WPL 2026 RCB Playing 11: ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11
WPL 2026 RCB: ಡಬ್ಲ್ಯೂಪಿಎಲ್ 2025ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗಿದೆ. ಇದೀಗ ಎಲ್ಲರ ಚಿತ್ತ 2026 ರತ್ತ ನೆಟ್ಟಿದೆ. ಉದ್ಘಾಟನಾ ಪಂದ್ಯ ಆರ್ಸಿಬಿ ಹಾಗೂ ಎಂಐ ನಡುವೆ ಜನವರಿ 9ರಂದು ಮುಂಬೈನಲ್ಲಿ ನಡೆಯಲಿದೆ. ಹಾಗಾದ್ರೆ, ಮುಂಬೈ ವಿರುದ್ಧ ಬೆಂಗಳೂರು ತಂಡದ ಸಂಭಾವ್ಯ ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವ ಕುತೂಹಲ ಬಹುತೇಕ ಮಂದಿಯ ತಲೆಯಲ್ಲಿರುತ್ತದೆ ಅದೆಲ್ಲದಕ್ಕೂ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಆರ್ಸಿಬಿ ಭರ್ಜರಿ ಸಿದ್ಧತೆ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2024ರಲ್ಲಿ ಟ್ರೋಫಿ ಗೆದ್ದುಕೊಂಡಿತ್ತು. ಆದರೆ, 2025ರಲ್ಲಿ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದಿತ್ತು. ಇದೀಗ 2026ರಲ್ಲಿ ಹೇಗಾದರೂ ಮಾಡಿ ಟ್ರೋಫಿ ಎತ್ತಲೇಬೇಕೆನ್ನುವ ಪಣ ತೊಟ್ಟು ನಿಂತಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.

ಡಬ್ಲ್ಯೂಪಿಎಲ್ 2026ರ ಆವೃತ್ತಿಯು ಜನವರಿ 9ರಂದು ಆರಂಭ ಆಗಲಿದೆ. ಉದ್ಘಾಟನಾ ಪಂದ್ಯ ಮುಂಬೈನಲ್ಲಿ ಸ್ಮೃತಿ ಮಂದಾನ ನೇತೃತ್ವದ ಆರ್ಸಿಬಿ ಹಾಗೂ ಹಾಲಿ ಚಾಂಪಿಯನ್ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆ. ಡಬ್ಲ್ಯೂಪಿಎಲ್ ಪಂದ್ಯ ಜನವರಿ 9ರಿಂದ ಆರಂಭ ಆಗಲಿದ್ದು, ಫೆಬ್ರವರಿ 5ರ ವರೆಗೂ ನಡೆಯಲಿದೆ.
ಆರ್ಸಿಬಿ ಮಹಿಳಾ ತಂಡ: ಸ್ಮೃತಿ ಮಂದಾನ (ನಾಯಕಿ), ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೇಯಾಂಕಾ ಪಾಟೀಲ್, ಲಾರೆನ್ ಬೆಲ್, ಪೂಜಾ ವಸ್ತ್ರಾಕರ್, ಗ್ರೇಸ್ ಹ್ಯಾರಿಸ್, ಅರುಂಧತಿ ರೆಡ್ಡಿ, ರಾಧಾ ಯಾದವ್, ನಡಿನ್ ಡಿ ಕ್ಲರ್ಕ್, ಜಾರ್ಜಿಯಾ ವೋಲ್, ಲಿನ್ಸೆ ಸ್ಮಿತ್, ದಯಾಲನ್ ಹೇಮಲತಾ, ಪ್ರೇಮಾ ರಾವತ್, ಗೌತಮಿ ನಾಯಕ್, ಪ್ರತ್ಯೂಷಾ ಕುಮಾರ್.
ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11: ಸ್ಮೃತಿ ಮಂಧಾನ (ನಾಯಕಿ), ಜಾರ್ಜಿಯಾ ವೋಲ್, ಎಲ್ಲಿಸ್ ಪೆರ್ರಿ, ಗ್ರೇಸ್ ಹ್ಯಾರಿಸ್, ರಿಚಾ ಘೋಷ್ (ವಿಕೆಟ್ ಕೀಪರ್), ನಾಡಿನ್ ಡಿ ಕ್ಲರ್ಕ್, ಪೂಜಾ ವಸ್ತ್ರಾಕರ್, ಶ್ರೇಯಾಂಕ ಪಾಟೀಲ್, ರಾಧಾ ಯಾದವ್, ಅರುಂಧತಿ ರೆಡ್ಡಿ, ಲಾರೆನ್ ಬೆಲ್.
ಇನ್ನೂ ಆರ್ಸಿಬಿ ಡಬ್ಲ್ಯೂಪಿಎಲ್ 2026 ಮೆಗಾ ಹರಾಜು ವೇಳೆ ಹೊಸ 12 ಆಟಗಾರ್ತಿಯರನ್ನು ಕೊಂಡುಕೊಂಡಿತ್ತು. ಹಾಗಾದ್ರೆ ಯಾರಿಗೆ ಎಷ್ಟು ಹಣ ನೀಡಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಉಳಿಸಿಕೊಂಡ ಆಟಗಾರ್ತಿಯರು
* ಸ್ಮೃತಿ ಮಂಧನಾ (ನಾಯಕಿ) - 3.50 ಕೋಟಿ ರೂಪಾಯಿ
* ರಿಚಾ ಘೋಷ್ (ವಿಕೆಟ್ ಕೀಪರ್) - 2.75 ಕೋಟಿ ರೂಪಾಯಿ
* ಎಲ್ಲಿಸ್ ಪೆರ್ರಿ - 2 ಕೋಟಿ ರೂಪಾಯಿ
* ಶ್ರೇಯಾಂಕಾ ಪಾಟೀಲ್ - 60,00,000 ರೂಪಾಯಿ
ಹರಾಜಿನಲ್ಲಿ ಖರೀದಿಸಿದ ಆಟಗಾರ್ತಿಯರು
* ಜಾರ್ಜಿಯಾ ವೋಲ್ - 60,00,000 ರೂಪಾಯಿ
* ನಡೈನ್ ಡಿ ಕ್ಲರ್ಕ್ - 65,00,000 ರೂಪಾಯಿ
* ರಾಧಾ ಯಾದವ್ - 65,00,000 ರೂಪಾಯಿ
* ಲಾರೆನ್ ಬೆಲ್ - 90,00,000 ರೂಪಾಯಿ
* ಲಿನ್ಸೆ ಸ್ಮಿತ್ - 30,00,000 ರೂಪಾಯಿ
* ಪ್ರೇಮಾ ರಾವತ್ - (20,00,000 ರೂಪಾಯಿ
* ಅರುಂಧತಿ ರೆಡ್ಡಿ - 75,00,000 ರೂಪಾಯಿ
* ಪೂಜಾ ವಸ್ತ್ರಾಕರ್ - 85,00,000 ರೂಪಾಯಿ
* ಗ್ರೇಸ್ ಹ್ಯಾರಿಸ್ - 75,00,000 ರೂಪಾಯಿ
* ಗೌತಮಿ ನಾಯಕ್ - 10,00,000 ರೂಪಾಯಿ
* ಪ್ರತ್ಯುಷಾ ಕುಮಾರ್ - 10,00,000 ರೂಪಾಯಿ
-
Virat Kohli: ಅನುಷ್ಕಾ ಶರ್ಮಾಗೆ ಫ್ಲೈಯಿಂಗ್ ಕಿಸ್ ಕೊಟ್ಟ ಬಳಿಕ ತನ್ನ ಆಟದ ಯಶಸ್ಸಿನ ರಹಸ್ಯ ಬಿಚ್ಚಿಟ್ಟ ವಿರಾಟ್ ಕೊಹ್ಲಿ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Who is Jacob Duffy?: ಐಪಿಎಲ್ 2026 ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಪರ ಮಿಂಚಿದ ಜೇಕಬ್ ಡಫಿ ಯಾರು? -
ಚಿನ್ನಸ್ವಾಮಿಯಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಹೆಸರಿಗೆ ಅವಮಾನ: ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾದ 'ತುದಿ' ಪದ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
ಸಿಎಸ್ಕೆ ಕಪ್ 5 ರೂಪಾಯಿ, ಆರ್ಸಿಬಿ ಟ್ರೋಫಿ ಬೆಲೆ 5 ಕೋಟಿ ರೂಪಾಯಿ: ಪುಟ್ಟ ಬಾಲಕನ ಹೇಳಿಕೆ ಭಾರೀ ವೈರಲ್ -
MI Vs KKR: 14 ವರ್ಷಗಳ ಬಳಿಕ ಹೊಸ ಇತಿಹಾಸ ಬರೆದ ಮುಂಬೈ ಇಂಡಿಯನ್ಸ್; ಕೆಕೆಆರ್ ವಿರುದ್ಧ ಭರ್ಜರಿ ಜಯ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ












Click it and Unblock the Notifications