ಜಮ್ಮು ವಿಮಾನ ನಿಲ್ದಾಣದಲ್ಲಿ ಸ್ಫೋಟ; ಬಾಂಬ್ ನಿಷ್ಕ್ರಿಯದಳ ದೌಡು

ಶ್ರೀನಗರ, ಜೂನ್ 27; ಜಮ್ಮು ವಿಮಾನ ನಿಲ್ದಾಣದ ತಾಂತ್ರಿಕ ವಿಭಾಗದಲ್ಲಿ ಸ್ಫೋಟ ಸಂಭವಿಸಿದೆ. ಬಾಂಬ್ ನಿಷ್ಕ್ರಿಯದಳ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸುತ್ತಿದೆ.

ಜಮ್ಮು ವಿಮಾನ ನಿಲ್ದಾಣ ಏರ್ ಫೋರ್ಸ್ ಏರಿಯಾದಲ್ಲಿ ತಡರಾತ್ರಿ 2 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ಕಾರಣವೇನು? ಎಂದು ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತದೆ ಎಂದು ವಾಯುಪಡೆ ಹೇಳಿದೆ.

ಜಮ್ಮು ಪೊಲೀಸರು ಘಟನೆ ಬಗ್ಗೆ ಮಾಹಿತಿ ನೀಡಿದ್ದು ವಾಯುಪಡೆಯಿಂದ ಎಫ್‌ಐಆರ್‌ಗಾಗಿ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಜಮ್ಮು ವಿಮಾನ ನಿಲ್ದಾಣದ ರನ್ ವೇ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ ವಾಯುಪಡೆಯ ಹಿಡಿತದಲ್ಲಿದೆ.

Jammu Airport

ಜಮ್ಮುವಿಗೆ ಬರುವ ಪ್ರಯಾಣಿಕ ವಿಮಾಣಗಳು ಸಹ ಇದೇ ಪ್ರದೇಶದಿಂದ ಹಾರಾಟ ನಡೆಸುತ್ತವೆ. ಸ್ಫೋಟಕ್ಕೆ ನಿಖರ ಕಾರಣ ಏನೂ ಎಂಬುದು ತಿಳಿದುಬಂದಿಲ್ಲ.

ಸ್ಫೋಟ ಸಂಭವಿಸಿದ ಸ್ಥಳದ ಪರಿಶೀಲನೆ ನಡೆಸಲು ಸಿಆರ್‌ಪಿಎಫ್ ಡಿಐಜಿ ಆಗಮಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹೇಳಿದ್ದಾರೆ.

ಸ್ಪೋಟ ಸಂಭವಿಸಿದ ಬಳಿಕವೂ ಜಮ್ಮು ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರ ಎಂದಿನಂತೆ ಇದೆ. ಎರಡು ವಿಮಾನಗಳನ್ನು ಮಾತ್ರ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಮ್ಮು ವಿಮಾನ ನಿಲ್ದಾಣಕ್ಕೆ ಎನ್‌ಐಎ ತಂಡ ಸಹ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದೆ. ಒಟ್ಟು ಎರಡು ಬಾರಿ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+