ಶ್ರೀನಗರ:ಮಗನ ಶವದ ಜತೆ 8 ತಾಸು ಬಸ್‌ನಲ್ಲೇ ಸಂಚರಿಸಿದ ತಂದೆ

ಶ್ರೀನಗರ, ನವೆಂಬರ್ 17: ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಸಿಗದೆ ಪುಟ್ಟ ಮಗನ ಶವವನ್ನು ಹೊತ್ತುಕೊಂಡು ತಂದೆ ಎಂಟು ತಾಸು ಬಸ್‌ನಲ್ಲೇ ಸಂಚರಿಸಿರುವ ಹೃದಯ ವಿದ್ರಾವಕ ಘಟನೆ ಜಮ್ಮುವಿನಲ್ಲಿ ನಡೆದಿದೆ.

ಎರಡೂವರೆ ವರ್ಷ ಮಗು ನ್ಯೂಮೋನಿಯಾದಿಂದ ಬಳಲುತ್ತಿತ್ತು. ಚಿಕಿತ್ಸೆ ಸಿಗದೆ ಜಮ್ಮುವಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯಿತು. ಆಗ ಆತ ಇರುತ್ತಿದ್ದ ಗ್ರಾಮಕ್ಕೆ ಆಂಬ್ಯುಲೆನ್ಸ್ ಬರಲು ಸಾಧ್ಯವಿಲ್ಲ ಎಂದು ಹೇಳಿದಾಗ ಜಮ್ಮುವಿನಿಂದ ಸುಮಾರು 230 ಕಿ.ಮೀ ದೂರವಿರುವ ಕ್ರಿಸ್ತ್ವಾರ್ ಗ್ರಾಮಕ್ಕೆ ಆ ಪುಟ್ಟ ಕಂದನ ಶವವನ್ನು ಹೊತ್ತುಕೊಂಡು ಅಳುತ್ತಲೇ ಬಸ್‌ನಲ್ಲಿ 8 ತಾಸು ಸಂಚರಿಸಿ ತನ್ನ ಹಳ್ಳಿ ತಲುಪಿದ್ದಾರೆ.

ತಂದೆ ಮಗುವಿನ ಶವವನ್ನು ಕೈಯಲ್ಲಿಟ್ಟುಕೊಂಡು ವೈದ್ಯರ ಬಳಿ ಪರಿಪರಿಯಾಗಿ ಬಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ, ಆಂಬ್ಯುಲೆನ್ಸ್‌ ನೀಡಲು ನಿರಾಕರಿಸಿದ್ದಾರೆ. ಹಾಗೆಯೇ ಸುಮಾರು 6 ಗಂಟೆಗಳ ಕಾಲ ಜಮ್ಮುವಿನ ಬಸ್‌ಸ್ಟ್ಯಾಂಡ್ ಸಮೀಪ ಬೇರೆ ವಾಹನಗಳಿಗಾಗಿ ಹುಡುಕಿದ್ದಾರೆ ಆದರೆ ಯಾವುದೇ ವಾಹನ ಸಿಗಲಿಲ್ಲ.

Denied Ambulance, Father Forced to ‘Secretly’ Carry Baby’s Dead Body in Bus

ಹೆಗಲ ಮೇಲೆ ಮಗುವನ್ನು ಹೊತ್ತುಕೊಂಡು ಅದರ ಮೇಲೆ ಬೆಡ್ ಶೀಟ್ ಹೊದಿಸಿ ಯಾರಿಗೂ ಸುಳಿವು ನೀಡದಂತೆ ಎಂಟು ಗಂಟೆಗಳ ಕಾಲ ಬಸ್‌ನಲ್ಲಿ ಸಂಚರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+