WPL 2025 Auction: ₹1.6 ಕೋಟಿ ಪಡೆದ 16 ವರ್ಷದ ಜಿ ಕಮಲಿನಿ ಯಾರು?
ಮಹಿಳಾ ಪ್ರೀಮಿಯರ್ ಲೀಗ್ 2025ರ ಹರಾಜಿನಲ್ಲಿ ಹಲವು ಆಟಗಾರರ ಅದೃಷ್ಟದ ಬಾಗಿಲು ತೆರೆದಿದೆ. ಮಿನಿ ಹರಜಾದಾರೂ ಹಲವು ಆಟಗಾರ್ತಿಯರು ಕೋಟಿ ಕೋಟಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 16 ವರ್ಷದ ಬ್ಯಾಟರ್ ಕಮಲಿನಿ ಜಿ ಬರೋಬ್ಬರಿ 1.60 ಕೋಟಿ ರೂಪಾಯಿಗೆ ಹರಾಜಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಜುಲೈ 20, 2008ರಲ್ಲಿ ಮಧುರೈನಲ್ಲಿ ಜನಿಸಿದ ಕಮಲಿನಿ ಜಿ ತಮಿಳುನಾಡು ತಂಡಕ್ಕಾಗಿ ಆಡುವ ಮೂಲಕ ಈಗಾಗಲೇ ಗಮನ ಸೆಳೆದಿದ್ದಾರೆ. ಕ್ರಿಕೆಟ್ ಆಡಲೆಂದೇ ಅವರ ಕುಟುಂಬ ಮಧುರೈನಿಂದ ಚೆನ್ನೈಗೆ ಸ್ಥಳಾಂತರವಾಗಿತ್ತು. ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಅವರು, ಭಾರತ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಅಂಡರ್ 19 ಪಂದ್ಯಾವಳಿಯಲ್ಲಿ ತಮಿಳುನಾಡಿಗೆ ಆಡಿದ ಅವರು, ಎಂಟು ಪಂದ್ಯಗಳಲ್ಲಿ 311 ರನ್ ಗಳಿಸುವ ಮೂಲಕ ಮಿಂಚಿದರು. ಕಮಲಿನಿ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ತಮಿಳುನಾಡು ಅಂಡರ್ 19 ಟಿ20 ಟ್ರೋಫಿ ಗೆದ್ದುಕೊಂಡಿತ್ತು.
ಬಳಿಕ ಭಾರತ ಬಿ ತಂಡಕ್ಕೆ ಆಯ್ಕೆಯಾದ ಕಮಲಿನಿ ಜಿ ದಕ್ಷಿಣ ಆಫ್ರಿಕಾ ವಿರುದ್ಧದ ತ್ರಿಕೋನ ಸರಣಿಯ ಫೈನಲ್‌ನಲ್ಲಿ 79 ರನ್ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದರು.
ಅಂಡರ್ 19 ಏಷ್ಯಾಕಪ್‌ನಲ್ಲಿ ಆಡಲು ಸಿದ್ಧತೆ
ದೇಶೀಯ ಕ್ರಿಕೆಟ್ ಮತ್ತು ತ್ರಿಕೋನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನಿಡಿದ ಬಳಿಕ ಕಮಿಲಿನಿ ಭಾರತ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದು, ಮಲೇಷ್ಯಾದಲ್ಲಿ ಇಂದಿನಿಂದ ಆರಂಭವಾಗಿರುವ ಅಂಡರ್ 19 ಮಹಿಳಾ ಏಷ್ಯಾಕಪ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ.
ಭಾನುವಾರ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಜಿ ಕಮಲಿನಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಏನೆಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. 29 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಿತ ಅಜೇಯ 44 ರನ್ ಗಳಿಸಿದ್ದಾರೆ. ಪಾಕಿಸ್ತಾನ 20 ಓವರ್ ಗಳಲ್ಲಿ 67 ರನ್ ಗಳಿಸಿದರೆ, ಭಾರತ 7.5 ಓವರ್ ಗಳಲ್ಲೇ 68 ರನ್ ಗಳಿಸುವ ಮೂಲಕ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಸಿಎಸ್‌ಕೆ ಜೊತೆ ನಂಟು
ಕಮಲಿನಿ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದರು, ಸ್ಪಿನ್ ಬೌಲರ್ ಕೂಡ ಆಗಿದ್ದಾರೆ. ಕಮಲಿನಿಯ ಇಂದಿನ ಯಶಸ್ಸಿನಲ್ಲಿ ಸಿಎಸ್‌ಕೆ ತಂಡದ ಪಾಲು ಕೂಡ ಇದೆ. ಕಮಲಿನಿ ಸಿಎಸ್‌ಕೆ ಅಕಾರೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ತಮಿಳುನಾಡು ಪರ ಆಡಿದ್ದಾರೆ.












Click it and Unblock the Notifications