ಭಾರತದ ವಿರುದ್ದ ಪಾಕಿಸ್ತಾನ ಸೋತ್ರು ಪರವಾಗಿಲ್ಲ, ಈ ಸಾರಿ ಆರ್‌ಸಿಬಿ ಗೆಲ್ಲಲೇಬೇಕು ಅಂತಿದ್ದಾರೆ ಪಾಕಿಗಳು
ಆರ್‌ಸಿಬಿ ಅಂದ್ರೆ ಕ್ರಿಕೆಟ್ ಟೀಂ ಮಾತ್ರ ಅಲ್ಲ, ಆರ್‌ಸಿಬಿ ಅಂದ್ರೆ ಒಂದು ಎಮೋಷನ್ ಅಂತಾನೇ ಕನ್ನಡಿಗರು ಹೇಳುತ್ತಾರೆ. ಕನ್ನಡಿಗರು ಮಾತ್ರವಲ್ಲ ಇಡೀ ಜಗತ್ತಿನಾದ್ಯಂತ ಆರ್‌ಸಿಬಿ ತಂಡಕ್ಕೆ ದೊಡ್ಡ ಅಭಿಮಾನಿ ಬಳಗವೇ ಇದೆ. ಹೀಗಿದ್ದಾಗ ಭಾರತದ ಶತ್ರು ದೇಶ ಪಾಕಿಸ್ತಾನದಲ್ಲಿ ಕೂಡ ಆರ್‌ಸಿಬಿ ಪರ ಭರ್ಜರಿ ಹವಾ ಶುರುವಾಗಿದೆ. ಹಾಗಾದರೆ, ಪಾಕಿಸ್ತಾನದ ಪ್ರಜೆಗಳು ಹೇಳುತ್ತಾ ಇರುವುದು ಏನು? ಬನ್ನಿ ತಿಳಿಯೋಣ.
ಹೌದು, ಐಪಿಎಲ್ ಶುರುವಾಗಿ ಹಲವು ವರ್ಷಗಳೇ ಕಳೆದರೂ ಆರ್‌ಸಿಬಿ ತಂಡ ಮಾತ್ರ ಕಪ್ ಗೆದ್ದಿಲ್ಲ. ಕನ್ನಡಿಗರ ರಾಜಧಾನಿ ಬೆಂಗಳೂರು ನಗರವನ್ನು ಪ್ರತಿನಿಧಿಸುವ ಆರ್‌ಸಿಬಿ ತಂಡಕ್ಕೆ ಒಂದು ಬಾರಿ ಕೂಡ ಕಪ್ ಸಿಕ್ಕಿಲ್ಲ ಅನ್ನೋ ನೋವು ಕೋಟಿ ಕೋಟಿ ಕನ್ನಡಿಗರನ್ನು ಕಾಡ್ತಾ ಇದೆ. ಹೀಗಿದ್ದಾಗಲೇ, ಭಾರತದ ವಿರುದ್ದ ಪಾಕಿಸ್ತಾನ ಸೋತರೂ ಪರವಾಗಿಲ್ಲ... ಈ ಸಾರಿ ಆರ್‌ಸಿಬಿ ಗೆಲ್ಲಲೇಬೇಕು ಅಂತಿದ್ದಾರೆ ಪಾಕಿಗಳು!

ಭಾರತದ ವಿರುದ್ದ ಪಾಕಿಸ್ತಾನ ಸೋತರೂ...
ಅಂದಹಾಗೆ ಪಾಕಿಸ್ತಾನದ ಗಲ್ಲಿ ಗಲ್ಲಿಯಲ್ಲೂ ಈಗ ಆರ್‌ಸಿಬಿ ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಪಾಕಿಸ್ತಾನದ ಜನರಿಗೆ ವಿರಾಟ್ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಇದೇ ಕಾರಣಕ್ಕೆ ಆರ್‌ಸಿಬಿ ಪರವಾಗಿ ಪಾಕಿಸ್ತಾನದ ಜನರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮೊದಲು ಆರ್‌ಸಿಬಿಯ ಪರ ಇರುವ ಟೀ-ಶರ್ಟ್ ಬದಲಾವಣೆ ಮಾಡಿದ್ದಾರೆ ಪಾಕ್ ಕ್ರಿಕೆಟ್ ಅಭಿಮಾನಿಗಳು.
ವಿರಾಟ್ ಕೊಹ್ಲಿ & ಆರ್‌ಸಿಬಿ ಫ್ಯಾನ್ಸ್
ಆರ್‌ಸಿಬಿ ಟೀ-ಶರ್ಟ್ ಹಾಕಿಕೊಂಡು, ಅದರಲ್ಲಿ ವಿರಾಟ್ ಕೊಹ್ಲಿಯನ್ನ ಪ್ರತಿನಿಧಿಸುವ ರೀತಿ ಸಂಭ್ರಮಿಸುತ್ತಿದ್ದಾರೆ ಪಾಕಿಸ್ತಾನದ ಅಭಿಮಾನಿಗಳು. ಪಾಕಿಸ್ತಾನದಲ್ಲಿ ಕೂಡ ವಿರಾಟ್ ಕೊಹ್ಲಿ ಕ್ರೇಜ್ ಮುಗಿಲು ಮುಟ್ಟಿದ್ದು, ಒಂದೇ ಒಂದು ಬಾರಿ ವಿರಾಟ್ ಕೊಹ್ಲಿ ಪಾಕ್ ನೆಲಕ್ಕೆ ಬಂದು ಕ್ರಿಕೆಟ್ ಆಡಬೇಕು ಎಂಬ ಬೇಡಿಕೆ ಇಡುತ್ತಿದ್ದಾರೆ ಅಭಿಮಾನಿಗಳು. ಆದರೆ ಅದು ನನಸಾಗುವ ಸಾಧ್ಯತೆ ತೀರಾ ಕಡಿಮೆ ಎನ್ನಬಹುದು. ಯಾಕಂದ್ರೆ ಈಗಾಗಲೇ ಬಿಸಿಸಿಐ ಘೋಷಣೆ ಮಾಡಿದ ರೀತಿ ಭಾರತದ ಯಾವುದೇ ಆಟಗಾರರು ಕೂಡ ಪಾಕಿಸ್ತಾನದ ನೆಲಕ್ಕೆ ಹೋಗುವುದಿಲ್ಲ.












Click it and Unblock the Notifications