T20 World Cup: ವಿರಾಟ್ ಕೊಹ್ಲಿ ಆಟ ಕಂಡು ಎದುರಾಳಿಗಳಿಗೆ ನಡುಕ
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಭರ್ಜರಿ ಬ್ಯಾಟಿಂಗ್‌ನಿಂದಲೇ ಸುದ್ದಿಯಲ್ಲಿ ಇರುತ್ತಾರೆ. ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ವಿರಾಟ್ ಅಮೋಘ ಬ್ಯಾಟ್ ಮೂಲಕ ಗಮನ ಸೆಳೆದರು. ಆದರೆ, ವಿರಾಟ್ ಫೀಲ್ಡಿಂಗ್ ಮಾಡುವಾಗ ಅವರನ್ನು ಕಡೆಗಣಿಸುವ ಅಗತ್ಯವೇ ಇಲ್ಲ. ಚೇಸಿಂಗ್ ಸ್ಟಾರ್ ಫೀಲ್ಡಿಂಗ್ ಕಂಡು ಎದುರಾಳಿಗಳು ಸ್ಟನ್ ಆಗಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ 2024ರ ಎಲಿಮಿನೇಟರ್ ಪಂದ್ಯಗಳು ನಡೆದವು. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಕಾದಾಟ ನಡೆಸಿತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 172 ರನ್ ಸೇರಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ ಇನ್ನು ಆರು ಎಸೆತ ಬಾಕಿ ಇರುವಂತೆ 6 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

ಬ್ಯಾಟಿಂಗ್ ಕಮಾಲ್
ಈ ಪಂದ್ಯದಲ್ಲಿ ಆರ್‌ಸಿಬಿ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಬ್ಬರವನ್ನು ಕಂಡು ಎದುರಾಳಿ ಬ್ಯಾಟರ್‌ಗಳು ಸ್ಟನ್ ಆಗಿದ್ದಾರೆ. ಮೊದಲು ಬ್ಯಾಟ್ ಮಾಡುವಾಗ ವಿರಾಟ್ ಕೊಹ್ಲಿ 24 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 33 ರನ್ ಬಾರಿಸಿ ತಂಡಕ್ಕೆ ನೆರವಾದರು. ನಂತರ ಫೀಲ್ಡಿಂಗ್ ಮಾಡುವಾಗಲೂ ತಂಡಕ್ಕೆ ನೆರವಾದರು.
ಫೀಲ್ಡಿಂಗ್‌ನಲ್ಲಿ ಸೂಪರ್ ಸ್ಟಾರ್
ವಿರಾಟ್ ಕೊಹ್ಲಿ ಅವರ ಕ್ಲಾಸಿಕ್ ಫೀಲ್ಡಿಂಗ್ ಕಂಡು ಮೈದಾನದಲ್ಲಿದ್ದ ಅಭಿಮಾನಿಗಳು ಸ್ಟನ್ ಆದರು. ವಿರಾಟ್ ಕೊಹ್ಲಿ ಅವರ ಫೀಲ್ಡಿಂಗ್‌ಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಧ್ರುವ್ ಜುರೇಲ್ ಅವರನ್ನು ಔಟ್ ಮಾಡಿದ ರೀತಿಯನ್ನು ಕಂಡು ರಾಜಸ್ಥಾನ ನಿಜಕ್ಕೂ ನಿಬ್ಬೆರಗಾಯಿತು.
Virat Kohli 🫡#RRvRCB #IPLonJioCinema #TATAIPL #TATAIPLPlayoffs pic.twitter.com/2xpGjC6YTn
— JioCinema (@JioCinema) May 22, 2024
ಕ್ಯಾಮರೂನ್ ಗ್ರೀನ್ ಅವರ ಶಾರ್ಟ್ ಬಾಲ್‌ನ್ನು ರಿಯಾನ್ ಪರಾಗ್ ಸ್ಕ್ವೇರ್ ಆಫ್‌ದಿ ಆನ್ ಸೈಡ್‌ನ ಬೌಂಡರಿ ಗೆರೆಯತ್ತ ಅಟ್ಟಿದರು. ಆಗ ತಮ್ಮ ಎಡಭಾಗದಿಂದ ಓಡಿ ಬಂದ ವಿರಾಟ್ ಕೊಹ್ಲಿ ಚಿರತೆಯಂತೆ ಫೀಲ್ಡಿಂಗ್ ಮಾಡಿದರು. ಅಷ್ಟು ದೂರದಿಂದ ಓಡಿ ಬಂದು ಥ್ರೋ ಮಾಡಿದರೂ ಸಹ ಅವರ ಥ್ರೋ ಪರ್ಫೆಕ್ಟ್ ಆಗಿತ್ತು. ಚೆಂಡು ನೇರವಾಗಿ ಕ್ಯಾಮರೂನ್ ಗ್ರೀನ್ ಕೈಗೆ ಸೇರಿತು.
ಗ್ರೀನ್ ಚೆಂಡನ್ನು ಹಿಡಿದು ಸ್ಟಂಪ್‌ಗೆ ಹಚ್ಚಿದರು. ಇದರಿಂದ ಪಂದ್ಯದ ಚಿತ್ರಣವೇ ಕೆಲವು ಕ್ಷಣಗಳ ಕಾಲ ಬದಲಾಯಿತು. ಇವರ ಸೂಪರ್ ಫೀಲ್ಡಿಂಗ್ ಕಂಡು ರಾಜಸ್ಥಾನ ಬ್ಯಾಟರ್‌ಗೆ ತನ್ನ ಕಣ್ಣುಗಳನ್ನು ತನಗೇ ನಂಬಲು ಆಗಲೇ ಇಲ್ಲ.
ಎದುರಾಳಿಗಳಿಗೆ ಶುರುವಾಗಿದೆ ನಡುಕ
ವಿರಾಟ್ ಕೊಹ್ಲಿ ಅವರ ಕ್ಲಾಸಿಕ್ ಫೀಲ್ಡಿಂಗ್ ಕಂಡು ನಿಜಕ್ಕೂ ಎದುರಾಳಿ ದೇಶಗಳ ಆಟಗಾರರಿಗೆ ನಡುಕ ಹುಟ್ಟಿಸಿದೆ. ವಿರಾಟ್ ಬರೀ ಬ್ಯಾಟ್‌ನಿಂದ ಅಷ್ಟೇ ಅಲ್ಲ ಫೀಲ್ಡಿಂಗ್‌ನಿಂದಲೂ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್ ಎಂಬುದನ್ನು ಸಾಬೀತು ಮಾಡಿದ್ದಾರೆ. ಜೂನ್‌ನಲ್ಲಿ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ವೇಳೆ ಇವರ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತದೆ.
-
ಐಪಿಎಲ್‌ನಲ್ಲಿ ಯಾರೂ ಕೊಳ್ಳದಿದ್ದರೂ ಅಯೋಧ್ಯೆಯಲ್ಲಿ ಅಬ್ಬರಿಸಿದ ಆರ್‌ಸಿಬಿ ಮಾಜಿ ಆಟಗಾರ; 195 ರನ್ ಚಚ್ಚಿದ ಸ್ವಸ್ತಿಕ್ ಚಿಕಾರ -
IPL 2026: ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪಂದ್ಯ, ಮಾರ್ಚ್ 28ಕ್ಕೆ ಬೆಂಗಳೂರಿನ ಯಾವ ರಸ್ತೆಗಳೆಲ್ಲ ಬಂದ್ ಆಗಲಿದೆ? ಇಲ್ಲಿದೆ ಮಾಹಿತಿ -
IPL 2026: ಆರ್‌ಸಿಬಿ-ಎಸ್ಆರ್ಎಚ್ ಪಂದ್ಯದ ಟಿಕೆಟ್ ಮಾರಾಟ ಶುರು; ಇಲ್ಲಿವೆ ಬುಕಿಂಗ್ ಮಾಡುವ ವಿಧಾನಗಳು -
ಐಪಿಎಲ್ಗೂ ಮುನ್ನ ಆರ್‌ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
RCB Yash Dayal: ಐಪಿಎಲ್ 2026ರ ಸೀಸನ್ನಿಂದ ಸ್ಟಾರ್ ವೇಗಿ ಯಶ್ ದಯಾಳ್ ಔಟ್; ಆರ್‌ಸಿಬಿ ಅಧಿಕೃತ ಮಾಹಿತಿ -
Nandini: ಆರ್‌ಸಿಬಿ ಜೊತೆ ರಾರಾಜಿಸಲಿದೆ ನಮ್ಮ ಹೆಮ್ಮೆಯ 'ನಂದಿನಿ': ಐಪಿಎಲ್-2026ರಲ್ಲಿ ಕನ್ನಡಿಗರಿಗೆ ಡಬಲ್ ಧಮಾಕಾ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications