ವಿಡಿಯೋ: ಮತ್ತೆ ಬಂದ್ರು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್
ಶ್ರೀನಗರ, ಮೇ 04: ಪಾಕಿಸ್ತಾನದ ಯುದ್ಧವಿಮಾನಗಳನ್ನು ಹಿಮ್ಮೆಟಿಸಿ ಪಾಕಿಸ್ತಾನದ ಸೇನೆಯ ವಶವಾಗಿ ಎರಡು ದಿನದ ನಂತರ ಭಾರತಕ್ಕೆ ವಾಪಸ್ಸಾಗಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರು ಬಹು ದಿನಗಳ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಸೈನ್ಯದ ತಮ್ಮ ಸಹೋದ್ಯೋಗಿಗಳೊಂದಿಗೆ ಕುಶಲೋಪರಿ ವಿಚಾರಿಸುತ್ತಿರುವ ಅಭಿನಂದನ್ ಅವರ ವಿಡಿಯೋ ಬಿಡುಗಡೆ ಆಗಿದೆ. ವಿಡಿಯೋದಲ್ಲಿ ಅಭಿನಂದನ್ ಅವರು ತಮ್ಮೆಲ್ಲ ಸಹೋದ್ಯೋಗಿಗಳೊಂದಿಗೆ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದಾರೆ.
ಸೈನಿಕರನ್ನು ಉದ್ದೇಶಿಸಿ ಮಾತನಾಡಿರುವ ಅಭಿನಂದನ್, ನಾನೀಗ ನಿಮ್ಮೊಂದಿಗೆ ಚಿತ್ರ ತೆಗೆಸಿಕೊಂಡಿದ್ದು, ನಿಮ್ಮ ಕುಟುಂಬಗಳಿಗಾಗಿ, ಅವರ ಹಾರೈಕೆಯಿಂದ ನಾನು ಬೇಗನೆ ಹುಷಾರಾಗಲಿ ಎಂದು ಅವರು ಹಾರೈಸಿದ್ದಾರೆ ಹಾಗಾಗಿ ಅವರಿಗಾಗಿ ನಾನು ನಿಮ್ಮೊಂದಿಗೆ ಚಿತ್ರ ತೆಗೆಸಿಕೊಂಡಿದ್ದೇನೆ ಎಂದು ಅಭಿನಂದನ್ ಹೇಳಿದ್ದಾರೆ.

ಅಭಿನಂದನ್ ಅವರ ಜೊತೆ ಹಲವು ಸೈನಿಕರು ಚಿತ್ರಗಳನ್ನು ತೆಗೆಸಿಕೊಂಡ ಬಳಿಕ ಭಾರತ್ ಮಾತಾ ಕಿ ಜೈ ಘೋಷಣೆಗಳು ಮೊಳಗುತ್ತವೆ, ಆ ನಂತರ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಅಭಿನಂದನ್ ಅವರು ಹೊರಡುವ ದೃಶ್ಯ ವಿಡಿಯೋದಲ್ಲಿದೆ.
ಅಭಿನಂದನ್ ಅವರು ಪಾಕಿಸ್ತಾನದಿಂದ ಬಿಡುಗಡೆ ಆದ ಬಳಿಕ ಅವರ ಕುರಿತು ಹೆಚ್ಚಿನ ಮಾಹಿತಿಗಳು ಹೊರ ಜಗತ್ತಿಗೆ ಗೊತ್ತಾಗಿರಲಿಲ್ಲ, ಅವರು ಮತ್ತೆ ಯುದ್ಧ ವಿಮಾನ ಏರಲಿದ್ದಾರೆ ಎಂಬ ಮಾಹಿತಿಯಷ್ಟೆ ಹತ್ತು ದಿನದ ಹಿಂದೆ ಸಿಕ್ಕಿತ್ತು, ಅವರು ಈಗ ಸೈನ್ಯದ ನೆಲೆಯಲ್ಲಿ ಸಮವಸ್ತ್ರದಲ್ಲಿ ಕಾಣಿಸಿಕೊಂಡು ನೋಡಿದರೆ ಅವರು ಈಗಾಗಲೇ ಮರಳಿ ಉದ್ಯೋಗಕ್ಕೆ ಹಾಜರಾಗಿದ್ದಾರೆ ಎಂಬುದು ಗೊತ್ತಾಗುತ್ತಿದೆ.
#WATCH Viral video from Jammu & Kashmir: Wing Commander Abhinandan Varthaman interacting with his colleagues in Jammu and Kashmir. pic.twitter.com/rLwC4d1GUA
— ANI (@ANI) May 4, 2019
ಭಾರತದ ಮೇಲೆ ದಾಳಿಗೆ ಬಂದಿದ್ದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಬೆನ್ನಟ್ಟಿ ಹೋಗಿದ್ದ ಅಭಿನಂದನ್ ಅವರ ವಿಮಾನವು ತಾಂತ್ರಿಕ ಕಾರಣಗಳಿಂದಾಗಿ ಪಾಕಿಸ್ತಾನದಲ್ಲಿ ಧರೆಗುರುಳಿತ್ತು, ಆಗ ಅಭಿನಂದನ್ ಅವರು ಪಾಕಿಸ್ತಾನದ ಸೈನ್ಯಕ್ಕೆ ಸೆರೆಸಿಕ್ಕಿದ್ದರು, ಅಲ್ಲಿ ಅವರು ಯಾವುದೇ ಮಾಹಿತಿಗಳನ್ನು ಬಿಟ್ಟುಕೊಡದೆ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದರು.
ಎರಡು ದಿನಗಳ ಬಳಿಕ ಇಮ್ರಾನ್ ಖಾನ್ ನೇತೃತ್ವದ ಪಾಕ್ ಸರ್ಕಾರವು ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಿತ್ತು.











Click it and Unblock the Notifications