RCB vs GG: ನಾಳೆಯಿಂದ WPL 2025 ಆರಂಭ; ಆರ್ಸಿಬಿ vs ಗುಜರಾತ್ ಜೈಂಟ್ಸ್ ನಡುವೆ ಮೊದಲ ಪಂದ್ಯ

ಮಹಿಳಾ ಪ್ರೀಮಿಯರ್ ಲೀಗ್ 2025ರ ಆವೃತ್ತಿ ಆರಂಭಕ್ಕೆ ಕ್ಷಣ ಗಣನೆ ಆರಂಭವಾಗಲಿದೆ. ಶುಕ್ರವಾರ ಅಂದರೆ ಫೆಬ್ರವರಿ 14ರಂದು ಮಹಿಳಾ ಪ್ರೀಮಿಯರ್ ಲೀಗ್‌ ಪ್ರಾರಂಭವಾಗಲಿದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಪ್ರೇಮಿಗಳ ದಿನದಂದೇ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಲಿದೆ.

ಫೆಬ್ರವರಿ 14 ರಂದು ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆರ್ಸಿಬಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. 2024ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಟೂರ್ನಿಯಿಂದಲೇ ಹೊರ ಬೀಳುವ ಹಂತದಲ್ಲಿದ್ದ ಆರ್ ಸಿಬಿ ಬಳಿಕ ಫೀನಿಕ್ಸ್‌ನಂತೆ ಎದ್ದುಬಂದು ಚಾಂಪಿಯನ್ ಆಗಿದ್ದು ನಿಜಕ್ಕೂ ರೋಚಕ. ಆರ್ ಸಿಬಿ ಫ್ರಾಂಚೈಸಿ ಮೊದಲ ಕಪ್‌ ಗೆದ್ದು ಅಭಿಮಾನಿಗಳಿಗೆ ಮರೆಯಲಾಗದ ಉಡುಗೊರೆ ನೀಡಿತ್ತು.

wpl 2025 starts february 14 rcb vs gujarat giants

2025ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್ ಸಿಬಿಗೆ ಆರಂಭಿಕವಾಗಿ ಹಿನ್ನಡೆಯಾಗಿದೆ. ಪ್ರಮುಖ ಆಲ್‌ರೌಂಡರ್ ಸೋಫಿ ಡಿವೈನ್ ಈ ಆವೃತ್ತಿಗೆ ಅಲಭ್ಯವಾಗಿದ್ದಾರೆ. ಅವರ ಅನುಪಸ್ಥಿತಿ ತಂಡಕ್ಕೆ ಕಾಡುವ ಸಾಧ್ಯತೆ ಇದೆ. ಕಿಮ್ ಗಾರ್ತ್‌ ಅವರ ಸ್ಥಾನವನ್ನು ತುಂಬುವ ಸಾಧ್ಯತೆ ಕೂಡ ಇದೆ.

ಕಳೆದ ಮೂರು ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ಗುಜರಾತ್ ಜೈಂಟ್ಸ್, ಈ ಬಾರಿ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.

ಪಂದ್ಯ ಯಾವಾಗ?

ಸಂಜೆ 7.30 ಗಂಟೆಗೆ ಆರ್ಸಿಬಿ vs ಗುಜರಾತ್ ಜೈಂಟ್ಸ್ ಪಂದ್ಯ ಆರಂಭವಾಗಲಿದೆ. ಜಿಯೋ ಸಿನಿಮಾ ಆಪ್‌ ಮತ್ತು ವೆಬ್‌ಸೈಟ್‌ನಲ್ಲಿ ಮಹಿಳಾ ಪ್ರೀಮಿಯರ್ ಪಂದ್ಯಗಳನ್ನು ನೇರಪ್ರಸಾರದಲ್ಲಿ ವೀಕ್ಷಿಸಬಹುದು. ಸ್ಪೋರ್ಟ್ಸ್‌ 18 ನೆಟವರ್ಕ್‌ನಲ್ಲಿ ಕೂಡ ಪಂದ್ಯಗಳನ್ನು ನೋಡಬಹುದು.

2025ರ ಆವೃತ್ತಿಗೆ ಉಭಯ ತಂಡಗಳು

ಆರ್ಸಿಬಿ ತಂಡ: ಸ್ಮೃತಿ ಮಂಧಾನ (ನಾಯಕಿ), ಎಲ್ಲಿಸ್ ಪೆರ್ರಿ, ರಿಚಾ ಘೋಷ್, ಜಾರ್ಜಿಯಾ ವೇರ್‌ಹ್ಯಾಮ್, ಶ್ರೇಯಾಂಕಾ ಪಾಟೀಲ್, ಡೇನಿಯಲ್ ವ್ಯಾಟ್-ಹಾಡ್ಜ್, ಹೀದರ್ ಗ್ರಹಾಂ, ಕಿಮ್ ಗಾರ್ತ್, ಚಾರ್ಲಿ ಡೀನ್, ಏಕ್ತಾ ಬಿಷ್ತ್, ರೇಣುಕಾ ಸಿಂಗ್ ಠಾಕೂರ್, ಜಾಗರವಿ ಪವಾರ್, ರಾಘ್ವಿ ಬಿಸ್ಟ್, ಮೇಘನಾ ಎಸ್, ಜೋಷಿತಾ ವಿಜೆ, ಪ್ರೇಮಾ ರಾವತ್, ಕನಿಕಾ ಅಹುಜಾ, ಆಶಾ ಶೋಭನಾ.

ಗುಜರಾತ್ ಜೈಂಟ್ಸ್: ಆಶ್ಲೆ ಗಾರ್ಡ್ನರ್, ಹರ್ಲೀನ್ ಡಿಯೋಲ್, ಪ್ರಕಾಶಿಕಾ ನಾಯಕ್, ಬೆತ್ ಮೂನಿ, ಕಾಶ್ವೀ ಗೌತಮ್, ಪ್ರಿಯಾ ಮಿಶ್ರಾ, ಭಾರತಿ ಫುಲ್ಮಾಲಿ, ಲಾರಾ ವೋಲ್ವಾರ್ಡ್ಟ್, ಸಯಾಲಿ ಸತ್ಚಾರೆ, ಡೇನಿಯಲ್ ಗಿಬ್ಸನ್, ಮನ್ನತ್ ಕಶ್ಯಪ್, ಶಬ್ನಮ್ ಶಕಿಲ್, ದಯಾಲನ್ ಹೇಮಲತಾ, ಮೇಘನಾ ಸಿಂಗ್, ಸಿಮ್ರಾನ್ ಶೇಕ್, ಡಿಯೇಂಡ್ರ ಡಾಟಿನ್, ಫೊಬೆ ಲಿಚಿಫೀಲ್ಡ್, ತನುಜಾ ಕನ್ವರ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+