Virat kohli vs MS Dhoni: ಬೆಂಗಳೂರಿನಲ್ಲಿ ಕೊನೆಯ ಬಾರಿಗೆ ಧೋನಿ, ಕೊಹ್ಲಿ ಫೈಟ್?
ಭಾರತದಲ್ಲಿ ಸದ್ಯ ಐಪಿಎಲ್ ಕ್ರೇಜ್ ಜೋರಾಗಿದೆ. ಅಭಿಮಾನಿಗಳು ಪ್ಲೇ ಆಫ್ ಲೆಕ್ಕಾಚಾರ ಆರಂಭಿಸಿದ್ದಾರೆ. ಆರ್‌ಸಿಬಿ ಸಹ ಪ್ಲೇ ಆಫ್ ಕನಸಿನಲ್ಲಿದೆ. ಈಗಾಗಲೇ ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇ ಆಫ್ ಹಂತ ತಲುಪಿದ್ದು, ಇನ್ನು ಎರಡು ತಂಡಗಳಿಗೆ ಮುಂದಿನ ಹಂತ ತಲುಪುವ ಅವಕಾಶ ಇದೆ.
17ನೇ ಐಪಿಎಲ್ ಆವೃತ್ತಿಯ ಮಹತ್ವದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದ ಮೇಲೆ ಅಭಿಮಾನಿಗಳ ಚಿತ್ತ ನೆಟ್ಟಿದೆ. ಈ ಹೈ ವೋಲ್ಟೇಜ್ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ (M. Chinnaswamy Stadium) ಸಾಕ್ಷಿ ಆಗಲಿದೆ. ಈ ಪಂದ್ಯವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾತುರಾಗಿ ಕಾಯುತ್ತಿದ್ದಾರೆ.

ಕ್ರೇಜ್ ಹೆಚ್ಚಿಸಿದ ಆರ್‌ಸಿಬಿ, ಸಿಎಸ್‌ಕೆ ಫೈಟ್
ಚೆನ್ನೈ ಹಾಗೂ ಆರ್‌ಸಿಬಿ ನಡುವಣ ಫೈಟ್ ಅಂದ ಬಳಿಕ ಕ್ರೇಜ್ ಹೆಚ್ಚೆ ಇರುತ್ತದೆ. ಈ ಎರಡೂ ತಂಡಗಳಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕರು ಇದ್ದು ರೋಚಕತೆ ಹೆಚ್ಚಿಸಿದೆ. ಅಸಲಿಗೆ ಉಭಯ ಆಟಗಾರರು ನಾಯಕತ್ವದಿಂದ ಕೆಳಗೆ ಇಳಿದರೂ ಸಹ, ಇವರನ್ನೇ ಕೇಂದ್ರಿ ಕರಿಸಿ ಪಂದ್ಯಗಳು ನಡೆಯುತ್ತವೆ. ಆರ್‌ಸಿಬಿ ಪರ ವಿರಾಟ್ ಕೊಹ್ಲಿ (Virat kohli) ಸ್ಟಾರ್ ಆಗಿ ಕಾಣಿಸಿಕೊಂಡರೆ, ಸಿಎಸ್‌ಕೆ ಪರ ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ (MS Dhoni) ಕಾಣಿಸಿಕೊಳ್ಳಲಿದ್ದಾರೆ.
ಚಿನ್ನಸ್ವಾಮಿಯಲ್ಲಿ ಕೊನೆಯಬಾರಿಗೆ ಅಂಗಳಕ್ಕೆ?
ಮಹೇಂದ್ರ ಸಿಂಗ್ ಧೋನಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಆಡುತ್ತಿದ್ದು, ಇದು ಅವರ ಕೊನೆಯ ಐಪಿಎಲ್ ಎಂದು ಹೇಳಲಾಗುತ್ತಿದೆ. ಧೋನಿ ಈ ಬಗ್ಗೆ ಯಾವುದೇ ಘೋಷಣೆಗಳನ್ನು ಇನ್ನು ಮಾಡಿಲ್ಲ. ಆದರೆ ಅವರ ವಯಸ್ಸನ್ನು ನೋಡಿದರೆ ಇದು ಅವರಿಗೆ ಕೊನೆಯ ಟೂರ್ನಿ ಎಂದು ಅಂದಾಜಿಸಲಾಗುತ್ತಿದೆ. ಒಂದು ವೇಳೆ ಇದು ನಿಜ ಆದಲ್ಲಿ ಮಹೇಂದ್ರ ಸಿಂಗ್ ಧೋನಿ ಕೊನೆಯ ಬಾರಿಗೆ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ.

ಹೈವೋಲ್ಟೇಜ್ ಮ್ಯಾಚ್
ಧೋನಿ ಈ ಬಾರಿ ಯಾವುದೇ ಕ್ರೀಡಾಂಗಣಕ್ಕೆ ಹೋದರೂ, ಅಭಿಮಾನಿಗಳು ಫುಲ್ ಅವರಿಗೆ ಸಪೋರ್ಟ್ ಮಾಡುತ್ತಾ ಇರುವುದನ್ನು ಕಾಣಬಹುದು. ಹಾಗೆಯೇ ಮಹೇಂದ್ರ ಸಿಂಗ್ ಧೋನಿ ಅವರಿಗೆ ಬೆಂಗಳೂರಿನಲ್ಲೂ ಸಿಕ್ಕಾಪಟ್ಟಿ ಅಭಿಮಾನಿಗಳು ಇದ್ದಾರೆ. ಮೇ 18 ರಂದು ಅವರ ಅಭಿಮಾನ ತೋರಿಸಲು ರೆಡಿ ಆಗಿದ್ದಾರೆ.
ಧೋನಿ ಹಾಗೂ ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದ ಖ್ಯಾತ ಆಟಗಾರರು. ಇವರಿಬ್ಬರ ಕಾಳಗವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಹ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅಂದಹಾಗೆ ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿ ಬೆಂಗಳೂರು ತಂಡವಿದ್ದು, ಧೋನಿಗೆ ಟ್ರೋಫಿ ಜಯದ ಉಡುಗೊರೆ ನೀಡುವ ಮೂಲಕ ಬಿಳ್ಕೊಡುಗೆ ನೀಡುವ ಪ್ಲ್ಯಾನ್ ಸಿಎಸ್‌ಕೆ ತಂಡದ್ದಾಗಿದೆ. ಈ ರೋಚಕ ಕಾದಾಟದಲ್ಲಿ ಯಾರ ಕೈ ಮೇಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಬೆಂಗಳೂರು ತಂಡ ಈ ಪಂದ್ಯವನ್ನು ಗೆದ್ದು ಪ್ಲೇ ಆಫ್‌ಗೆ ಪ್ರವೇಶಿಸುವ ಕನಸು ಕಾಣುತ್ತಿದೆ. ಒಂದು ವೇಳೆ ಎಲ್ಲಾ ಲೆಕ್ಕಾಚಾರದ ತರಹನೇ ಆದ್ರೆ ಈ ಬಾರಿ ಕಪ್ ನಮ್ದೇ ಎಂದು ಅಭಿಮಾನಿಗಳು ಅಭಿಮಾನದಿಂದ ಹೇಳುತ್ತಿದ್ದಾರೆ.












Click it and Unblock the Notifications