• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಆರ್‌ಎಸ್ ಹಿನ್ನೀರಿನಲ್ಲಿ ಸಾಹಸ ಜಲಕ್ರೀಡೆ; ಶುಲ್ಕದ ವಿವರ ಇಲ್ಲಿದೆ ನೋಡಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್‌, 30: ರೋಮಾಂಚಕಾರಿ ಅನುಭವ ನೀಡುವ ಜಲ ಸಾಹಸ ಕ್ರೀಡೆಗಳಿಗೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, "ಸೆಪ್ಟೆಂಬರ್‌ 30ರಿಂದ ಅಕ್ಟೋಬರ್ 6ರವರೆಗೆ ನಿತ್ಯ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಜಲ ಸಾಹಸ ಕ್ರೀಡೆಯನ್ನು ಆಯೋಜಿಸಲಾಗಿದೆ. ಕಾವೇರಿ ಹಿನ್ನೀರಿನ ವಿಹಂಗಮ ನೋಟ ಕಣ್ತುಂಬಿಕೊಳ್ಳಲು ಇದೊಂದು ಸದಾವಕಾಶವಾಗಿದೆ. ರಿಯಾಯಿತಿ ದರದಲ್ಲಿ ಸಾರ್ವಜನಿಕರಿಗೆ ಸಾಹಸ ಕ್ರೀಡೆಗಳನ್ನು ಪರಿಚಯಿಸಲಾಗುತ್ತಿದೆ. ಎಲ್ಲರೂ ಈ ಸೌಲಭ್ಯ ಬಳಕೆ ಮಾಡಿಕೊಂಡು ವಿಶೇಷ ಅನುಭವ ಪಡೆದುಕೊಳ್ಳಬೇಕು," ಎಂದರು.

ದಸರಾ ಕ್ರೀಡಾಕೂಟಕ್ಕೆ ಒಲಿಂಪಿಕ್ಸ್‌ ವಿಜೇತೆಯಿಂದ ಚಾಲನೆ; ಕ್ರೀಡೆಗೆ ಸ್ಫೂರ್ತಿಯಾದ ಸಾಕ್ಷಿದಸರಾ ಕ್ರೀಡಾಕೂಟಕ್ಕೆ ಒಲಿಂಪಿಕ್ಸ್‌ ವಿಜೇತೆಯಿಂದ ಚಾಲನೆ; ಕ್ರೀಡೆಗೆ ಸ್ಫೂರ್ತಿಯಾದ ಸಾಕ್ಷಿ

ಪ್ರವಾಸಿಗರಿಗೆ ವಿಶೇಷ ಅನುಭವ

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಹಾಸ ಅಕಾಡೆಮಿ ಸಹಯೋಗದಲ್ಲಿ ದಸರಾ ಸಾಹಸೋತ್ಸವ ಸಮಿತಿ ಜಲಸಾಹಸ ಕ್ರೀಡೆಯನ್ನು ಹಮ್ಮಿಕೊಂಡಿದೆ. ದಸರೆಗೆ ಬಂದವರಿಗೆ ಇದೊಂದು ವಿಶೇಷ ಅನುಭವ ನೀಡಲಿದೆ ಎಂದು ಹೇಳಿದರು.

ಕ್ರೀಡೆಗಳ ಶುಲ್ಕದ ವಿವರ

ಸ್ಪೀಡ್ ಬೋಟ್‌ಗೆ 150 ರೂಪಾಯಿ, ರ್ಯಾಪ್ಟಿಂಗ್‌ಗೆ 50 ರೂಪಾಯಿ, ಜೆಟ್ ಸ್ಕಿಗೆ 250 ರೂಪಾಯಿ, ಸ್ಪೀಡ್ ಬೋಟ್‌ಗೆ 150 ರೂಪಾಯಿ, ಬನಾನ ರೈಡ್ 200 ರೂ., ಬಂಪರ್ ರೈಡ್ 250 ರೂ., ಕಯಾಕಿಂಗ್‌ಗೆ 100 ರೂ., ಚಾಲೆಂಜ್ ರೋಪ್ ಚಟುವಟಿಕೆಗಳಿಗೆ 50 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ರೋಪ್ ಚಟುವಟಿಕೆಗಳಾದ ಜುಮರಿಂಗ್, ರ್ಯಾಪಲಿಂಗ್, ಜಿಪ್ ಲೈನ್ ಚಟುವಟಿಕೆಗಳು ನಡೆಯಲಿವೆ ಎಂದು ಕ್ರೀಡಾ ಉಪಸಮಿತಿ ವಿಶೇಷಾಧಿಕಾರಿಯಾಗಿರುವ ಜಿಲ್ಲಾ ಎಸ್‌ಪಿ ಆರ್.ಚೇತನ್ ವಿವರಿಸಿದರು. ಹೆಚ್ಚಿನ ಮಾಹಿತಿಗಾಗಿ 8971553337 ಈ ದೂರವಾಣಿ ನಂಬರ್‌ಗೆ ಸಂಪರ್ಕಿಸಬಹುದು ಎಂದು ಮಾಹಿತಿಯನ್ನು ನೀಡಿದ್ದಾರೆ.

ಇನ್ನು ದಸರಾ ಕ್ರೀಡಾಕೂಟಕ್ಕೆ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ, ಕುಸ್ತಿಪಟು ಸಾಕ್ಷಿ ಮಲ್ಲಿಕ್ ಅವರು ಆಗಮಿಸಿರುವುದು ಕ್ರೀಡಾಪಟುಗಳಿಗೆ ಸ್ಫೂರ್ತಿ ಸಿಕ್ಕಂತಾಗಲಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದ್ದರು. ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಚಾಮುಂಡಿ ವಿಹಾರ್‌ನಲ್ಲಿ ಆಯೋಜಿಸಿರುವ ದಸರಾ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಲಾಯಿತು. ಬಳಿಕ ಮಾತನಾಡಿದ ಸಚಿವರು, ದಸರಾ ಕುಸ್ತಿ ಪಂದ್ಯಾವಳಿಗೆ ವಿವಿಧ ರಾಜ್ಯಗಳಿಂದ ಕುಸ್ತಿಪಟುಗಳು ಆಗಮಿಸಿದ್ದಾರೆ. ಸಾಕ್ಷಿ ಮಲ್ಲಿಕ್ ಅವರು ಕುಸ್ತಿಪಟ್ಟುಗಳಿಗೆ ಸಲಹೆ, ಸೂಚನೆಗಳನ್ನು ನೀಡಬೇಕು ಎಂದರು.

4,600 ಕ್ರೀಡಾ ಸ್ಪರ್ಧಿಗಳು, 800 ತಾಂತ್ರಿಕ ಸಿಬ್ಬಂದಿ ಸೇರಿದಂತೆ ಒಟ್ಟು 5,400ಕ್ಕೂ ಹೆಚ್ಚು ಜನರು ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಕ್ರೀಡಾಪಟುಗಳಿಗೆ ಸಕಲ ಸೌಕರ್ಯ ಕಲ್ಪಿಸುವುದರ ಜೊತೆಗೆ ಕ್ರೀಡಾ ಇಲಾಖೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಸಚಿವ ನಾರಾಯಣ ಗೌಡ ಅವರು ಮಾಡುತ್ತಿದ್ದಾರೆ ಎಂದು ಹೇಳಿದ್ದರು.

ಮಕ್ಕಳ ದಸರಾದಲ್ಲಿ ಪುಟಾಣಿಗಳ ಕಲರವ

ಇನ್ನು ಬಾಲಪ್ರತಿಭೆ ವಂಶಿಕಾ ಅಂಜನಿ ಕಶ್ಯಪ್‌ರಿಂದ ಈ ಬಾರಿಯ ಮಕ್ಕಳ ದಸರಾವನ್ನು ಉದ್ಘಾಟಿಸಲಾಯಿತು. ಬಾಲಕಿ ಧವನಿ ನಿಮಿಷದಲ್ಲಿ 224 ಕ್ಷೇತ್ರದ ಹೆಸರು ಹೇಳುವ ಸ್ಮರಣ ಶಕ್ತಿ ಈ ಬಾರಿ ಮಕ್ಕಳ ದಸರಾಗೆ ನೈಜ ಕಳೆ ತಂದುಕೊಟ್ಟಿತು. ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿರುವ ರಿಯಾಲಿಟಿ ಶೋ ಖ್ಯಾತಿಯ ಬಾಲ ಪ್ರತಿಭೆ ವಂಶಿಕಾ ಅಂಜನಿ ಕಶ್ಯಪ್ ಅತಿಥಿಯಾಗಿ ಪಾಲ್ಗೊಂಡಿದ್ದರು. ವಿಕ್ರಾಂತ್ ರೋಣ ಚಿತ್ರದ ರಾ..ರಾ.. ರಕ್ಕಮ್ಮ ಹಾಡಿಗೆ ನೃತ್ಯ ಮಾಡುವ ಮೂಲಕ ನೆರೆದಿದ್ದ ವಿದ್ಯಾರ್ಥಿಗಳನ್ನು ಮನರಂಜಿಸಿದ್ದರು. ಜೊತೆಗೆ ಗಿನ್ನಿಸ್ ಬುಕ್ ಆಫ್‌ ರೆಕಾರ್ಡ್ ದಾಖಲೆ ಮಾಡಿರುವ ಧವನಿ ಎಂಬ ಪುಟ್ಟ ಬಾಲಕಿ 224 ವಿಧಾನ ಸಭಾ ಕ್ಷೇತ್ರದ ಹೆಸರನ್ನು ಒಂದು ನಿಮಿಷದಲ್ಲಿ ಹೇಳಿ ಅಚ್ಚರಿ ಮೂಡಿಸಿದರು.

ಗಮನ ಸೆಳೆದ ಕರಕುಶಲ ವಸ್ತುಪ್ರದರ್ಶನ

ಮಕ್ಕಳ ದಸರಾ ಅಂಗವಾಗಿ ಜಗನ್ಮೋಹನ ಅರಮನೆ ಆವರಣದಲ್ಲಿ ಏರ್ಪಡಿಸಲಾಗಿರುವ ವಿಜ್ಞಾನ ಹಾಗೂ ಕರಕುಶಲ ವಸ್ತು ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಮತ್ತು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು. ವಸ್ತು ಪ್ರದರ್ಶನದಲ್ಲಿ ಜಿಲ್ಲೆಯ ಎಚ್.ಡಿ.ಕೋಟೆ ಸರ್ಕಾರಿ ಶಾಲಾ ಮಕ್ಕಳು ಶಿಕ್ಷಣದಲ್ಲಿ ಚಿತ್ರಕಲೆಯ ಉಪಯುಕ್ತತೆ, ಭೌಗೋಳಿಕ ಮತ್ತು ಪ್ರಾಕೃತಿಕ ವೈಪರೀತ್ಯಕ್ಕೆ ಕಾರಣಗಳು, ಪರಿಣಾಮಗಳು, ಪಿರಿಯಾಪಟ್ಟಣ ಶಾಲಾ ಮಕ್ಕಳಿಂದ ಕನ್ನಡದ ಶ್ರೇಷ್ಠ ಕವಿ ಪರಂಪರೆ, ಟಿ.ನರಸೀಪುರದಿಂದ ಶಿಕ್ಷಣ ಇಲಾಖೆಯ ಪ್ರೋತ್ಸಾಹದಾಯಕ ಯೋಜನೆಗಳು, ಕೆ.ಆರ್.ನಗರದ ಶಾಲಾ ಮಕ್ಕಳಿಂದ ಕಲಿಕಾ ಚೇತರಿಕೆ ಕುರಿತು ಪ್ರದರ್ಶನ ಗಮನ ಸೆಳೆದಿವೆ.

ಶಾಲೆಗಳ ಕಾರ್ಯಕ್ರಮಗಳ ಪಟ್ಟಿ

ಇನ್ನು ನಂಜನಗೂಡು ಶಾಲೆಯಿಂದ ಮೈಸೂರು ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ, ಮೈಸೂರು ದಕ್ಷಿಣ, ಉತ್ತರ ಹಾಗೂ ಗ್ರಾಮಾಂತರ ವಲಯದ ಸರ್ಕಾರಿ ಶಾಲಾ ಮಕ್ಕಳಿಂದ ಯೋಗ, ಸ್ವಾಸ್ಥ್ಯ ಹಾಗೂ ಕೊರೊನಾ ಮುನ್ನೆಚ್ಚರಿಕೆ, ಕಲಿಕಾ ಪ್ರಕ್ರಿಯೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಕುರಿತು ವಸ್ತು ಪ್ರದರ್ಶನ ಗಮನ ಸೆಳೆಯಿತು.

English summary
MLA GT DeveGowda launched water games in KRS backwaters. Entry fee and other details here Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X