Virat Kohli: ಶ್ರೀಲಂಕಾದಲ್ಲಿ ವಿರಾಟ್ ಕೊಹ್ಲಿಗೆ ಅವಮಾನ? ವಿಡಿಯೋ ಅಸಲಿಯತ್ತೇನು
ಶ್ರೀಲಂಕಾ ವಿರುದ್ಧ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಭಾರತ ತಂಡ, ಈಗ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಆಗಸ್ಟ್ 2ರಂದು ಸರಣಿಯ ಮೊದಲ ಪಂದ್ಯ ಶ್ರೀಲಂಕಾದ ಕೊಲಂಬೋದಲ್ಲಿ ನಡೆಯಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಈಗಾಗಲೇ ಮೊದಲ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ್ದಾರೆ.
ಶ್ರೀಲಂಕಾದಲ್ಲಿ ವಿರಾಟ್ ಕೊಹ್ಲಿ ಪಂದ್ಯಕ್ಕಾಗಿ ಅಭ್ಯಾಸ ನಡೆಸುವಾಗ ಅಭಿಮಾನಿಯೊಬ್ಬ 'ಚೋಕ್ಲಿ' ಎಂದು ಕೂಗಿದ್ದಾನೆ ಎನ್ನುವ ವಿಡಿಯೋ ವೈರಲ್ ಆಗುತ್ತಿದೆ. ಹಾಗೆ ಕೂಗಿದ ನಂತರ ವಿರಾಟ್ ಕೊಹ್ಲಿ ಕೋಪಗೊಂಡರು ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಆದರೆ, ಈ ವಿಡಿಯೋ ಸತ್ಯಾಸತ್ಯತೆ ಬಗ್ಗೆಯೇ ಅನುಮಾನ ಶುರುವಾಗಿದೆ. ವಿರಾಟ್ ಕೊಹ್ಲಿ ಮುಂದೆ ಹಾಗೆ ಅವರನ್ನು ಅಣಕಿಸುವ ಕೆಲಸವನ್ನು ಯಾರೂ ಕೂಡ ಮಾಡಲಾರರು ಎನ್ನುವುದು ಅಭಿಮಾನಿಗಳ ವಾದ. ಇದು ಎಡಿಟೆಡ್ ವಿಡಿಯೋ ಎಂದು ಹಲವರು ವಾದಿಸಿದ್ದು, ಅಸಲಿ ಎನ್ನಲಾದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
The video circulating of a boy saying "chokli" was clearly edited, and we all know who did it.
— Vipin Tiwari (@Vipintiwari952) July 31, 2024
Here's the real video. pic.twitter.com/LTT0cIOAa7
ರೋಹಿತ್ ಶರ್ಮಾ ಫ್ಯಾನ್ಸ್ ಕಿತಾಪತಿ!
ವಿರಾಟ್ ಕೊಹ್ಲಿಗೆ ಚೋಕ್ಲಿ ಎಂದು ಕೂಗುತ್ತಿರುವ ವಿಡಿಯೋವನ್ನು ಕೆಲವು ರೋಹಿತ್ ಶರ್ಮಾ ಅಭಿಮಾನಿಗಳು ಮಾತ್ರ ಹಂಚಿಕೊಂಡಿರುವುದು ವಿಡಿಯೋ ಅಸಲತ್ತಿನ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ. ಕೊಹ್ಲಿ ಮತ್ತು ರೋಹಿತ್ ಶರ್ಮಾ ಎಂತಹ ಸ್ನೇಹಿತರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಇಬ್ಬರು ದಿಗ್ಗಜ ಆಟಗಾರರ ಕೆಲವು ಕಿಡಿಗೇಡಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಜಗಳ ಮಾಡಿಕೊಳ್ಳುತ್ತಿದ್ದು, ಆಗಾಗ್ಗೆ ಈ ರೀತಿ ತಿರುಚಿದ ವಿಡಿಯೋ ಮತ್ತು ಫೋಟೋಗಳ್ನು ಹಂಚಿಕೊಂಡು ಕಾಲೆಳೆಯುವುದನ್ನು ಮಾಡುತ್ತಿದ್ದಾರೆ.
Virat Kohli is irrelevant outside his home.
— 𝐇𝐲𝐝𝐫𝐨𝐠𝐞𝐧 (@IamHydro45_) July 31, 2024
People called him Chokli on his face.😹 pic.twitter.com/mXH1GKwYzJ
ಟಿ20 ವಿಶ್ವಕಪ್ ಗೆದ್ದ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮೊದಲ ಬಾರಿಗೆ ಮೈದಾನಕ್ಕೆ ಇಳಿಯಲು ಸಜ್ಜಾಗಿದ್ದಾರೆ. ನೂತನ ಕೋಚ್ ಗೌತಮ್ ಗಂಭೀರ್ ಈಗಾಗಲೇ ಟಿ20 ಸರಣಿಯಲ್ಲಿ ತಮ್ಮ ಯೋಜನೆಗಳ ಟ್ರೈಲರ್ ತೋರಿಸಿದ್ದಾರೆ, ಏಕದಿನ ಸರಣಿಯಲ್ಲಿ ಕೂಡ ಮೂವರು ದಿಗ್ಗಜರ ಜೋಡಿ ಗೆಲುವಿನ ಅಭಿಯಾನ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.
ಭಾರತ ಏಕದಿನ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.












Click it and Unblock the Notifications