನೂನು ಹಾಗೂ ಸುವ್ಯವಸ್ಥೆ ಬಗ್ಗೆ ಚಿಂತಿಸುತ್ತಾರೆ, ಪರಿಸ್ಥಿತಿಯು ಇದೀಗ ಬದಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಎರಡು ವರ್ಷದ ಬಳಿಕ ಭಯೋತ್ಪಾದನೆಯನ್ನು ನೀವು ನೋಡಲು ಸಾಧ್ಯವೇ ಇಲ್ಲ. ಆ ದಿಕ್ಕನಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ.

ಪಾಕಿಸ್ತಾನದ ಸುಮಾರು 38 ಉಗ್ರರು ಕಣಿವೆ ಪ್ರದೇಶದಲ್ಲಿ ಸಕ್ರಿಯರಾಗಿದ್ದಾರೆ ಎನ್ನುವ ಗುಪ್ತಚರ ಮಾಹಿತಿ ಬಂದಿದ್ದು, ಅವರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ ಎಂದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಭದ್ರತಾ ಸಂಸ್ಥೆಗಳು ಸಜ್ಜಾಗಿದ್ದು, ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಇರುವ ಉಗ್ರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ.

ವಿಶೇಷ ಮಾಹಿತಿಯ ಪ್ರಕಾರ, ಕೇಂದ್ರ ಗುಪ್ತಚರ ಸಂಸ್ಥೆಗಳು ಜಮ್ಮು ಮತ್ತು ಕಾಶ್ಮೀರದ 9 ಪ್ರದೇಶಗಳಲ್ಲಿ ಒಟ್ಟು 97 ಭಯೋತ್ಪಾದಕರನ್ನು ಗುರುತಿಸಿವೆ. ಈ 97 ಭಯೋತ್ಪಾದಕರ ಪೈಕಿ 24 ಹಿಜ್ಬುಲ್ ಮುಜಾಹಿದ್ದೀನ್, 52 ಲಷ್ಕರ್, 11 ಅಲ್ ಬದರ್ ಮತ್ತು 9 ಭಯೋತ್ಪಾದಕರು ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದವರಾಗಿದ್ದಾರೆ.

ಪುಲ್ವಾಮಾದಲ್ಲಿ ಹೆಚ್ಚಿದೆ ಉಗ್ರರ ಉಪಸ್ಥಿತಿ : ಮೂಲಗಳ ಪ್ರಕಾರ ಕಾಶ್ಮೀರದ 9 ಪ್ರದೇಶಗಳ ಪೈಕಿ ಹೆಚ್ಚಿನ ಭಯೋತ್ಪಾದಕರುಪುಲ್ವಾಮಾದಲ್ಲಿದ್ದಾರೆ. ಪುಲ್ವಾಮಾದಲ್ಲಿ ಒಟ್ಟು 36 ಭಯೋತ್ಪಾದಕರು ಇದ್ದಾರೆ ಎಂದು ವರದಿಯಾಗಿದೆ. ಅವರಲ್ಲಿ 10 ಹಿಜ್ಬುಲ್ ಮುಜಾಹಿದ್ದೀನ್, 17 ಲಷ್ಕರ್, 4 ಅಲಬ್ದಾರ್, 4 ಜೈಶ್ ಭಯೋತ್ಪಾದಕರು. ಇದಾದ ನಂತರ ಶೋಪಿಯಾನ್ ನಲ್ಲಿ ಒಟ್ಟು 24 ಸಕ್ರಿಯ ಭಯೋತ್ಪಾದಕರು ಇದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.

ಅದರಲ್ಲಿ 5 ಹಿಜ್ಬುಲ್ ಮುಜಾಹಿದ್ದೀನ್, 14 ಲಷ್ಕರ್ ಮತ್ತು ಒಟ್ಟು 5 ಅಲ್ಬದರ್ ಭಯೋತ್ಪಾದಕರು ಇದ್ದಾರೆ ಎನ್ನಲಾಗಿದೆ. ಇನ್ನು ಕುಲ್ಗಾಮ್‌ನಲ್ಲಿ 13, ಶ್ರೀನಗರದಲ್ಲಿ 8, ಅನಂತನಾಗ್‌ನಲ್ಲಿ 8 ಮತ್ತು ಬಾರಾಮುಲ್ಲಾದಲ್ಲಿ 5 ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಲಭಿಸಿದೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಎಲ್ಲಾ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಗೆ ಭದ್ರತಾ ಏಜೆನ್ಸಿಗಳು ಸಿದ್ಧತೆಯಲ್ಲಿ ತೊಡಗಿವೆ.

ಪಾಕಿಸ್ತಾನದ ಐಎಸ್‌ಐ (ISI) ಯುವಕರನ್ನು ಭಯೋತ್ಪಾದನೆಯ ಹಾದಿಗೆ ತಳ್ಳುವುದರೊಂದಿಗೆ ಗಡಿ ನಿಯಂತ್ರಣ ರೇಖೆ (LOC) ಮೂಲಕ ಕಣಿವೆಯೊಳಗೆ ಭಯೋತ್ಪಾದಕರನ್ನು ನುಸುಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ವರದಿಯೊಂದರ ಪ್ರಕಾರ, ಈ ವರ್ಷ ಇದುವರೆಗೆ 46 ಒಳನುಸುಳುವಿಕೆ ಯತ್ನಗಳು ನಡೆದಿವೆ. ಇದರಲ್ಲಿ ಸುಮಾರು 17 ಭಯೋತ್ಪಾದಕರು ಒಳನುಸುಳಿರುವ ಬಗ್ಗೆ ಮಾಹಿತಿ ಲಭಿಸಿದೆ. ಆದರೆ, ಇದುವರೆಗೆ ಎಷ್ಟು ಉಗ್ರರು ನುಸುಳಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

ಕಣಿವೆಯಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುವ ಪಾಕಿಸ್ತಾನಿ ಭಯೋತ್ಪಾದಕರ ಪಟ್ಟಿಯನ್ನು ಗುಪ್ತಚರ ಸಂಸ್ಥೆಗಳು ಸಿದ್ಧಪಡಿಸಿವೆ. ಈ ಪಟ್ಟಿಯ ಪ್ರಕಾರ, 38 ಪಾಕಿಸ್ತಾನಿ ಭಯೋತ್ಪಾದಕರು ಕಾಶ್ಮೀರದಲ್ಲಿದ್ದಾರೆ, ಇದು ಕಾಶ್ಮೀರದ ಶಾಂತಿ ಮತ್ತು ನೆಮ್ಮದಿಗೆ ಅಪಾಯವಾಗಿ ಪರಿಣಮಿಸಲಿದೆ. 38 ಉಗ್ರರ ಪೈಕಿ 27 ಭಯೋತ್ಪಾದಕರು ಲಷ್ಕರ್ ಮತ್ತು ಉಳಿದ 11 ಭಯೋತ್ಪಾದಕರು ಜೈಶ್-ಎ-ಮೊಹಮ್ಮದ್ ಸಂಘಟನೆಯವರಾಗಿದ್ದಾರೆ.

ಪಟ್ಟಿಯ ಪ್ರಕಾರ, ಈ ಪೈಕಿ 4 ಭಯೋತ್ಪಾದಕರು ಶ್ರೀನಗರದ ವಿವಿಧ ಪ್ರದೇಶಗಳಲ್ಲಿ, 3 ಕುಲ್ಗಾಮ್, 10 ಪುಲ್ವಾಮಾ, 10 ಬಾರಾಮುಲ್ಲಾ ಮತ್ತು 11 ಭಯೋತ್ಪಾದಕರು ಅಡಗಿಕೊಂಡಿರಬಹುದು ಎನ್ನಲಾಗಿದೆ.

ಗುಪ್ತಚರ ಸಂಸ್ಥೆಗಳಿಂದ ಪಡೆದ ಮಾಹಿತಿಯ ಪ್ರಕಾರ, ಪಾಕ್ ಆಕ್ರಮಿತ ಕಾಶ್ಮೀರದ (POK) ಭಯೋತ್ಪಾದಕ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಮಾಹಿತಿ ಪ್ರಕಾರ ಭಯೋತ್ಪಾದಕ ಶಿಬಿರಗಳಲ್ಲಿ 200-300 ಉಗ್ರರು ಇರುವ ಬಗ್ಗೆ ಮಾಹಿತಿ ಲಭಿಸಿದೆ.

English summary
Jammu and Kashmir Lieutenant Governor Manoj Sinha has said that the government of India is working out all possible ways to ensure terrorism is wiped out of the Valley after two years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion