ಜಮ್ಮು-ಕಾಶ್ಮೀರದ ತ್ರಾಲ್‌ನಲ್ಲಿ ಎನ್‌ಕೌಂಟರ್: ಓರ್ವ ಉಗ್ರನ ಹತ್ಯೆ
ಶ್ರೀನಗರ, ಜೂನ್ 26: ಜಮ್ಮು ಮತ್ತು ಕಾಶ್ಮೀರದ ತ್ರಾಲ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರರನ್ನು ಹತ್ಯೆಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅವಂತಿಪೊರಾ ಜಿಲ್ಲೆಯಲ್ಲಿ ಈ ಎನ್‌ಕೌಂಟರ್ ನಡೆದಿದೆ. ತ್ರಾಲ್‌ನ ಚೆವಾ ಉಳ್ಳಾರ್ ಪ್ರದೇಶದಲ್ಲಿ ಗುರುವಾರ ಸಂಜೆ ಎನ್‌ಕೌಂಟರ್ ನಡೆದಿತ್ತು.ಗುರುತು ಪತ್ತೆಯಾಗದ ಓರ್ವ ಉಗ್ರರನ್ನು ಹತ್ಯೆ ಮಾಡಲಾಗಿದೆ. ಆಪರೇಷನ್ ಮುಂದುವರೆದಿದೆ.

ರಾಜ್ಯ ಪೊಲೀಸರು, ಭಾರತೀಯ ಸೇನೆಯ 42ನೇ ರಾಷ್ಟ್ರೀಯ ರೈಫಲ್ ಪಡೆ,ಕೇಂದ್ರ ಪೊಲೀಸ್ ಮೀಸಲು ಪಡೆ ಸೇರಿ ಈ ಎನ್‌ಕೌಂಟರ್ ನಡೆಸಿದ್ದರು. ಅಡಗಿದ್ದ ಉಗ್ರರು ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದರು, ಅದಕ್ಕೆ ಪ್ರತಿಯಾಗಿ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಉಗ್ರ ಸಾವನ್ನಪ್ಪಿದ್ದಾನೆ.












Click it and Unblock the Notifications