ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಕಿಯ ಪ್ರಾಣ ರಕ್ಷಣೆಗಾಗಿ ಪ್ರವಾಹವನ್ನೂ ಲೆಕ್ಕಿಸದ CRPF ಯೋಧರು

|
Google Oneindia Kannada News

ಶ್ರೀನಗರ, ಜುಲೈ 16: ಪ್ರವಾಹ ಉಕ್ಕುತ್ತಿದ್ದ ನದಿಯಲ್ಲಿ ಮುಳುಗುತ್ತಿದ್ದ 14 ವರ್ಷ ವಯಸ್ಸಿನ ಬಾಲಕಿಯನ್ನು ಭಾರತೀಯ ಸೇನೆಯ ಯೋಧರು ಕಾಪಾಡಿದ ಮೈನವಿರೇಳಿಸುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ.

ಕಣಿವೆ ರಾಜ್ಯದ 176 ನೇ ಬೆಟಾಲಿಯನ್ ನ ಇಬ್ಬರು ಸಿಆರ್ ಪಿಎಫ್(ಕೇಂದ್ರ ಮೀಸಲು ಪೊಲೀಸ್ ಪಡೆ) ಸಿಬ್ಬಂದಿ ನದಿಗೆ ಧುಮುಕಿ, ಮುಳುಗುತ್ತಿದ್ದ ಬಾಲಕಿಯನ್ನು ಕಾಪಾಡಿದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.

ಹುತಾತ್ಮನ ಮಗನನ್ನು ಹೊತ್ತು ಕಣ್ಣೀರಿಟ್ಟ ಪೊಲೀಸ್: ವೈರಲ್ ಚಿತ್ರ ಹುತಾತ್ಮನ ಮಗನನ್ನು ಹೊತ್ತು ಕಣ್ಣೀರಿಟ್ಟ ಪೊಲೀಸ್: ವೈರಲ್ ಚಿತ್ರ

ನಗೀನಾ ಎಂಬ ಬಾಲಕಿ ಜಮ್ಮು ಮತ್ತು ಕಾಶ್ಮೀರದ ಬರಮುಲ್ಲಾ ಬಳಿ ಅಚಾನಕ್ಕಾಗಿ ನೀರಿಗೆ ಬಿದ್ದಿದ್ದರು. ನೆರವಿಗಾಗಿ ಕೂಗುತ್ತಿದ್ದ ಆಕೆಯನ್ನು ಕಂಡ ಎಂಜಿ ನಾಯದಡು ಮತ್ತು ನಲ್ಲಾ ಉಪೇಂದ್ರ ಎಂಬ ಇಬ್ಬರು ಸಿಆರ್ ಪಿಎಫ್ ಸಿಬ್ಬಂದಿ ಒಂದು ಕ್ಷಣವೂ ಯೋಚಿಸದೆ, ನೀರಿಗೆ ಧುಮುಕಿ, ಆಕೆಯನ್ನು ಕಾಪಾಡಿದ್ದಾರೆ.

2 brave CRPF soldiers saved a girl from a flooding river in Kashmir

ನಗೀನಾ ಅವರನ್ನು ಸದ್ಯಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಪುಲ್ವಾಮಾ ಉಗ್ರ ದಾಳಿ, ಗಾಯಗೊಂಡಿದ್ದ ಇಬ್ಬರು ಯೋಧರು ಹುತಾತ್ಮ ಪುಲ್ವಾಮಾ ಉಗ್ರ ದಾಳಿ, ಗಾಯಗೊಂಡಿದ್ದ ಇಬ್ಬರು ಯೋಧರು ಹುತಾತ್ಮ

"ಸಾಟಿಯಿಲ್ಲದ ಧೈರ್ಯ ಮತ್ತು ಹುರುಪು ಒಂದು ಅಮೂಲ್ಯ ಜೀವವನ್ನು ಉಳಿಸಿತು" ಎಂದು ಸಿಆರ್ ಪಿಎಫ್ ಟ್ವೀಟ್ ಮಾಡಿದೆ.

English summary
Constable M. G. Naidu and Constable N. Upendra of 176 Bn saved life of a 14 year old girl drowning in the river in Kashmir. The video becomes viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X