ಸೂರ್ಯಕುಮಾರ್ ಯಾದವ್ ಪಾಲಿಸಿದ ಹರ್ಮನ್‌ಪ್ರೀತ್ ಕೌರ್.. ಮರುಕಳಿಸಿದ 2025, ಪಿಸಿಬಿಗೆ ಭಾರಿ ಮುಖಭಂಗ

Women's T20 Asia Cup 2026 Trophy: ದುಬೈನಲ್ಲಿ ನಡೆದ 2026ರ ಮಹಿಳಾ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ 72 ರನ್‌ಗಳ ಭರ್ಜರಿ ಜಯ ಸಾಧಿಸಿ ದಾಖಲೆಯ 8ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು. ಆದರೆ ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾ ಮಹತ್ವದ ನಿರ್ಧಾರಕ್ಕೆ ಬಂದಿದ್ದು, ಇದರಿಂದ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಗೆ ಭಾರಿ ಮುಖಭಂಗ ಆದಂತಾಗಿದೆ. ಈ ರೀತಿ ಆಗಿರುವುದು ಇದೇ ಎಡರನೇ ಬಾರಿ.

ಪಂದ್ಯದ ನಂತರ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಹಾಗೂ ಪಾಕಿಸ್ತಾನದ ಗೃಹ ಸಚಿವರಾಗಿರುವ ಮೊಹ್ಸಿನ್ ನಖ್ವಿ ಅವರಿಂದ ಚಾಂಪಿಯನ್ಸ್ ಟ್ರೋಫಿಯನ್ನು ಸ್ವೀಕರಿಸಲು ಭಾರತೀಯ ಮಹಿಳಾ ಕ್ರಿಕೆಟ್ ತಂಡ ನಿರಾಕರಿಸಿತು. ಇಸರಿಂದ ನಖ್ವಿಗೆ ಜಾಗತಿಕ ಮಟ್ಟದಲ್ಲಿ ಭಾರಿ ಅವಮಾನ ಆದಂತಾಗಿದೆ.

Women s T20 Asia Cup 2026 India Refuse Trophy From PCB Chairman Mohsin Naqvi What Did Reason

ಬಿಸಿಸಿಐ ನಿಲುವು ಏನು?

ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ನೀಡಿರುವ ಮಾಹಿತಿ ಪ್ರಕಾರ, ಭಾರತ ತಂಡ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸುವುದಿಲ್ಲ ಎಂಬ ನಿರ್ಧಾರವನ್ನು ಬಿಸಿಸಿಐ ಫೈನಲ್ ಪಂದ್ಯಕ್ಕೂ ಮುಂಚಿತವಾಗಿಯೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ಅಧಿಕೃತವಾಗಿ ತಿಳಿಸಿತ್ತು. ಇದನ್ನೇ ಟೀಮ್ ಇಂಡಿಯಾ ಮಹಿಳಾ ತಂಡವು ಅನುಸರಿಸಿತು ಎನ್ನಲಾಗಿದೆ. ಇದಕ್ಕೆ ಕಾರಣ ಕೂಡ ಇದೆ. ಈ ರೀತಿಯ ಘಟನೆಗಳು ಸಂಭವಿಸಿರುವುದು ಇದೇ ಮೊದಲೇನಲ್ಲ, ಕಳೆದ ವರ್ಷ ಪೂರುಷರ ತಂಡ ಏಷ್ಯಾಕಪ್‌ ಫೈನಲ್‌ ಗೆದ್ದಾಗಲೂ ನಡೆದಿತ್ತು.

ಟ್ರೋಫಿ ಸ್ವೀಕರಿಸದಿರಲು ಕಾರಣ ಏನು?

ಇದು ಯಾವುದೇ ಆಟಗಾರ್ತಿಯರ ವೈಯಕ್ತಿಕ ನಿರ್ಧಾರವಲ್ಲ, ಬದಲಿಗೆ ಬಿಸಿಸಿಐ ತೆಗೆದುಕೊಂಡಿದ್ದ ಸಾಂಸ್ಥಿಕ ನಿರ್ಧಾರವಾಗಿತ್ತು. ದೇಶದ ಪ್ರಸ್ತುತ ರಾಜಕೀಯ ಮತ್ತು ಭದ್ರತಾ ಪರಿಸ್ಥಿತಿಗಳು ಹಾಗೂ ರಾಷ್ಟ್ರೀಯ ಭಾವನೆಗಳನ್ನು ಗೌರವಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಮಹತ್ವದ ಮಾಹಿತಿ ಹೊರಬಿದ್ದಿದೆ.

ಟ್ರೋಫಿ ನೀಡಲು ಬಿಸಿಸಿಐ ಎರಡು ಪರ್ಯಾಯ ಮಾರ್ಗಗಳನ್ನು ಪ್ರಸ್ತಾಪಿಸಿತ್ತು. ಎಸಿಸಿ ಉಪಾಧ್ಯಕ್ಷ ಖಾಲಿದ್ ಅಲ್ ಜರೂನಿ ಅವರಿಂದ ಅಥವಾ ವಿಜೇತ ಮಂಡಳಿಯ ಪ್ರತಿನಿಧಿಯಿಂದ ಟ್ರೋಫಿ ಕೊಡಿಸುವಂತೆ ಸೂಚಿಸಲಾಗಿತ್ತು. ಆದರೆ, ನಖ್ವಿ ಇದಕ್ಕೆ ಒಪ್ಪದೆ ತಾವೇ ಟ್ರೋಫಿ ಹಸ್ತಾಂತರಿಸಬೇಕು ಎಂದು ಪಟ್ಟು ಹಿಡಿದ ಕಾರಣ ಈ ಬಿಕ್ಕಟ್ಟು ನಿರ್ಮಾಣವಾಯಿತು ಎನ್ನುವ ಸತ್ಯ ಹೊರಬಿದ್ದಿದೆ.

ಮರುಕಳಿಸಿದ 2025, ಪಿಸಿಬಿಗೆ ಮತ್ತೆ ಮುಖಭಂಗ

ಕಳೆದ ವರ್ಷ (2025) ನಡೆದ ಪುರುಷರ ಏಷ್ಯಾ ಕಪ್‌ ಫೈನಲ್‌ ಗೆದ್ದಾಗಲೂ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತೀಯ ಪುರುಷರ ತಂಡ ನಖ್ವಿ ಅವರಿಂದ ಟ್ರೋಫಿ ಪಡೆಯಲು ನಿರಾಕರಿಸಿತ್ತು. ಇದೀಗ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಟೀಮ್ ಇಂಡಿಯಾವು ಅದೇ ನಿಲುವನ್ನು ಅನುಸರಿಸಿದೆ. ಇದರಿಂದ ನಖ್ವಿ ಅವರಿಗೆ ಜಾಗತಿಕ ಮಟ್ಟದ ಕ್ರಿಕೆಟ್‌ ವೇದಿಕೆಯಲ್ಲಿ ಭಾರಿ ಮುಖಭಂಗ ಆಗಿದೆ.

ಟ್ರೋಫಿ ಇಲ್ಲದೆ ಸಂಭ್ರಮಾಚರಣೆ..

ಫೈನಲ್ ಪಂದ್ಯ ಮುಗಿದ ಬಳಿಕ ರನ್ನರ್-ಅಪ್ ಆದ ಶ್ರೀಲಂಕಾ ತಂಡದ ನಾಯಕಿ ಚಮರಿ ಅಥಾಪತ್ತು ಮತ್ತು ಅವರ ತಂಡಕ್ಕೆ ನಖ್ವಿ ಚೆಕ್ ಹಾಗೂ ಪದಕಗಳನ್ನು ವಿತರಿಸಿದರು. ಆದರೆ, ಭಾರತೀಯ ಆಟಗಾರರು ಟ್ರೋಫಿ ಸ್ವೀಕರಿಸಲು ವೇದಿಕೆಗೆ ಬರಲಿಲ್ಲ. ಅಂತಿಮವಾಗಿ ಟ್ರೋಫಿ ಇಲ್ಲದೆಯೇ ಭಾರತೀಯ ಆಟಗಾರರು ಮೈದಾನದಲ್ಲಿ ಚಾಂಪಿಯನ್ಸ್ ಸಂಭ್ರಮಾಚರಣೆ ಮಾಡಿ ಗಮನ ಸೆಳೆದರು. 2025ರಲ್ಲೂ ಸಹ ಸೂರ್ಯಕುಮಾರ್ ಯಾದವ್‌ ನೇತೃತ್ವದ ಟೀಮ್ ಇಂಡಿಯಾ ಪಡೆ ಇದನ್ನೇ ಮಾಡಿತ್ತು.

ಕೋಚ್ ಅಮೋಲ್ ಮಜುಂದಾರ್ ಹೇಳಿದ್ದೇನು?

ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತ ತಂಡದ ತರಬೇತುದಾರ ಅಮೋಲ್ ಮಜುಂದಾರ್, 'ಇದು ಬಿಸಿಸಿಐ ತೆಗೆದುಕೊಂಡಿರುವ ಅಧಿಕೃತ ನಿಲುವು, ನಾವು ಅದನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಟ್ರೋಫಿ ಸಿಗಲಿ ಅಥವಾ ಸಿಗದಿರಲಿ, ನಾವು ಏಷ್ಯಾ ಕಪ್ ಚಾಂಪಿಯನ್ಸ್ ಎಂಬುದು ಅಧಿಕೃತವಾಗಿದೆ. ಈ ಸರಣಿ ನಮಗೆ ಮುಗಿದಿದೆ ಮತ್ತು ಚಾಂಪಿಯನ್ ಆಗಿ ಹೊರಹೊಮ್ಮಿರುವುದಕ್ಕೆ ಹೆಮ್ಮೆ ಇದೆ,' ಎಂದು ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ನಖ್ವಿ ಅವರಿಗೆ ಟೀಮ್ ಇಂಡಿಯಾ ಆಟಗಾರ್ತಿಯರು ಯಾಕೆ ಟ್ರೋಫಿ ಸ್ವೀಕರಿಸಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+