Yash Dayal: ಕೊನೆಯ ಓವರ್‌ನಲ್ಲಿ ಕಮಾಲ್ ಮಾಡಿದ ಯಶ್: RCB ಅಭಿಮಾನಿಗಳ ನ್ಯೂ ಪೋಸ್ಟರ್ ಬಾಯ್
ಯಶ್ ದಯಾಳ್.. ಈ ರೀತಿ ಶಿಸ್ತು ಬದ್ಧ ದಾಳಿ ನಡೆಸ ಬಲ್ಲರು ಎಂದು 15 ದಿನದ ಹಿಂದೆ ಕೇಳಿದ್ದರೆ, ಅಭಿಮಾನಿಗಳು ಎಸ್ ಹಾಗೂ ನೋ ಎಂಬ ಕನ್ಫೂಸನ್‌ನಲ್ಲಿ ಇದ್ದರು. ಆದರೆ ಶನಿವಾರದ ಸಿಎಸ್‌ಕೆ ವಿರುದ್ಧದ ಪಂದ್ಯದ ಬಳಿಕ ಆರ್‌ಸಿಬಿ ಅಭಿಮಾನಿಗಳಿಗೆ ಕೇಳಿದರೆ ಎಸ್ ಹಿ ಕ್ಯಾನ್ ಡೂ ಅನ್ನುತ್ತಾರೆ.
ಚಿನ್ನಸ್ವಾಮಿ ಅಂಗಳದಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ಹೈವೋಲ್ಟೇಜ್ ಫೈಟ್ ನಡೆಯಿತು. ಎಲ್ಲರೂ ಎಷ್ಟು ಹೈಪ್ ನೀಡಿದ್ದರೋ, ಅದಕ್ಕೂ ಹೆಚ್ಚಿನ ರೋಚಕತೆ ಕೊನೆಯ ಓವರ್ ವರೆಗೂ ಇತ್ತು. ಆರ್‌ಸಿಬಿ ಪ್ಲೇಆಫ್ ಬಾಗಿಲಿನಲ್ಲಿ ನಿಂತಿತ್ತು. ಆ ಕೊನೆಯ ಓವರ್‌ನಲ್ಲಿ ಅಮೋಘ ಬೌಲಿಂಗ್ ಮಾಡಿದ ಯಶ್ ತಾವೇ ಪ್ಲೇ ಆಫ್ ಬಾಗಿಲನ್ನು ಓಪನ್ ಮಾಡಿ ತಂಡವನ್ನು ಮುಂದಿನ ಹಂತಕ್ಕೆ ಕೊಂಡೊಯ್ದರು.

ಕೊನೆಯ ಓವರ್
ಯಶ್ ದಯಾಳ್.. ಐಪಿಎಲ್ 2023ರಲ್ಲಿ ಒಂದೇ ಓವರ್‌ನಲ್ಲಿ ಐದು ಸಿಕ್ಸರ್ ಬಾರಿಸಿಕೊಂಡು ಟೀಕೆಗೆ ಗುರಿಯಾಗಿದ್ದ ಬೌಲರ್ ಇಂದು ಸೂಪರ್ ಸ್ಟಾರ್.. ಸಿಎಸ್‌ಕೆ ತಂಡಕ್ಕೆ ಕೊನೆಯ ಓವರ್‌ನಲ್ಲಿ ಪ್ಲೇ ಆಫ್‌ಗೆ ಕ್ವಾಲಿಫೈ ಆಗಲು 17 ರನ್ ಬೇಕಿತ್ತು. ಚೆಂಡನ್ನು ಫಾಫ್ ಯಶ್ ಕೈ ಗೆ ನೀಡಿದರು. ಆಗ ಸ್ಟೇಡಿಯಂ ಫುಲ್ ಪಿನ್ ಡ್ರಾಪ್ ಸೈಲೆಂಟ್.. 20 ನೇ ಓವರ್‌ನ ಮೊದಲ ಎಸೆತದಲ್ಲಿ ಧೋನಿ, ಪುಲ್ ಶಾಟ್ ಪ್ರಯೋಗಿಸಿ ಸಿಕ್ಸರ್ ಬಾರಿಸಿದರು. ಮೈದಾನದಲ್ಲಿ ಆರ್‌ಸಿಬಿ ಅಭಿಮಾನಿಗಳ ಪ್ರಾರ್ಥನೆ ಬಿಟ್ಟರೆ ಎಲ್ಲವೂ ನಿಶಬ್ದ.
20ನೇ ಓವರ್‌ನ ಎರಡನೇ ಎಸೆತದಲ್ಲಿ ಧೋನಿ ಬ್ಯಾಟಿಂಗ್ ಮಾಡುತ್ತಿದ್ದಾಗ ಯಶ್ ದಾಯಳ್ ಸ್ಲೋವರ್ ಒನ್ ಎಸೆದರು. ಧೋನಿ ಇದನ್ನು ತಪ್ಪಾಗಿ ಜಡ್ಜ್ ಮಾಡಿ ಸಿಕ್ಸರ್ ಬಾರಿಸಲು ಮುಂದಾದರು, ಆದರೆ ಬೌಂಡರಿ ಲೈನ್‌ನಲ್ಲಿ ಇದ್ದ ಸ್ವಪ್ನಿಲ್ ಸಿಂಗ್ ಕ್ಯಾಚ್ ಹಿಡಿದಿದ್ದೆ ತಡ, ಸ್ಟೇಡಿಯಂನಲ್ಲಿ ಕರೆಂಟ್ ಹೊಡೆದಂತಹ ಅನುಭವ.
ಕೈ ಹಿಡಿದ ಸ್ಲೋವರ್ ಒನ್
ಯಶ್ ದಯಾಳ್ ಇಲ್ಲಿಂದ ಎಲ್ಲರ ಚಿತ್ತ ಕದ್ದರು. ತಮ್ಮಲ್ಲಿರುವ ಕ್ಷಮತೆಯನ್ನು ಒಟ್ಟು ಗೂಡಿಸಿ ಅವರು ಜಸ್ಟ್ ನಾಲ್ಕು ಬೌಲ್ ಮಾಡಬೇಕಿತ್ತು. ಅಲ್ಲದೆ 10 ರನ್ ತಡೆಯುವ ಅವಶ್ಯಕತೆ ಇತ್ತು. ಆದರೆ ಯಶ್ ದಯಾಳ್, ಧೃತಿ ಗೆಡಲಿಲ್ಲ. ತಾವು ಯಾವ ರೀತಿ ಬೌಲಿಂಗ್ ಮಾಡಲು ಫೇಮಸ್ ಅದೇ ರೀತಿ ಸ್ಲೋವರ್ ಒನ್‌ಗಳನ್ನು ಬಳಸಿ ಬೌಲಿಂಗ್ ಮಾಡಿದರು.

ಯಶ್ ದಯಾಳ್ ಅವರ ಸ್ಲೋವರ್ ಒನ್‌ಗೆ ಅದಾಗಲೇ ವಿಶ್ವದ ಗ್ರೇಟ್ ಫಿನಿಶರ್ ಪೆವಿಲಿಯನ್‌ಗೆ ಸೇರಾಗಿತ್ತು. ಜಡೇಜಾ ಇವರ ಎಸೆತದಲ್ಲಿ ಬಿಗ್ ಶಾಟ್ ಬಾರಿಸುವಲ್ಲಿ ವಿಫಲರಾದರು. ಹೇಗೆ ಪಂದ್ಯ ಕ್ಲೋಸ್ ಆಗುತ್ತಾ ಸಾಗಿತು. ಹಾಗೇ ಆರ್‌ಸಿಬಿ ಫ್ಯಾನ್ಸ್ ಜೋಶ್ ಹೆಚ್ಚಾಯಿತು. ತನ್ನ ಕರಾರುವಕ್ ದಾಳಿಯಿಂದ ಆರ್‌ಸಿಬಿ ತಂಡವನ್ನು ಪ್ಲೇಆಫ್ ಹಂತಕ್ಕೆ ಕೊಂಡೊಯ್ದ ಯಶ್ ದಯಾಳ್ ಹೀರೋ ಆದರು.
ಟೂರ್ನಿಯ ಉದ್ದಕ್ಕೂ ತಮ್ಮ ಅಮೋಘ ದಾಳಿಯ ನೆರವಿನಿಂದ ಆರ್‌ಸಿಬಿ ತಂಡಕ್ಕೆ ನೆರವಾಗಿದ್ದ ಯಶ್ ದಾಯಳ್, ಮತ್ತೊಮ್ಮೆ ಸೂಪರ್ ಹೀರೋ ಆದರು. ಮಳೆಯಾಗಿದ್ದರಿಂದ ಚೆಂಡು ಕೈಯಲ್ಲಿ ಹಿಡಿಯಲು ಆಗದ ಸ್ಥಿತಿಯಲ್ಲಿ, ದಯಾಳ್ ನೀಡಿದ ಪ್ರದರ್ಶನ ಆರ್‌ಸಿಬಿ ಅಭಿಮಾನಿಗಳ ಮನ ಗೆದ್ದಿದೆ. ಶನಿವಾರ ಯಶ್ 4 ಓವರ್ ಬೌಲ್ ಮಾಡಿ 42 ರನ್ ನೀಡಿ 2 ಮಹತ್ವದ ವಿಕೆಟ್ ಪಡೆದರು.
ಯಶ್ ಅಮೋಘ ಬೌಲಿಂಗ್ ಕೊಂಡಾಡಿದ ಫಾಫ್ ಡುಪ್ಲೇಸಿಸ್ ತಮ್ಮ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಿದರು.












Click it and Unblock the Notifications