WPL 2026 RCB: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸ್ಪಿನ್ ಮೋಡಿಗೆ ಕನ್ನಡತಿ ಸಜ್ಜು: ಆರ್‌ಸಿಬಿ ಪ್ಲೇಯಿಂಗ್ 11
WPL 2026 RCB: ಈಗಾಗಲೇ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಆರ್‌ಸಿಬಿಯು ಇಂದು (ಜನವರಿ 17) ಡೆಲ್ಲಿ ಕ್ಯಾಪಿಟಲ್ಸ್ ಎದುರಿಸಲು ಸಜ್ಜಾಗಿದೆ. ಹಾಗಾದ್ರೆ ಪ್ಲೇಯಿಂಗ್ 11 ಹೇಗಿರಲಿದೆ ಹಾಗೂ ಪಂದ್ಯದ ಸಮಯ, ನೇರಪ್ರಸಾರದ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಆರ್‌ಸಿಬಿಯು ಈ ಬಾರಿ ಡಬ್ಲ್ಯೂಪಿಎಲ್‌ನಲ್ಲಿ ಸತತ ಮೂರು ಗೆಲವು ಕಂಡು ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಇನ್ನೂ ಇಂದು ನವಿ ಮುಂಬೈ ಡಾ. ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲು ಸಕಲ ಸಿದ್ಧತೆ ನಡೆಸಿದೆ. ಹಾಗಾದ್ರೆ ಪ್ಲೇಯಿಂಗ್ 11 ಹೇಗಿರಲಿದ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ. ಮತ್ತೊಂದೆಡೆ ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಎಡವಿ ಇಂದಿನ ಪಂದ್ಯದಲ್ಲಿ ಗೆಲ್ಲುವ ಭರವಸೆಯಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್ 11: ಲಿಜೆಲ್ಲೆ ಲೀ (ವಿಕೆಟ್ ಕೀಪರ್), ಶಫಾಲಿ ವರ್ಮಾ, ಲಾರಾ ವೊಲ್ವಾರ್ಡ್ಟ್, ಜೆಮಿಮಾ ರಾಡ್ರಿಗಸ್ (ನಾಯಕಿ), ಚಿನೆಲ್ಲೆ ಹೆನ್ರಿ, ಮರಿಜಾನ್ನೆ ಕಪ್, ಸ್ನೇಹ ರಾಣಾ, ನಿಕಿ ಪ್ರಸಾದ್, ಮಿನ್ನು ಮಣಿ, ನಂದಿನಿ ಶರ್ಮಾ, ಶ್ರೀ ಚರಣಿ.
ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11: ಗ್ರೇಸ್ ಹ್ಯಾರಿಸ್, ಸ್ಮೃತಿ ಮಂಧಾನ (ನಾಯಕಿ), ದಯಾಲನ್ ಹೇಮಲತಾ, ರಿಚಾ ಘೋಷ್ (ವಿಕೆಟ್ ಕೀಪರ್), ಗೌತಮಿ ನಾಯಕ್, ರಾಧಾ ಯಾದವ್, ನಾಡಿನ್ ಡಿ ಕ್ಲರ್ಕ್, ಅರುಂಧತಿ ರೆಡ್ಡಿ, ಶ್ರೇಯಾಂಕಾ ಪಾಟೀಲ್, ಲಿನ್ಸೆ ಸ್ಮಿತ್, ಲಾರೆನ್ ಬೆಲ್.
ಡೆಲ್ಲಿ vs ಆರ್‌ಸಿಬಿ ಮುಖಾಮುಖಿ
* ಒಟ್ಟು ಪಂದ್ಯಗಳು: 7
* ಡಿಸಿ ಗೆಲುವು: 5
* ಆರ್‌ಸಿಬಿ ಗೆಲುವು: 2
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಶಫಾಲಿ ವರ್ಮಾ, ಲಾರಾ ವೊಲ್ವಾರ್ಡ್ಟ್, ಜೆಮಿಮಾ ರಾಡ್ರಿಗಸ್ (ನಾಯಕಿ), ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಚಿನೆಲ್ಲೆ ಹೆನ್ರಿ, ನಿಕಿ ಪ್ರಸಾದ್, ಸ್ನೇಹ ರಾಣಾ, ಮಿನ್ನು ಮಣಿ, ಮರಿಝನ್ನೆ ಕಪ್, ಅಲಾನಾ ಕಿಂಗ್, ನಂದಿನಿ ಶರ್ಮಾ, ಲಿಜೆಲ್ಲೆ ಲೀ, ಶ್ರೀ ಚರಣಿ, ಲೂಸಿ ಹ್ಯಾಮಿಲ್ಟನ್, ಮಮತಾ ಮಡಿವಾಳ, ದಿಯಾ ಯಾದವ್.
ಆರ್‌ಸಿಬಿ ತಂಡ: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಸಯಾಲಿ ಸತ್ಘರೆ, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ನಾಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಲಾರೆನ್ ಬೆಲ್, ಲಿನ್ಸೆ ಸ್ಮಿತ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಗ್ರೇಸ್ ಹ್ಯಾರಿಸ್, ಗೌತಮಿ ನಾಯಕ್, ಪ್ರತ್ಯೂಷ ಕುಮಾರ್, ದಯಾಲನ್ ಹೇಮಲತಾ.
ನೇರಪ್ರಸಾರದ ವಿವರಗಳು
ಸ್ಥಳ: ನವಿ ಮುಂಬೈನ ಡಾ. ಡಿ.ವೈ. ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ
ಸಮಯ: ಸಂಜೆ 7:30 ಗಂಟೆ (ಭಾರತೀಯ ಕಾಲಮಾನ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು JioHotstar ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.
ನಿನ್ನೆ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಜೈಂಟ್ಸ್ ತಂಡವನ್ನು ಹೀನಾಯವಾಗಿ ಸೋಲಿಸಿತ್ತು. ಬ್ಯಾಟಿಂಗ್ ವಿಭಾಗದಲ್ಲಿ ರಾಧಾ ಯಾದವ್, ರಿಚಾ ಘೋಷ್ ಹಾಗೂ ನಾಡಿನ್ ಡಿ ಕ್ಲರ್ಕ್ ಅಬ್ಬರಿಸಿದರೆ, ಬೌಲಿಂಗ್ ವಿಭಾಗದಲ್ಲಿ ಕನ್ನಡತಿ ಶ್ರೇಯಾಂಕ ಪಾಟೀಲ್, ಲಾರೆನ್ಸ್ ಬೆಲ್ ಮಾರಕ ಬೌಲಿಂಗ್ ದಾಳಿ ನಡೆಸಿ ಗುಜರಾತ್ ಟೈಟಾನ್ಸ್‌ಗೆ ಚಳಿ ಬಿಡಿಸಿದರು. ಹಾಗೆಯೇ ಇಂದಿನ ಪಂದ್ಯದಲ್ಲೂ ಸಹ ಡಿಸಿ ವಿರುದ್ಧ ಆರ್ಭಟಿಸಲು ಸ್ಮೃತಿ ಮಂಧಾನ ಪಡೆ ಸಜ್ಜಾಗಿದೆ.












Click it and Unblock the Notifications