Year Ender 2025: ವಿರಾಟ್ ಕೊಹ್ಲಿ ಪಾಲಿಗೆ 2025 ಎಂದೆಂದಿಗೂ ಮರೆಯಲಾಗದ ವರ್ಷ...
ಕ್ರಿಕೆಟ್ ಲೋಕದಲ್ಲಿ ವಿರಾಟ್ ಕೊಹ್ಲಿ ದೊರೆ, ಕ್ರಿಕೆಟ್ ದೇವರು ಅಂತಾ ಸಚಿನ್ ತೆಂಡೂಲ್ಕರ್‌ಗೆ ಬಿರುದು ಕೊಟ್ಟ ಜನರೇ ವಿರಾಟ್ ಕೊಹ್ಲಿಗೆ ಕಿಂಗ್ ಅಂತಾ ಕರೆಯುತ್ತಾರೆ. ಕ್ರಿಕೆಟ್ ಅಖಾಡದಲ್ಲಿ ದಾಖಲೆಗಳ ಜೊತೆಗೆ ಜನರನ್ನು ಸೆಳೆಯುವ ಕಲೆ ಕೂಡ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಅವರಿಗೆ ಚನ್ನಾಗಿ ಗೊತ್ತು ಅಂತಾ ವಿರೋಧಿಗಳೆಲ್ಲಾ ಹೇಳುತ್ತಾರೆ. ಆದರೆ ವಿರಾಟ್ ಕೊಹ್ಲಿ ಫೀಲ್ಡ್‌ಗೆ ಎಂಟ್ರಿ ಕೊಟ್ಟರೆ ಸಾಕು ಜನರೇ ಓಡಿ, ಓಡಿ ಬರ್ತಾರೆ ಅನ್ನೋದು ಅಭಿಮಾನಿಗಳ ಮಾತು. ಇಷ್ಟೆಲ್ಲದರ ನಡುವೆ, ವಿರಾಟ್ ಕೊಹ್ಲಿ ಪಾಲಿಗೆ 2025 ಎಂದೆಂದಿಗೂ ಮರೆಯಲಾಗದ ವರ್ಷ...
ಹೌದು, ವಿರಾಟ್ ಕೊಹ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಫೀಲ್ಡ್‌ಗೆ ಎಂಟ್ರಿ ಕೊಟ್ಟರೆ ಸಾಕು ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹೊತ್ತಿಕೊಳ್ಳುತ್ತದೆ. ವಿರಾಟ್ ಕೊಹ್ಲಿ ಹೆಸರು ಕೇಳಿದರೆ ದಿಗ್ಗಜ ಬೌಲರ್ ಕೂಡ ಒಂದು ಕ್ಷಣ ನಡುಗುವುದು ಗ್ಯಾರಂಟಿ. ಇಂತಿಪ್ಪ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಜೀವನದಲ್ಲೇ ಮರೆಯಲು ಆಗದ ವರ್ಷ 2025, ಏಕೆಂದರೆ 18 ವರ್ಷಗಳಿಂದ ತನ್ನ ಎದೆಯಲ್ಲಿ ಇಟ್ಟುಕೊಂಡ ಬೆಂಕಿ ಆರಿದ ಸಮಯ. ಐಪಿಎಲ್ ಕಪ್ ಗೆದ್ದು ಕೊಹ್ಲಿ ಸಂಭ್ರಮಿಸಿದ ಘಳಿಗೆ ಇದೇ 2025ರ ಜೊತೆ ಬೆರೆತು ಹೋಗಿದೆ!

ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ!
ವಿರಾಟ್ ಕೊಹ್ಲಿ ಆರ್‌ಸಿಬಿ ತಂಡಕ್ಕಾಗಿ ಕಳೆದ 18 ವರ್ಷಗಳಿಂದ ಸತತವಾಗಿ ಆಡಿ ಕಪ್ ಗೆದ್ದು & ಕನ್ನಡಿಗರ ಕನಸು ನನಸು ಮಾಡಿದ್ದರು. ಇಷ್ಟೇ ಅಲ್ಲ ಇದರ ಜೊತೆಗೆ ಮರಳಿ ತಮ್ಮ ಹಳೇ ಆಟಕ್ಕೆ ಎಂಟ್ರಿ ಕೊಟ್ಟು, ಸಾಲು ಸಾಲಾಗಿ 2 ಶತಕ ಬಾರಿಸಿದ್ದರು. ದಕ್ಷಿಣ ಆಫ್ರಿಕಾ ಎದುರು ಈ ಸಾಧನೆ ಮಾಡಿ ಇಡೀ ಜಗತ್ತಿನ ಕ್ರಿಕೆಟ್ ಅಖಾಡದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದರು.
100ನೇ ಶತಕ ಬಾರಿಸುವುದು ಪಕ್ಕಾ!
ಇಷ್ಟೆಲ್ಲಾ ಸಾಧನೆ ನಡುವೆ ಟೆಸ್ಟ್ ಕ್ರಿಕೆಟ್ ಬಿಟ್ಟು ಹೊರಟಿದ್ದು ಅಭಿಮಾನಿಗಳಿಗೆ ನೋವು ತಂದಿದೆ. ಅಲ್ಲದೆ ಗೌತಮ್ ಗಂಭೀರ್ ವಿರುದ್ಧ ಕೂಡ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಎಲ್ಲವನ್ನೂ ಮೀರಿ ಆಟ ಆಡುವ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಮತ್ತೊಂದು ವಿಶ್ವಕಪ್ ಆಡುವುದು ಕೂಡ ಗ್ಯಾರಂಟಿ ಆಗಿದೆ. ಹಾಗೇ ಕ್ರಿಕೆಟ್ ಇತಿಹಾಸದಲ್ಲಿ 100ನೇ ಶತಕ ಬಾರಿಸುವುದು ಕೂಡ ಬಹುತೇಕ ಪಕ್ಕಾ ಆಗಿ ಹೋಗಿದ್ದು, ವಿರಾಟ್ ಕೊಹ್ಲಿ ಅವರಿಗಾಗಿ ಅಭಿಮಾನಿಗಳ ಹೃದಯ ಸದಾ ಮಿಡಿಯುತ್ತಿರುತ್ತದೆ...
-
Virat Kohli: ವಿರಾಟ್ ಕೊಹ್ಲಿಗೆ ಕನ್ನಡ ಬರಲ್ಲ - ನಾರ್ಥಿಗಳು ಯಾಕೆ ಕಲಿಯಬೇಕು: ತುಳು ಬೆಂಬಲಿತರ ಪ್ರಶ್ನೆ, ಕನ್ನಡಿಗರ ಆಕ್ರೋಶ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ












Click it and Unblock the Notifications