Shreyanka Patil: RCB ಸ್ಟಾರ್ ಶ್ರೇಯಾಂಕಾ ಪಾಟೀಲ್‌ ಜೆರ್ಸಿ ನಂಬರ್‌ ಎಷ್ಟು? ಆ ಸಂಖ್ಯೆಗೂ ಅವರಿಗೂ ಏನು ಸಂಬಂಧ?

ಟೀಮ್ ಇಂಡಿಯಾದಲ್ಲಿ ಸದ್ಯ ಭಾರೀ ಸದ್ದು ಮಾಡುತ್ತಿರುವ ಆಟಗಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಪ್ಲೇಯರ್‌ ಶ್ರೇಯಾಂಕಾ ಪಾಟೀಲ್‌. ಆರ್‌ಸಿಬಿ ತಂಡದ ಭರವಸೆಯ ಆಟಗಾರ್ತಿ. ಇವರ ಬಗ್ಗೆ ಜನರು ಹೆಚ್ಚಾಗಿ ತಿಳಿದುಕೊಳ್ಳಲು ಬಯಸುತ್ತಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸುವಲ್ಲಿ ಶ್ರೇಯಾಂಕಾ ಪಾಟೀಲ್‌ ಮಹತ್ವದ ಪಾತ್ರವನ್ನು ವಹಿಸಿದ್ದರು. ಆರ್‌ಸಿಬಿ ಪರ ಆಡಿದ 8 ಪಂದ್ಯಗಳಲ್ಲಿ 12.07 ಸರಾಸರಿಯಲ್ಲಿ 13 ವಿಕೆಟ್‌ಗಳನ್ನು ಕಬಳಿಸಿ ಎಲ್ಲರ ಮನ ಗೆದ್ದಿದ್ದರು. ಇವರ ಬಿಗುವಿನ ದಾಳಿ ಇವರನ್ನು ಟೀಮ್ ಇಂಡಿಯಾ ಫ್ಯೂಚರ್ ಸ್ಟಾರ್‌ ಎಂದೇ ಬಿಂಬಿಸಲಾಗುತ್ತಿದೆ.

What is RCB star Shreyanka Patil s jersey number What does that number have to do with them

ಆರ್‌ಸಿಬಿ ಪರ ಮಿಂಚಿದ್ದ ಶ್ರೇಯಾಂಕಾ

ಕರ್ನಾಟಕದ ಹೆಮ್ಮೆಯ ಕುವರಿ ಶ್ರೇಯಾಂಕಾ ಪಾಟೀಲ್ ಅವರ ಕ್ರಿಕೆಟ್ ವೃತ್ತಿಜೀವನ ಉತ್ತಮವಾಗಿದೆ. ಕರ್ನಾಟಕ ಅಂಡರ್-19 ತಂಡದಿಂದ ಇವರು ಕ್ರಿಕೆಟ್‌ ಅಂಗಳದಲ್ಲಿ ಸದ್ದು ಮಾಡಲು ಆರಂಭಿಸಿದರು. 2020-21ರಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡದ ಪರ ಶ್ರೇಯಾಂಕಾ 20 ವಿಕೆಟ್ ಕಬಳಿಸಿ ಅಬ್ಬರಿಸಿದರು. ಶ್ರೇಯಾಂಕಾ ಪಾಟೀಲ್ ಅವರ WPLನಲ್ಲಿ ಮೊದಲ ಬಾರಿಗೆ ಆಡುವ ಅವಕಾಶವನ್ನು ಪಡೆದರು. ಶ್ರೇಯಾಂಕಾ ಪಾಟೀಲ್ ಈ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲಿದ್ದಾರೆ. 2023 ರಲ್ಲಿ ಶ್ರೇಯಾಂಕಾ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು ಮತ್ತು ಶ್ರೇಯಾಂಕಾ 2023 ರಲ್ಲಿ ವಿಶ್ವಕಪ್ ಕೂಡ ಆಡಿದ ಅನುಭ ಇವರದ್ದಾಗಿದೆ.

ಈ ವರ್ಷ ಮೊದಲ ಬಾರಿಗೆ ಶ್ರೇಯಾಂಕ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಕಾಣಿಸಿಕೊಂಡರು. ಇದು ಅವರ ಮೊದಲ ಸೀಸನ್. ಶ್ರೇಯಾಂಕಾ ಪಾಟೀಲ್ ಅವರನ್ನು ರಾಯಲ್ ಚಾಲೆಂಜರ್ ಬೆಂಗಳೂರು 2024 ರಲ್ಲಿ 10 ಲಕ್ಷ ರೂಪಾಯಿಗೆ ಖರೀದಿಸಿತು. ಶ್ರೇಯಾಂಕಾ ಪಾಟೀಲ್ ಅತ್ಯುತ್ತಮ ಆಲ್ ರೌಂಡರ್.

ಆಟ ಹಾಗೂ ಪಾಠದಲ್ಲೂ ಶ್ರೇಯಾಂಕಾ ಉತ್ತಮರಾಗಿದ್ದಾರೆ. ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಣ ಪೂರೈಸಿದರು. ಮುಂದಿನ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲೇ ಮುಗಿಸಿದರು. ಅವಳು ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದಳು ಆದರೆ ಅವಳು ಕ್ರಿಕೆಟ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

What is RCB star Shreyanka Patil s jersey number What does that number have to do with them

ಕುಟಂಬದ ಹಿನ್ನೆಲೆ

ಶ್ರೇಯಾಂಕಾ ಪಾಟೀಲ್ ಅವರು 31 ಜುಲೈ 2002 ರಂದು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ರಾಜೇಶ್ ಪಾಟೀಲ್ ಸಹ ಕ್ರಿಕೆಟಿಗ. ಅಲ್ಲದೆ ದೊಡ್ಡ ಉದ್ಯಮಿ, ತಾಯಿ ಗೃಹಿಣಿ. ಅವರಿಗೆ ಒಬ್ಬ ಸಹೋದರ ಮತ್ತು ಒಬ್ಬ ಸಹೋದರಿ ಇದ್ದಾರೆ, ಅವರ ಸಹೋದರನ ಹೆಸರು ಆದರ್ಶ ಪಾಟೀಲ್ ಮತ್ತು ಸಹೋದರಿ ಅವರ ಹೆಸರು ಭೂಮಿಕಾ ಪಾಟೀಲ್. ಶ್ರೇಯಾಂಕಾ ಆಲ್ ರೌಂಡರ್ ಆಟಗಾರ್ತಿಯಾಗಿದ್ದು, ಅವರು ಬಲಗೈ ಬ್ಯಾಟಿಂಗ್ ಮತ್ತು ಬಲಗೈ ಆಫ್ ಬ್ರೇಕ್ ಬೌಲಿಂಗ್ ಮಾಡುತ್ತಾರೆ.

ಬಾಲ್ಯದಿಂದಲೂ ಕ್ರಿಕೆಟ್ ನೋಡುವುದೆಂದರೆ ತುಂಬಾ ಇಷ್ಟ. ಐಪಿಎಲ್ 2013 ರ ನಂತರ ಅವರು ಕ್ರಿಕೆಟಿಗರಾಗಲು ಯೋಚಿಸಿದ್ದರು. ಅಲ್ಲಿಂದ ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಕ್ರಿಕೆಟ್‌ ಕಲಿತು, ಈಗ ವಿಶ್ವದ ಸ್ಟಾರ್ ಆಟಗಾರರಿಗೆ ಕಾಟ ನೀಡುತ್ತಿದ್ದಾರೆ. ಈ ವರ್ಷ ಮೊದಲ ಬಾರಿಗೆ ಶ್ರೇಯಾಂಕ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಕಾಣಿಸಿಕೊಂಡರು. ಇದು ಅವರ ಮೊದಲ ಸೀಸನ್. ಶ್ರೇಯಾಂಕಾ ಪಾಟೀಲ್ ಅವರನ್ನು ರಾಯಲ್ ಚಾಲೆಂಜರ್ ಬೆಂಗಳೂರು 2024 ರಲ್ಲಿ 10 ಲಕ್ಷ ರೂಪಾಯಿಗೆ ಖರೀದಿಸಿತು. ಶ್ರೇಯಾಂಕಾ ಪಾಟೀಲ್ ಅತ್ಯುತ್ತಮ ಆಲ್ ರೌಂಡರ್.

What is RCB star Shreyanka Patil s jersey number What does that number have to do with them

ಜೆರ್ಸಿ ನಂಬರ್ ಎಷ್ಟು?

ಶ್ರೇಯಾಂಕಾ ಪಟೇಲ್‌ ಬಗ್ಗೆ ಜನರಿಗೆ ಈಗ ಹೆಚ್ಚು ಹಚ್ಚು ತಿಳಿದು ಕೊಳ್ಳಲು ಬಯಸಿದ್ದಾರೆ. ಅಂದಹಾಗೇ ಅವರ ಜೆರ್ಸಿ ನಂಬರ್ ಏನು ಎಂಬ ಕುತೂಹಲ ಜನರಲ್ಲಿ ಮೂಡಿದೆ. ಶ್ರೇಯಾಂಕಾ ಅವರ ಜೆರ್ಸಿ ನಂಬರ್ 31. ಈ ಸಂಖ್ಯೆಗೂ ಅವರಿಗೂ ವಿಶೇಷ ಸಂಬಂಧ ಇದೆ. ಅವರ ನರ್ಸಿ ಶಾಲೆಯಿಂದ 10ನೇ ತರಗತಿಯ ವರೆಗೆ ಇವರ ರೋಲ್‌ ನಂಬರ್‌ 31. ಅಲ್ಲದೆ ಅವರ ಹುಟ್ಟಿದ್ದು ಸಹ 31ನೇ ತಾರೀಕಾಗಿದ್ದು, ಇವರು ಈ ನಂಬರ್‌ ಜೆರ್ಸಿ ಹಾಕಿಕೊಳ್ಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+