• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೈಜಾಕ್ ಸಾಧ್ಯತೆ, ಜಮ್ಮು-ಕಾಶ್ಮೀರದಲ್ಲಿ ಎಲ್ಲಾ ವಿಮಾನಗಳ ಹಾರಾಟ ಸ್ಥಗಿತ

|

ಜಮ್ಮು ಮತ್ತು ಕಾಶ್ಮೀರ, ಫೆಬ್ರವರಿ 27: ವಿಮಾನಗಳ ಹೈಜಾಕ್ ಸಾಧ್ಯತೆ ಇರುವ ಕಾರಣ ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ.

ಪುಲ್ವಾಮಾ ದಾಳಿಯ ನಂತರ ಪ್ರತೀಕಾರಕ್ಕಾಗಿ ಹಂಬಲಿಸುತ್ತಿದ್ದ ಭಾರತೀಯ ಸೇನೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಲ್ ನಡೆಸಿದೆ.

ಪಾಕಿಸ್ತಾನ ಉಗ್ರರ ಸ್ವರ್ಗವೇ ಎಂದು ಹೇಳುವ ಬಾಲಾಕೋಟ್‌ನಲ್ಲಿ ಅಡಗಿ ಕುಳಿತಿದ್ದ ಉಗ್ರರ ಅಡಗುತಾಣಗಳ ಮೇಲೆ 1000 ಕೆಜಿಯ ಬಾಂಬ್ ನ್ನು ಎಸೆದಿತ್ತು.

'ಈಗ ನಿಮ್ಮ ಸರದಿ, ನಮ್ಮ ಅಚ್ಚರಿ ಎದುರಿಸಲು ಸಿದ್ಧರಾಗಿ' : ಪಾಕಿಸ್ತಾನ

12 ಮೀರಜ್ 2000 ಜೆಟ್ ವಿಮಾನವು ಬೆಳಿಗ್ಗೆ 3:30 ರ ಸುಮಾರಿಗೆ ಉಗ್ರ ನೆಲೆಯ ಮೇಲೆ ಬಾಂಬಿನ ಸುರಿಮಳೆಗರೆದಿದೆ ಎಂದು ಈ ವರದಿ ತಿಳಿಸಿದೆ.

ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ದಾರ್ ಎಂಬ ಆತ್ಮಾಹುತಿ ದಾಳಿಕೋರ ಕಾರ್ ಬಾಂಬ್ ಸ್ಫೋಟಿಸಿ 44 ಯೋಧರ ಬಲಿದಾನಕ್ಕೆ ಕಾರಣವಾಗಿದ್ದ. ಅದರ ಪ್ರತೀಕಾರ ಎಂಬಂತೆ ಭಾರತ ಈಗ ಉಗ್ರನೆಲೆ ಮೇಲೆ ದಾಳಿ ನಡೆಸಿದೆ.

ಉಗ್ರರ ಬೇಟೆಗೆ ವಾಯುಪಡೆ ಬಳಸಿದ್ದು 1.7 ಕೋಟಿ ಮೌಲ್ಯದ ಬಾಂಬ್!

ಜಮ್ಮು ಕಾಶ್ಮೀರದ ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹಾಗೆಯೇ ಜಮ್ಮು ಮತ್ತು ಕಾಶ್ಮೀರ, ಶ್ರೀನಗರ, ಲೇಹ್, ಪಠಾಣ್‌ಕೋಟ್‌ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಇಂದು ಪಾಕಿಸ್ತಾನದ ಮೂರು ಜೆಟ್‌ಗಳು ಭಾರತೀಯ ವಾಯು ರೇಖೆಯನ್ನು ಉಲ್ಲಂಘಿಸಿದೆ. ಜೊತೆಗೆ ವಿಮಾನಗಳು ಹೈಜಾಕ್ ಆಗುವ ಸಾಧ್ಯತೆ ಇರುವ ಕಾರಣ ಕಟ್ಟೆಚ್ಚರವಹಿಸಲಾಗಿದೆ.

ಭಾರತ ಪಾಕಿಸ್ತಾನ ನಡುವೆ ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.

English summary
Airports in Leh, Jammu, Srinagar and Pathankot on high alert. Several commercial flights suspended due to security reasons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X