WPL RCB Vs GG: ಹ್ಯಾಟ್ರಿಕ್ ಸೋಲಿನಿಂದ ಪಾರಾಗಲು ಗುಜರಾತ್ ವಿರುದ್ಧ ಆರ್‌ಸಿಬಿ ಪ್ಲಾನ್ ಏನು ಗೊತ್ತಾ?
WPL RCB Vs GG: ಇಂದಿನ ಮಹಿಳಾ ಪ್ರೀಪಿಯರ್ ಲೀಗ್ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಗುಜಾರಾತ್ ಜೈಂಟ್ಸ್ ತಂಡಗಳು ಸೆಣಸಲಿವೆ. ಈಗಾಗಲೇ ಸತತ ಎರಡು ಪಂದ್ಯಗಳಲ್ಲಿ ಸೋಲನುಭವಿಸಿರುವ ಸ್ಮೃತಿ ಮಂದಾನ ಪಡೆ ಹ್ಯಾಟ್ರಿಕ್ ಸೋಲಿನಿಂದ ತಪ್ಪಿಸಿಕೊಳ್ಳಲು ಭರ್ಜರಿ ಪ್ಲಾನ್ ಮಾಡಿಕೊಂಡಿದೆ. ಹಾಗಾದರೆ ಸಮರದ ಸಮಯ, ಎಲ್ಲಿ ನಡೆಯಲಿದೆ ಹಾಗೂ ಎರಡು ತಂಡಗಳಲ್ಲಿ ಯಾರೆಲ್ಲಾ ಆಟಗಾರ್ತಿಯರಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೂ 4 ಪಂದ್ಯಗಳನ್ನು ಆಡಿದೆ. ಈ ಪೈಕಿ ಎರಡರಲ್ಲಿ ಗೆಲುವು ಸಾಧಿಸಿದ್ದು, ಇನ್ನೆರಡು ಪಂದ್ಯಗಳಲ್ಲಿ ಸತತ ಸೋಲನುಭವಿಸಿದೆ. ಇನ್ನು ಇಂದು ಗುಜಾರಾತ್ ಜೈಂಟ್ಸ್ ವಿರುದ್ಧ ಗೆಲುವು ಸಾಧಿಸಲು ಭರ್ಜರಿ ಪ್ಲಾನ್ ಮಾಡಿಕೊಂಡಿದ್ದು, ಈ ಮೂಲಕ ಹ್ಯಾಟ್ರಿಕ್ ಸೋಲಿನಿಂದ ಪಾರಾಗಲು ಸಿದ್ಧತೆ ಮಾಡಿಕೊಂಡಿದೆ.

ಸ್ಮೃತಿ ಮಂದನಾ ಪಡೆಯು ಇತ್ತೀಚೆಗಷ್ಟೇ ಯುಪಿ ವಾರಿಯರ್ಸ್ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿ ಗೆಲುವಿನ ಲಯದಲ್ಲಿತ್ತು. ಆದರೆ, ಬೌಲಿಂಗ್‌ನಲ್ಲಿ ವಿಫಲವಾದ ಕಾರಣ ಸೋಲನುಭವಿಸಿತು. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲನುಭವಿಸಿತ್ತು. ಈ ಮೂಲಕ ಸತತ ಎರಡು ಸೋಲು ಕಂಡಿದ್ದು, ತವರಿನಲ್ಲಿ ಅಂದರೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಇಂದಿನ ಪಂದ್ಯದಲ್ಲಿ ಶತಾಯಗತಾಯ ಗೆಲ್ಲಲ್ಲೇಬೇಕೆನ್ನುವ ಪಣ ತೊಟ್ಟಿದೆ.
ಆರ್‌ಸಿಬಿ ಹಾಗೂ ಗುಜಾರಾತ್ ಜೈಂಟ್ಸ್ ನಡುವಿನ ಇಂದಿನ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇಂದು ಸಂಜೆ 7:30ಕ್ಕೆ ಪಂದ್ಯ ಆರಂಭ ಆಗಲಿದೆ. ಇನ್ನೂ ನಾಲ್ಕು ಪಾಯಿಂಟ್ಸ್‌ಗಳೊಂದಿಗೆ ಆರ್‌ಸಿಬಿ ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಬಂದಿದೆ.
ಬೃಹತ್ ಮೊತ್ತ ಕಲೆ ಹಾಕಿದರೂ ಸೋತ ಆರ್‌ಸಿಬಿ: ಮಹಿಳಾ ಪ್ರೀಮಿಯರ್ ಲೀಗ್‌ನ ಕಳೆದ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಆರ್‌ಸಿಬಿ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ 181 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದ್ದು, ಇದರಲ್ಲಿ ಪೆರ್ರಿ ಪಾತ್ರ ಪ್ರಮುಖವಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಡ್ಯಾನಿ ವೈಟ್-ಹಾಡ್ಜ್ ಮತ್ತು ಎಲ್ಲಿಸ್ ಪೆರ್ರಿ ಅರ್ಧಶತಕ ಸಿಡಿಸುವ ಮೂಲಕ ಬೃಹತ್ ಮೊತ್ತವನ್ನು ಕಲೆಹಾಕಿದರು. ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂದಾನ 6 ರನ್‌ಗಳಿಗೆ ಔಟಾದರು. ಡ್ಯಾನಿ ವೈಟ್-ಹಾಡ್ಜ್ ಮತ್ತು ಎಲ್ಲಿಸ್ ಪೆರ್ರಿ 94 ರನ್‌ಗಳ ಜೊತೆಯಾಟ ಆಡಿದರು. ಡ್ಯಾನಿ (57) ಅರ್ಧ ಶತಕ ಗಳಿಸಿ ಔಟಾದರು. ಆದರೆ ಎಲ್ಲಿಸ್ ಪೆರ್ರಿ 55 ಎಸೆತಗಳಲ್ಲಿ 3 ಸಿಕ್ಸರ್ 9 ಬೌಂಡರಿ ಸಹಿತ ಅಜೇಯ 90 ರನ್ ಚಚ್ಚಿದರು.
ಈ ಮೂಲಕ ಪೆರ್ರಿ ಆರ್‌ಸಿಬಿ ಬೃಹತ್ ಮೊತ್ತ ಕಲೆ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ, ಆರ್‌ಸಿಬಿ ಬೌಲಿಂಗ್ ವಿಭಾಗದಲ್ಲಿ ಮತ್ತೆ ಎಡವಿದ್ದು, ಇದು ಯುಪಿ ವಾರಿಯರ್ಸ್ ವಿರುದ್ಧ ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣವಾಯಿತು. ಕೊನೆಗೂ ಸೂಪರ್ ಓವರ್ ಅವಕಾಶ ಸಿಕ್ಕಿದ್ದು, 9 ರನ್‌ಗಳ ಟಾರ್ಗೆಟ್ ಕಡಿಮೆ ರನ್‌ಗಳ ಗುರಿಯನ್ನು ಯುಪಿ ವಾರಿಯರ್ಸ್ ನೀಡಿತ್ತು. ಆಗಲೂ ಆರ್‌ಸಿಬಿ ನಾಯಕಿಯಾಗಿರುವ ಸ್ಮೃತಿ ಮಂದಾನ ಬ್ಯಾಟಿಂಗ್ ಎಡವಿ ತಂಡದ ಸೋಲಿಗೆ ಪ್ರಮುಖ ಕಾರಣರಾದರು.
ಇನ್ನೂ ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಸೂಪರ್ ಓವರ್‌ನಲ್ಲಿ ಸ್ಮೃತಿ ಮಂದಾನ ಬದಲಿಗೆ ಪೆರ್ರಿ ಬ್ಯಾಂಟಿಂಗ್ ಬಂದಿದ್ದರೆ ಆರ್‌ಸಿಬಿ ಪಕ್ಕಾ ಗೆಲ್ಲುತ್ತಿತ್ತು ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಮಂದಾನ ಅವರು ಸಹ ನಾನು ತಪ್ಪು ಮಾಡಿದೆ, ನನ್ನ ಬದಲಿಗೆ ಮೊದಲು ಪೆರ್ರಿ ಬ್ಯಾಟಿಂಗ್ ಮಾಡಬೇಕಿತ್ತು. ಆಗ ನಮ್ಮ ತಂಡ ಸೋಲುತ್ತಿರಲಿಲ್ಲ ಅಂತಲೂ ಹೇಳಿದ್ದಾರೆ.












Click it and Unblock the Notifications