• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಅಮರನಾಥ ಗುಹೆ ಬಳಿ ಮೇಘಸ್ಫೋಟ: 10 ಸಾವು, 40ಕ್ಕೂ ಹೆಚ್ಚು ಮಂದಿ ಕಾಣೆ

|
Google Oneindia Kannada News

ಶ್ರೀನಗರ್, ಜುಲೈ 8: ಹಿಂದೂಗಳ ಪವಿತ್ರ ಯಾತ್ರಾ ಸ್ಥಳವಾಗಿರುವ ಅಮರನಾಥ ಮಂದಿರ ಇರುವ ಗುಹೆ ಬಳಿ ಮೇಘ ಸ್ಫೋಟ ದುರಂತ ಘಟನೆ ಸಂಭವಿಸಿದ್ದು, ಹತ್ತು ಮಂದಿ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. 40ಕ್ಕೂ ಹೆಚ್ಚು ಮಂದಿ ಕಾಣೆಯಾಗಿರುವುದು ತಿಳಿದುಬಂದಿದೆ. ಅಮರನಾಥ ಯಾತ್ರೆಯನ್ನು ಮತ್ತೊಮ್ಮೆ ಸ್ಥಗಿತಗೊಳಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಅಮರನಾಥದಲ್ಲಿ ಶುಕ್ರವಾರ ಸಂಜೆ 5:30ಕ್ಕೆ ಈ ದುರಂತ ಸಂಭವಿಸಿದೆ. ಯಾತ್ರೆಯ ಹಾದಿಯುದ್ಧಕ್ಕೂ ಇದ್ದ ಅನೇಕ ಸಾಮುದಾಯಿಕ ಅಡುಗೆಗೃಹಗಳು ಮತ್ತು ಡೇರೆಗಳು ಹಾನಿಯಾಗಿವೆ.

2022ರ ಅಮರನಾಥ ಯಾತ್ರೆ ತಾತ್ಕಾಲಿಕವಾಗಿ ರದ್ದು2022ರ ಅಮರನಾಥ ಯಾತ್ರೆ ತಾತ್ಕಾಲಿಕವಾಗಿ ರದ್ದು

ಗಾಯಾಳುಗಳನ್ನು ರಕ್ಷಿಸಲು ಕಾರ್ಯ ನಡೆಯುತ್ತಿದೆ. ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಹಾಗೂ ಇತರೆ ಸಂಸ್ಥೆಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ. ಪ್ರಾಥಮಿಕ ಮಾಹಿತಿ ಪ್ರಕಾರ 10 ಮಂದಿ ಮೇಘ ಸ್ಫೋಟ ಘಟನೆಯಲ್ಲಿ ಬಲಿಯಾಗಿರುವುದು ಮತ್ತು ಹಲವು ಮಂದಿ ನಾಪತ್ತೆಯಾಗಿರುವುದರ ಮಾಹಿತಿ ಸಿಕ್ಕಿದೆ.

"ಮಳೆ ಸುರಿಯುವುದು ಮುಂದುವರಿದಿದೆಯಾದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಇಡೀ ಪ್ರದೇಶ ಜಲಾವೃತವಾಗಿದ್ದು ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ವಾತಾವರಣ ಸಹಜ ಸ್ಥಿತಿಗೆ ಬಂದ ಬಳಿಕ ತಾತ್ಕಾಲಿಕ ವ್ಯವಸ್ಥೆಯನ್ನು ಅಣಿಗೊಳಿಸಿ, ನಾಳೆ ಶನಿವಾರ ಯಾತ್ರೆಯನ್ನು ಮರುಚಾಲನೆಗೊಳಿಸಲಾಗುವುದು" ಎಂದು ರಕ್ಷಣಾ ಕಾರ್ಯದಲ್ಲಿರುವ ಇಂಡೋ ಟೆಬೆಟನ್ ಬಾರ್ಡರ್ ಪೊಲೀಸ್ ಪಡೆಯ ವಕ್ತಾರರು ಹೇಳಿದ್ದಾರೆ.

ಮೇಘಸ್ಫೋಟ ಎಂದರೇನು?
ಒಂದು ಸೀಮಿತ ಪ್ರದೇಶದಲ್ಲಿ ಕಡಿಮೆ ಅವಧಿಯಲ್ಲಿ ಅತಿ ಭೀಕರವಾಗಿ ಮಳೆ ಸುರಿಯುವುದಕ್ಕೆ ಕ್ಲೌಡ್ ಬರ್ಸ್ಟ್ ಅಥವಾ ಮೇಘ ಸ್ಫೋಟ ಎನ್ನುವುದು. ಅಮರನಾಥ ಗುಹೆ ಪ್ರದೇಶದಲ್ಲಿ ಶುಕ್ರವಾರ ಸಂಜೆ ಮೇಘ ಸ್ಫೋಟ ಸಂಭವಿಸಿದ ಬಳಿಕ ಗುಹೆ ಬಳಿಗೆ ಮೇಲಿನ ಪ್ರದೇಶಗಳಿಂದ ಭಾರೀ ಪ್ರಮಾಣದಲ್ಲಿ ಮಳೆ ನೀರು ನುಗ್ಗಿದೆ. ಇದರಿಂದ ಇಡೀ ಪ್ರದೇಶ ಜಲಾವೃತವಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆ: ಭೂಕುಸಿತ, ಪ್ರವಾಹದಿಂದ ನಲುಗಿದ ಕಣಿವೆ ರಾಜ್ಯಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆ: ಭೂಕುಸಿತ, ಪ್ರವಾಹದಿಂದ ನಲುಗಿದ ಕಣಿವೆ ರಾಜ್ಯ

ಎರಡು ವರ್ಷಗಳ ಬಳಿಕ ಆರಂಭಗೊಂಡಿದ್ದ ಯಾತ್ರೆ
ಕೋವಿಡ್ ಕಾರಣಕ್ಕೆ 2020ರಿಂದಲೂ ಅಮರನಾಥ ಯಾತ್ರೆ ರದ್ದಾಗಿತ್ತು. ಜೂನ್ 30ರಂದು ಯಾತ್ರೆಗೆ ಚಾಲನೆ ಕೊಡಲಾಗಿತ್ತು. ಇಲ್ಲಿಯವರೆಗೆ 72 ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ಇಲ್ಲಿ ಅಮರನಾಥನ ದರ್ಶನ ಪಡೆದು ಹೋಗಿದ್ಧಾರೆ.

ಇಲ್ಲಿ ಹವಾಮಾನ ವೈಪರಿತ್ಯ ಇದ್ದದ್ದರಿಂದ ಈ ವಾರದಲ್ಲಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈಗ ಮೇಘ ಸ್ಫೋಟ ದುರಂತವಾಗಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಯಾತ್ರೆ ಸ್ಥಗಿತಗೊಂಡಿದೆ.

(ಒನ್ಇಂಡಿಯಾ ಸುದ್ದಿ)

ರಾಷ್ಟ್ರೀಯ ಸಹಾಯವಾಣಿ ಸಂಖ್ಯೆಗಳು:

NDRF: 011-23438252, 011-23438253

Kashmir Divisional Helpline: 0194-2496240

Shrine Board Helpline: 0194-2313149

Joint Police Control Room Pahalgam

9596779039

9797796217

01936243233

01936243018

Police control room Anantnag

01932225870

01932222870

Shri Amarnath Shrine Board

NDRF: 011-23438252, 011-23438253

Kashmir Divisional Helpline: 0194-2496240

English summary
Ten people were killed and 40 are missing after a cloudburst near the holy cave shrine of Amarnath in Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X