• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶ್ರೀನಗರ ಸೆಕ್ಟರ್ ಸಿಆರ್‌ಪಿಎಫ್‌ಗೆ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಮುಖ್ಯಸ್ಥೆ

|

ನವದೆಹಲಿ, ಸೆಪ್ಟೆಂಬರ್ 1: ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿನ ಉಗ್ರರ ಹಾವಳಿ ಇರುವ ಶ್ರೀನಗರ ವಲಯದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಇನ್‌ಸ್ಪೆಕ್ಟರ್ ಜನರಲ್ ಆಗಿ ಮಹಿಳಾ ಐಪಿಎಸ್ ಅಧಿಕಾರಿಯನ್ನು ನೇಮಿಸಲಾಗಿದೆ.

ಭಯೋತ್ಪಾದಕರ ಹಾವಳಿ ಅತಿಯಾಗಿರುವ ಈ ಪ್ರದೇಶದಲ್ಲಿನ ಐಜಿಯಾಗಿ ನೇಮಕಗೊಂಡ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಕೀರ್ತಿಗೆ ಚಾರು ಸಿನ್ಹಾ ಭಾಜನರಾಗಿದ್ದಾರೆ.

ಎನ್‌ಕೌಂಟರ್‌: ಲಷ್ಕರ್ ಕಮಾಂಡರ್ ಸಜ್ಜದ್‌ನನ್ನು ಹತ್ಯೆಗೈದ ಯೋಧರು

1996ರ ಬ್ಯಾಚ್‌ನ ತೆಲಂಗಾಣ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿರುವ ಚಾರು ಸಿನ್ಹಾ, ಇನ್‌ಸ್ಪೆಕ್ಟರ್ ಜನರಲ್ ಆಗಿ ಶ್ರೀನಗರ ಸೆಕ್ಟರ್‌ನ ಸಿಆರ್‌ಪಿಎಫ್ ಪಡೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಅಂದಹಾಗೆ, ಶ್ರೀನಗರದ ಭಯೋತ್ಪಾದನೆ ಪೀಡಿತ ಪ್ರದೇಶದಲ್ಲಿ ಕೆಲಸ ಮಾಡುವ ಸವಾಲು ಮೊದಲ ಬಾರಿಯಾದರೂ ಅವರಿಗೆ ಕಠಿಣ ಸವಾಲುಗಳು ಹೊಸತಲ್ಲ. ಈ ಹಿಂದೆ ಅವರು ನಕ್ಸಲ್ ಪೀಡಿತ ಬಿಹಾರ ಸೆಕ್ಟರ್‌ನ ಸಿಆರ್‌ಪಿಎಫ್ ಐಜಿಯಾಗಿ ಕೆಲಸ ಮಾಡಿದ್ದರು.

ಅವರ ನಾಯಕತ್ವದಲ್ಲಿ ಬಿಹಾರದಲ್ಲಿ ಅನೇಕ ನಕ್ಸಲ್ ನಿಗ್ರಹ ಕಾರ್ಯಾಚರಣೆಗಳು ನಡೆದಿದ್ದವು. ಬಳಿಕ ಅವರನ್ನು ಜಮ್ಮುವಿನ ಸಿಆರ್‌ಪಿಎಫ್‌ಗೆ ವರ್ಗಾವಣೆ ಮಾಡಲಾಗಿತ್ತು. ಅಲ್ಲಿ ಕೂಡ ಅವರು ಅನೇಕ ಯಶಸ್ವಿ ಕಾರ್ಯಗಳನ್ನು ನಡೆಸಿದ್ದರು. ಈಗ ಅವರನ್ನು ಶ್ರೀನಗರ ಸೆಕ್ಟರ್‌ಗೆ ನೇಮಕ ಮಾಡಿ ಸೋಮವಾರ ಆದೇಶಿಸಲಾಗಿದೆ.

ಉಗ್ರರ ದಾಳಿ: ಇಬ್ಬರು ಸಿಆರ್‌ಪಿಎಫ್, ಓರ್ವ ಪೊಲೀಸ್ ಅಧಿಕಾರಿ ಹುತಾತ್ಮ

ಶ್ರೀನಗರದ ಸಿಆರ್‌ಪಿಎಫ್ ಸೆಕ್ಟರ್ 2005ರಲ್ಲಿ ಆರಂಭವಾಗಿತ್ತು. ಇದುವರೆಗೂ ಐಜಿ ಮಟ್ಟದಲ್ಲಿ ಯಾವುದೇ ಮಹಿಳಾ ಅಧಿಕಾರಿ ಇಲ್ಲಿ ಕೆಲಸ ಮಾಡಿರಲಿಲ್ಲ. ಜಮ್ಮು ಕಾಶ್ಮೀರ ಪೊಲೀಸ್ ಮತ್ತು ಭಾರತೀಯ ಸೇನೆಯ ಜತೆಗೆ ಇಲ್ಲಿ ಸಿಆರ್‌ಪಿಎಫ್ ಅನೇಕ ಭಯೋತ್ಪಾದನಾ ನಿಗ್ರಹ ಕಾರ್ಯಾಚರನೆಗಳನ್ನು ನಡೆಸುತ್ತಿದೆ.

ಸಿಆರ್‌ಪಿಎಫ್‌ನ ಎರಡು ರೇಂಜ್‌ಗಳು, 22 ಎಕ್ಸಿಕ್ಯುಟಿವ್ ಘಟಕಗಳು ಮತ್ತು ಮೂರು ಮಹಿಳಾ ತುಕಡಿಗಳು ಮೂರು ಜಿಲ್ಲೆಗಳು ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

English summary
Charu Sinha appointed as the head of the terrorist-affected Srinagar sector for CRPF and become the first female IPS officer of the sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X