ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2022ರ ಅಮರನಾಥ ಯಾತ್ರೆ ತಾತ್ಕಾಲಿಕವಾಗಿ ರದ್ದು

|
Google Oneindia Kannada News

ಶ್ರೀನಗರ, ಜು.5: ಎರಡು ವರ್ಷಗಳ ಅಂತರ ಬಳಿಕ ವಾರ್ಷಿಕ ಯಾತ್ರೆ ಆರಂಭವಾಗಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಹಲ್ಗಾಮ್‌ನ ನುನ್ವಾನ್ ಬೇಸ್ ಕ್ಯಾಂಪ್‌ನಿಂದ ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಶಿವಲಿಂಗವನ್ನು ಹೊಂದಿರುವ ಗುಹೆ ದೇವಾಲಯದ ಕಡೆಗೆ ಯಾತ್ರಾರ್ಥಿಗಳಿಗೆ ತೆರಳಲು ಅನುಮತಿಸಲಾಗುವುದಿಲ್ಲ.

ಅಮರನಾಥ ಯಾತ್ರೆ: ಹಿಮಾಲಯದ ಪವಿತ್ರ ಗುಹೆ ದೇಗುಲಕ್ಕೆ ಯಾತ್ರೆ ಪ್ರಾರಂಭ ಅಮರನಾಥ ಯಾತ್ರೆ: ಹಿಮಾಲಯದ ಪವಿತ್ರ ಗುಹೆ ದೇಗುಲಕ್ಕೆ ಯಾತ್ರೆ ಪ್ರಾರಂಭ

ಪವಿತ್ರ ಗುಹೆಗೆ ತೀರ್ಥಯಾತ್ರೆಯು ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನ ನುನ್ವಾನ್ ಶಿಬಿರ ಮತ್ತು ಗಂಡರ್ಬಾಲ್ ಜಿಲ್ಲೆಯ ಬಾಲ್ಟಾಲ್‌ನ ಎರಡು ಬ್ಯಾಚ್‌ಗಳಿಂದ ಪ್ರಾರಂಭವಾಯಿತು ಎಂದು ಹೇಳಿದ್ದಾರೆ.

Amarnath Yatra Suspended Due to Uncertain Weather

ಅಮರನಾಥ ಯಾತ್ರಿಕರ ಮೊದಲ ಬ್ಯಾಚ್ ಕಳೆದ ವಾರ ಗುರುವಾರ ಪಹಲ್ಗಾಮ್‌ನ ಮೂಲ ಶಿಬಿರವನ್ನು ತಲುಪಿತ್ತು. ಜೂನ್ 30 ರಂದು ಪ್ರಾರಂಭವಾಗುವ ಮೊದಲು ಕೊರೋನಾ ವೈರಸ್ ಕಾರಣದಿಂದಾಗಿ ತೀರ್ಥಯಾತ್ರೆಯನ್ನು ಎರಡು ವರ್ಷಗಳವರೆಗೆ ಸ್ಥಗಿತಗೊಳಿಸಲಾಗಿತ್ತು. ಅಂದಿನಿಂದ 72,000 ಕ್ಕೂ ಹೆಚ್ಚು ಯಾತ್ರಿಕರು ದೇಗುಲದಲ್ಲಿ ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಿದ್ದಾರೆ.

ಅಮರನಾಥ ಯಾತ್ರೆ ಆರಂಭ; ಮೊದಲ ತಂಡಕ್ಕೆ ಲೇ. ಗವರ್ನರ್‌ ಚಾಲನೆಅಮರನಾಥ ಯಾತ್ರೆ ಆರಂಭ; ಮೊದಲ ತಂಡಕ್ಕೆ ಲೇ. ಗವರ್ನರ್‌ ಚಾಲನೆ

ರಕ್ಷಾ ಬಂಧನದ ಸಂದರ್ಭದಲ್ಲಿ ಯಾತ್ರೆಯು ಆಗಸ್ಟ್ 11 ರಂದು ಕೊನೆಗೊಳ್ಳಲಿದೆ. ಜೂ. 29ರಂದು ಜಮ್ಮು ಕಾಶ್ಮೀರದ ಲೇ. ಗವರ್ನರ್‌ ಮನೋಜ್‌ ಸಿನ್ಹಾ ಅವರು ಭಗವತಿ ನಗರದ ಬೇಸ್‌ ಕ್ಯಾಂಪ್‌ ಶಿಬಿರದಿಂದ ಕಾಶ್ಮೀರದ ಪಹಲ್ಗಾಮ್ ಮತ್ತು ಬಲ್ಟಾಲ್ ಬೇಸ್ ಕ್ಯಾಂಪ್‌ಗಳಿಗೆ ವಾರ್ಷಿಕ ಅಮರನಾಥ ಯಾತ್ರೆಗಾಗಿ 4,890 ಯಾತ್ರಿಕರ ಮೊದಲ ಬ್ಯಾಚ್‌ಗೆ ಚಾಲನೆ ನೀಡಿದ್ದರು.

Amarnath Yatra Suspended Due to Uncertain Weather

ಗುಹಾ ದೇಗುಲ ಅಮರನಾಥಕ್ಕೆ 43 ದಿನಗಳ ಯಾತ್ರೆ ಕಾಶ್ಮೀರದ ಎರಡು ಬೇಸ್ ಕ್ಯಾಂಪ್‌ಗಳಿಂದ ಪ್ರಾರಂಭವಾಗಿತ್ತು. ಪವಿತ್ರ ಅಮರನಾಥ ಯಾತ್ರೆಗೆ ಇದುವರೆಗೂ 3 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು.

ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಲ್ಲಿ 48 ಕಿ.ಮೀ. ನುನ್ವಾನ್ ಮತ್ತು ಮಧ್ಯ ಕಾಶ್ಮೀರದ ಗಂಡರ್‌ಬಾಲ್‌ನಲ್ಲಿ 14-ಕಿಮೀ ಚಿಕ್ಕದಾದ ಬಾಲ್ಟಾಲ್‌ನಿಂದ ಯಾತ್ರೆಯು ಅವಳಿ ಮಾರ್ಗಗಳಿಂದ ಪ್ರಾರಂಭವಾಗಿತ್ತು. ಸಾಧುಗಳು ಸೇರಿದಂತೆ ಯಾತ್ರಾರ್ಥಿಗಳ ಮೊದಲ ಬ್ಯಾಚ್ ಜಮ್ಮುವಿನ ಭಗವತಿ ನಗರ ಮತ್ತು ರಾಮಮಂದಿರದಿಂದ ಕಾಶ್ಮೀರದ ಅವಳಿ ಬೇಸ್ ಕ್ಯಾಂಪ್‌ಗಳಿಗೆ ಯಾತ್ರೆಯ ಅಧಿಕೃತ ಆರಂಭದ ಒಂದು ದಿನ ಮುಂಚಿತವಾಗಿ ಹೊರಟಿತ್ತು.

Recommended Video

ಮಹಾರಾಷ್ಟ್ರ ಹೊಸ ಸಿ.ಎಂ ಇಂಧನ ತೆರಿಗೆ ಕಡಿತಗೊಳಿಸಿದರು | Oneindia Kannada

English summary
The annual Amarnath Yatra 2022 was called off due to inclement weather said officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X