ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ಜಿಂಬಾಬ್ವೆ ಮತ್ತು ನೆದರ್ಲ್ಯಾಂಡ್

|
Google Oneindia Kannada News

ಶುಕ್ರವಾರ (ಜುಲೈ 15) ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್ ಕ್ವಾಲಿಫೈಯರ್ ಬಿ ಗುಂಪಿನ ಸೆಮಿಫೈನಲ್‌ನಲ್ಲಿ ಜಿಂಬಾಬ್ವೆ ಮತ್ತು ನೆದರ್‌ಲ್ಯಾಂಡ್‌ಗಳು ಗೆಲುವು ಸಾಧಿಸುವ ಮೂಲಕ ಟಿ20 ವಿಶ್ವಕಪ್ 2022 ಗೆ ಅರ್ಹತೆ ಪಡೆದ ಕೊನೆಯ ಎರಡು ತಂಡಗಳಾಗಿವೆ.

ಸೆಮಿಫೈನಲ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡ ಯುಎಸ್‌ಎ ತಂಡದ ವಿರುದ್ದ ಅರ್ಹತೆಗಾಗಿ ಸೆಣೆಸಾಡಿಸಿತು. ತಮ್ಮ ಮೊದಲ ಜಾಗತಿಕ ಐಸಿಸಿ ಟೂರ್ನಮೆಂಟ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿದ್ದ ಯುಎಸ್‌ಎಗೆ ಇದು ಕನಸಿನ ಆರಂಭವಾಗಿತ್ತು. ಮೊದಲು ಬ್ಯಾಟ್ ಮಾಡಿದ ಯುಎಸ್‌ಎ ತಂಡ 19.4 ಓವರ್‍‌ಗಳಲ್ಲಿ 138 ರನ್ ಗಳಿಸಿ ಆಲೌಟ್ ಆಯಿತು. ಇನ್ ಫಾರ್ಮ್ ಸ್ಟೀವನ್ ಟೇಲರ್ ಮತ್ತು ನಾಯಕ ಮೊನಾಂಕ್ ಪಟೇಲ್ ಕೇವಲ ಐದು ಓವರ್‌ಗಳಲ್ಲಿ 51 ರನ್ ಆರಂಭಿಕ ಜೊತೆಯಾಟದೊಂದಿಗೆ ಭದ್ರ ಬುನಾದಿ ಹಾಕಿದರು. ಬೃಹತ್ ಮೊತ್ತ ಕಲೆ ಹಾಕುವ ಸೂಚನೆ ನೀಡಿದ್ದ ಯುಎಸ್‌ಎ ಟೇಲರ್ ಔಟ್ ಆಗುತ್ತಿದ್ದಂತೆ, ದಿಢೀರ್ ಕುಸಿತ ಕಂಡಿತು.

ಇದೇ ವರ್ಷ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಮದುವೆ?ಇದೇ ವರ್ಷ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಮದುವೆ?

ಸಾಮಾನ್ಯ ಮೊತ್ತವನ್ನು ಬೆನ್ನತ್ತಿದ ನೆದರ್ಲೆಂಡ್ಸ್ ತನ್ನ ಆರಂಭಿಕ ಆಟಗಾರ ಸ್ಟೀಫನ್ ಮೈಬರ್ಗ್ ಡಕೌಟ್‌ ಆದರು. ಮ್ಯಾಕ್ಸ್ ಒ'ಡೌಡ್ ಮತ್ತು ಬಾಸ್ ಡಿ ಲೀಡೆ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರು. ಆರಂಭಿಕ ಆಘಾತದಿಂದ ಚೇತರಿಸಿಕೊಂಡ ನಂತರ ನಾಯಕ ಸ್ಕಾಟ್ ಎಡ್ವರ್ಡ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಸತತ ಎರಡನೇ ಬಾರಿಗೆ ನೆದರ್ಲೆಂಡ್ಸ್ ವಿಶ್ವಕಪ್ ಟಿ20 ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ.

Zimbabwe And The Netherlands Qualify For The T20 World Cup 2022

ಅರ್ಹತೆ ಪಡೆದು ಸಂಭ್ರಮಿಸಿದ ಜಿಂಬಾಬ್ವೆ

ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ಪಪುವಾ ನ್ಯೂ ಗಿನಿ ವಿರುದ್ಧ ಸೆಣೆಸಾಡಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಜಿಂಬಾಂಬ್ವೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಸಫಲವಾಯಿತು. ಅನುಭವಿ ಜೋಡಿಯಾದ ರೆಗಿಸ್ ಚಕಬ್ವಾ ಮತ್ತು ನಾಯಕ ಕ್ರೇಗ್ ಎರ್ವಿನ್ ಉತ್ತಮ ಆರಂಭವನ್ನು ಒದಗಿಸಿದರು, ಹಿಂದಿನವರು ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದರು.

ನಮ್ಮವರೇ ಟೀಕಿಸುವಾಗ ಕೊಹ್ಲಿ ಬೆಂಬಲಕ್ಕೆ ನಿಂತ ಪಾಕಿಸ್ತಾನ ಬ್ಯಾಟರ್ ಬಾಬರ್ ಅಜಮ್ನಮ್ಮವರೇ ಟೀಕಿಸುವಾಗ ಕೊಹ್ಲಿ ಬೆಂಬಲಕ್ಕೆ ನಿಂತ ಪಾಕಿಸ್ತಾನ ಬ್ಯಾಟರ್ ಬಾಬರ್ ಅಜಮ್

ಮಧ್ಯಮ ಕ್ರಮಾಂಕದಲ್ಲಿ ಸೀನ್ ವಿಲಿಯಮ್ಸ್, ಸಿಕಂದರ್ ರಾಜಾ, ಮಿಲ್ಟನ್ ಶುಂಭಾ , ವೆಸ್ಲೆ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಸಹಾಯದಿಂದ ನಿಗದಿತ 20 ಓವರ್‍‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್‌ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಪಪುವಾ ನ್ಯೂ ಗಿನಿ ಆರಂಭಿಕ ಆಘಾತ ಅನುಭವಿಸಿತು. ಅಂತಿಮವಾಗಿ 20 ಓವರ್‍‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಈ ಮೂಲಕ ಜಿಂಬಾಬ್ವೆ 27 ರನ್‌ಗಳ ಅಂತರದಲ್ಲಿ ಜಯ ಸಾಧಿಸುವ ಮೂಲಕ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾಗವಹಿಸಲು ಅರ್ಹತೆ ಗಿಟ್ಟಿಸಿಕೊಂಡಿತು. ತವರಿನಲ್ಲಿ ಜಿಂಬಾಬ್ವೆ ಜಯ ಸಾಧಿಸುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಾಚರಣೆ ಮುಗಿಲು ಮುಟ್ಟಿತು.

ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳು

ಅಫ್ಘಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನಮೀಬಿಯಾ, ನ್ಯೂಜಿಲೆಂಡ್, ಪಾಕಿಸ್ತಾನ, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್ 2021ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಅಗ್ರ 11 ತಂಡಗಳಾಗಿವೆ.

ಗ್ಲೋಬಲ್ ಕ್ವಾಲಿಫೈಯರ್ ಎ ಗುಂಪಿನಿಂದ ಐರ್ಲೆಂಡ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಅಗ್ರ ಸ್ಥಾನ ಪಡೆದು ವಿಶ್ವಕಪ್ ಪಂದ್ಯಾವಳಿಗೆ ಅರ್ಹತೆ ಪಡೆದಿದ್ದರೆ. ಬಿ ಗುಂಪಿನಲ್ಲಿ ನೆದರ್ಲ್ಯಾಂಡ್ಸ್ ಮತ್ತು ಜಿಂಬಾಬ್ವೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿವೆ.

English summary
Zimbabwe and the Netherlands became the last two teams to qualify for the T20 World Cup 2022 with victories in the ICC Men's T20 World Cup Qualifier Group B semi-finals on Friday July 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X