Get Updates
Get notified of breaking news, exclusive insights, and must-see stories!

ಆರ್‌ಸಿಬಿ ಈ ಬಾರಿ ಕಪ್‌ ಗೆಲ್ಲದಿದ್ರೆ ಗಂಡನಿಗೆ ವಿಚ್ಛೇದನ ನೀಡೋದು ಗ್ಯಾರಂಟಿ: ಮಹಿಳೆ ಪೋಸ್ಟರ್ ಭಾರೀ ವೈರಲ್

RCB Fan: ಐಪಿಎಲ್‌ 2025 ಮೊದಲ ಕ್ವಾಲಿಫೈಯರ್‌ನಲ್ಲೇ ಪಂಜಾಬ್‌ ಕಿಂಗ್ಸ್‌ ವಿರುದ್ಧ ಗೆದ್ದು ಆರ್‌ಸಿಬಿ ಫೈನಲ್‌ ಪ್ರವೇಶಿದೆ. ಇದೇ ಪಂದ್ಯದ ವೇಳೆ ವಿವಾಹಿತ ಮಹಿಳೆಯೊಬ್ಬರು ಪ್ರದರ್ಶಿಸಿದ ಪೋಸ್ಟರ್ವೊಂದು ಇದೀಗ ಸಾಮಾಜಿಕ ಜಾಲತಣಾದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಹಾಗಾದ್ರೆ ಅದರಲ್ಲಿ ಏನಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಈ ಬಾರಿಯ ಐಪಿಎಲ್‌ ಸೀಸನ್‌ನಲ್ಲಿ ಆರಂಭದಿಂದಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಈ ಮೂಲಕ ಭರ್ಜರಿಯಾಗಿ ಫೈನಲ್‌ ಪ್ರವೇಶ ಮಾಡಿದೆ. ಪಂಜಾಬ್‌ ಕಿಂಗ್ಸ್ ವಿರುದ್ಧ ಮೊಲದ ಕ್ವಾಲಿಫೈಯರ್ ಪಂದ್ಯದಲ್ಲೇ ಗೆದ್ದು ಬೀಗುವ ಮೂಲಕ ಪೈನಲ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿತು.

Woman Vows To Divorce Husband If RCB Doesn t Win IPL 2025 trophy Poster huge viral

ಮೊದಲ ಕ್ವಾಲಿಫೈರ್ ಪಂದ್ಯವು ಚಂಢೀಗಡದ ಮುಲ್ಲನ್‌ಪುರ್‌ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಕಿಂಗ್ಸ್‌ 14.1 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 101 ರನ್‌ ಕಲೆಹಾಕಿ ಆರ್‌ಸಿಬಿಗೆ 102 ಸಾಧಾರಣ ರನ್‌ಗಳ ಗುರಿ ನೀಡಿತು.

ಈ ಗುರಿ ಬೆನ್ನತ್ತಿದ್ದ ಆರ್‌ಸಿಬಿ ತಂಡವು ಕೇವಲ 10 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 106 ರನ್‌ಗಳನ್ನು ಕಲೆಹಾಕುವ ಮೂಲಕ ಭರ್ಜರಿಯಾಗಿ ಗೆದ್ದು ಬೀಗುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿತು. ಇನ್ನೂ ಈ ಪಂದ್ಯದ ವೇಳೆ ಮಹಿಳೆಯೊಬ್ಬರು ಪೋಸ್ಟರ್‌ವೊಂದನ್ನು ಪ್ರದರ್ಶಿಸಿದ್ದು, ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್‌ ಆಗುತ್ತಿದೆ.

"ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಈ ಬಾರೀ ಐಪಿಎಲ್‌ ಟ್ರೋಫಿ ಗೆಲ್ಲದಿದ್ದರೆ, ನಾನು ನನ್ನ ಪತಿಗೆ ವಿಚ್ಛೇದನ ನೀಡುತ್ತೇನೆ," ಎಂದು ಬರೆದಿರುವ ಪೋಸ್ಟರ್‌ವೊಂದನ್ನು ಪಂದ್ಯದ ವೇಳೆ ಪ್ರದರ್ಶನ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಅದರಲ್ಲಿ ವಿರಾಟ್ ಕೊಹ್ಲಿ ಅವರ ಹೆಸರನ್ನು ಕೂಡ ಬರೆದು ಗಮನ ಸೆಳೆದಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಇದಕ್ಕೆ ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

"ಒಬ್ಬ ಮಹಿಳೆಯ ಸಂಸಾರವನ್ನು ಉಳಿಸಬೇಕೆಂದರೆ ಆರ್‌ಸಿಬಿ ತಂಡವು ಈ ಬಾರಿಯಾದ್ರೂ ಐಪಿಎಲ್‌ ಟ್ರೋಫಿ ಗೆಲ್ಲಲೇಬೇಕು," ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು "ನೀವು ಧೈರ್ಯವಾಗಿರಿ, ಯಾವುದೇ ಕಾರಣಕ್ಕೂ ವಿಚ್ಛೇದನ ಕೊಡುವ ಸಂದರ್ಭ ಬರುವುದಿಲ್ಲ. ಯಾಕೆಂದ್ರೆ ಈ ಬಾರಿ ಟ್ರೋಫಿ ಗೆಲ್ಲುವುದೇ ಆರ್‌ಸಿಬಿ ತಂಡ," ಎಂದು ಕಾಮೆಂಟ್‌ ಮಾಡುವ ಮೂಲಕ ಭರವಸೆ ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ.

ಇದಕ್ಕೂ ಮುಂಚೆ ಒಬ್ಬ ಅವಿವಾಹಿತ ಮಹಿಳೆ ಹಾಗೂ ಯುವಕನೊಬ್ಬ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಟ್ರೋಫಿ ಗೆಲ್ಲುವವರೆಗೂ ನಾವು ವಿವಾಹ ಆಗುವುದಿಲ್ಲ ಎಂದು ಬರೆದಿರುವ ಪೋಸ್ಟರ್ ಪ್ರದರ್ಶನ ಮಾಡಿದ್ದು, ಇದು ಸಹ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಐಪಿಎಲ್‌ನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅಂತಾ ಇದ್ರೆ ಅದು ಆರ್‌ಸಿಬಿ ಮಾತ್ರ. ಇದುವರೆಗೂ ಆಡಿರುವ 17ಸೀಸನ್‌ಗಳಲ್ಲೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಹಾಗಂತ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ, ಬದಲಾಗಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದಾರೆ. ಅಲ್ಲದೆ, ನೂರು ಬಾರಿ ಸೋತರೂ ಆರ್‌ಸಿಬಿ ಅಭಿಮಾನಿಗಳಾಗಿಯೇ ಇರುತ್ತೇವೆ ನಾವು ಅಂತಿದ್ದಾರೆ ಅಭಿಮಾನಿಗಳನ್ನು.

ಇನ್ನು ಈ ಬಾರಿ ಅಂದರೆ 18ನೇ ಸೀಸನ್‌ನಲ್ಲಿ ಆರ್‌ಸಿಬಿ ಟ್ರೋಫಿ ಗೆಲ್ಲುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಯಾಕಂದ್ರೆ ಆರಂಭದಿಂದಲೂ ಬ್ಯಾಟಿಂಗ್‌, ಬೌಲಿಂಗ್ ಎರಡೂ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಫೈನಲ್‌ ಕೂಡ ಪ್ರವೇಶ ಮಾಡಿದೆ. ಫೈನಲ್‌ ಮ್ಯಾಚ್‌ ಜೂನ್‌ 3ರಂದು ನಡೆಯಲಿದ್ದು, ಅಂದು ಟ್ರೋಫಿ ಎತ್ತುವುದೇ ಬೆಂಗಳೂರು ತಂಡ ಅಂತಿದ್ದಾರೆ ಅಭಿಮಾನಿಗಳು. ಜೂನ್‌ 1ರಂದು ಪಂಜಾಬ್‌ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್‌ ಕ್ವಾಲಿಫೈಯರ್ 2 ಪಮದ್ಯವನ್ನು ಆಡಲಿದ್ದು, ಇದರಲ್ಲಿ ಗೆದ್ದ ಟೀಂ ಆರ್‌ಸಿಬಿ ವಿರುದ್ಧ ಫೈನಲ್‌ ಆಡಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+