Virat Kohli: ವಿರಾಟ್ ಕೊಹ್ಲಿ ಆರ್ಸಿಬಿ ಪಾಳಯ ಸೇರೋದ್ಯಾವಾಗ?
ಐಪಿಎಲ್ 2024ರ ಆವೃತ್ತಿಯ ಆರಂಭಕ್ಕೆ ಇನ್ನು ಕೆಲವು ದಿನಗಳಷ್ಟೇ ಬಾಕಿ ಇದೆ. ಈಗಾಗಲೇ ಎಲ್ಲಾ ತಂಡಗಳು ಸಿದ್ದತೆ ಆರಂಭಿಸಿವೆ. ಸಿಎಸ್‌ಕೆ ತಂಡದ ನಾಯಕ ಎಂಎಸ್ ಧೋನಿ ಚೆನ್ನೈಗೆ ಆಗಮಿಸಿದ್ದು ಆಟಗಾರರ ಜೊತೆ ಅಭ್ಯಾಸ ಆರಂಭಿಸಿದ್ದಾರೆ. ಇತ್ತ ಆರ್ ಸಿಬಿ ಕೂಡ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ವಿರಾಟ್ ಕೊಹ್ಲಿ ಆಗಮನಕ್ಕಾಗಿ ಕಾಯುತ್ತಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದರು. ಅವರು ಎರಡನೇ ಮಗುವಿನ ತಂದೆಯಾಗಿರುವುದಾಗಿ ಘೋಷಿಸಿದರು. ಯುಕೆ ಯಲ್ಲಿ ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದು ಅಕಾಯ್ ಕೊಹ್ಲಿ ಎಂದು ಹೆಸರಿಡಲಾಗಿದೆ.

ಆದರೆ ಈಗ ವಿರಾಟ್ ಕೊಹ್ಲಿ ಎಲ್ಲಿದ್ದಾರೆ ಎನ್ನುವ ಮಾಹಿತಿ ಇಲ್ಲ. ಅವರು ಆರ್ ಸಿಬಿ ಪಾಳಯವನ್ನು ಸೇರೋದ್ಯಾವಾಗ ಅಭ್ಯಾಸ ಮಾಡೋದ್ಯಾವಾಗ ಎನ್ನುವ ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿದೆ. ಅವರು ಐಪಿಎಲ್ ಸಹ ಬಿಟ್ಟುಬಿಡುತ್ತಾರೆಯೇ ಎಂದು ಹಲವರು ಆಶ್ಚರ್ಯ ಪಡುತ್ತಿದ್ದಾರೆ.
ಮುಂದಿನ ವಾರ ಬರ್ತಾರಂತೆ
ಕೆಲವು ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ ಮುಂದಿನ ವಾರ ಆರ್ ಸಿಬಿ ತಂಡವನ್ನು ಸೇರುವ ಸಾಧ್ಯತೆಯಿದೆ, ಇದು ಅಫ್ಘಾನಿಸ್ತಾನ ಸರಣಿಯ ನಂತರ ಅವರು ಮೈದಾನಕ್ಕೆ ಇಳಿಯಲಿದ್ದಾರೆ. ಮಾರ್ಚ್ 19 ರಂದು ಬೆಂಗಳೂರಿನಲ್ಲಿ ಆರ್ ಸಿಬಿ ಅನ್ಬಾಕ್ಸ್ ಕಾರ್ಯಕ್ರಮ ನಡೆಯಲಿದ್ದು, ಮಹತ್ವದ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ.
ಕಳೆದ ಮೂರು ತಿಂಗಳಿಂದ ವಿರಾಟ್ ಕೊಹ್ಲಿ ಸಾರ್ವಜನಿಕರ ಸಂಪರ್ಕದಿಂದ ದೂರ ಉಳಿದಿದ್ದಾರೆ. ಅಭಿಮಾನಿಯೊಬ್ಬರು ಕಳೆದ ತಿಂಗಳು ಲಂಡನ್ ಕೆಫೆಯಲ್ಲಿ ನೋಡಿದ್ದಾಗಿ ಫೋಟೊ ಹಂಚಿಕೊಂಡಿದ್ದರು. ಅವರು ಇನ್ನೂ ತಮ್ಮ ಪತ್ನಿ ಅನುಷ್ಕಾ ಶರ್ಮಾ, ಮಗು ಮತ್ತು ಮಗಳು ವಾಮಿಕಾ ಅವರೊಂದಿಗೆ ಯುಕೆಯಲ್ಲಿದ್ದಾರೆ.
ಐಪಿಎಲ್ 2024 ಆಡುತ್ತಾರಾ?
ಹೌದು, ಅವರು ಐಪಿಎಲ್ 2024 ಅನ್ನು ಆಡುತ್ತಾರೆ. ಅವರು ಇಡೀ ಪಂದ್ಯಾವಳಿಗೆ ಲಭ್ಯವಿರುತ್ತಾರೆಯೇ ಎಂಬುದು ಈಗ ಚರ್ಚೆಯ ವಿಷಯವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಗಲಿ, ಕೊಹ್ಲಿಯಾಗಲಿ ಲಭ್ಯತೆಯನ್ನು ಖಚಿತಪಡಿಸಿಲ್ಲ.
ಟಿ 20 ವಿಶ್ವಕಪ್ 2024 ರ ಪಂದ್ಯಾವಳಿಗೆ ಭಾರತ ತಂಡ ಸೇರಲು ಐಪಿಎಲ್‌ನಲ್ಲಿ ಆಡುವುದು ವಿರಾಟ್ ಕೊಹ್ಲಿಗೆ ಅವಶ್ಯಕವಾಗಿದೆ. ಶೀಘ್ರದಲ್ಲೇ ಅವರು ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ.
"ನಮಗೆ ತಿಳಿದಿರುವಂತೆ, ಅವರು ಐಪಿಎಲ್ ಆಡುತ್ತಾರೆ. ಆದರೆ ವಿರಾಟ್ ಯಾವಾಗ ತಂಡಕ್ಕೆ ಸೇರಿಕೊಳ್ಳುತ್ತಾರೆ ಎಂಬುದು ಅವರಿಗೆ ಮತ್ತು ಅವರ ಫ್ರಾಂಚೈಸಿಗೆ ಬಿಟ್ಟದ್ದು. ಅವರು ವಿರಾಮದಲ್ಲಿರುವುದರಿಂದ ನಾವು ಏನನ್ನೂ ಕೇಳಿಲ್ಲ. ಎಲ್ಲಾ ಆಟಗಾರರ ಆಯ್ಕೆಯಲ್ಲಿ ಐಪಿಎಲ್ ದೊಡ್ಡ ಪಾತ್ರವನ್ನು ವಹಿಸುತ್ತದೆ" ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಇನ್ಸೈಡ್‌ಸ್ಪೋರ್ಟ್ ವರದಿ ಮಾಡಿದೆ.












Click it and Unblock the Notifications