Virat Kohli: 15,000 ODI ರನ್ ಪೂರೈಸಿದ ವಿರಾಟ್‌ ಕೊಹ್ಲಿ; 2 ಐತಿಹಾಸಿಕ ದಾಖಲೆಗಳು ಉಡೀಸ್

India Vs West Indies 1st ODI: ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ (ಸೆಪ್ಟೆಂಬರ್ 27) ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತವು ವೆಸ್ಟ್‌ ಇಂಡೀಸ್ ವಿರದ್ಧ 8 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಇದೇ ವೇಳೆ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್‌ ಕೊಹ್ಲಿ ಅವರು ಐತಿಹಾಸಿಕ ದಾಖಲೆ ಬರೆದು ಗಮನ ಸೆಳೆದರು.

ಟಾಸ್‌ ಗೆದ್ದ ಟೀಮ್ ಇಂಡಿಯಾ ನಾಯಕ ಶುಭ್‌ನ್ ಗಿಲ್ ಅವರು ಬೌಲಿಂಗ್ ಮಾಡಲು ನಿರ್ಧರಿಸಿದರು. ಅದರಂತೆಯೇ ಮೊದಲು ಬ್ಯಾಟ್‌ ಬೀಸಿದ ವೆಸ್ಟ್‌ ಇಂಡೀಸ್‌ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 295 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಆದರೆ ಬಳಿಕ ಬ್ಯಾಟಿಂಗ್‌ಗಿಳಿದ ಭಾರತವು ವಿರಾಟ್‌ ಕೊಹ್ಲಿ ಹಾಗೂ ಶುಭ್‌ಮನ್ ಗಿಲ್ ಅವರ ಆಕ್ರಮಣ ಆಟದಿಂದಾಗಿ ಕೇವಲ 41.4 ಓವರ್‌ಗಳಲ್ಲಿ 300 ರನ್‌ ಕಲೆಹಾಕಿ ಭರ್ಜರಿ ಗೆಲುವು ಸಾಧಿಸಿತು. ಅದರಲ್ಲೂ ಕಿಂಗ್ ಕೊಹ್ಲಿ ಇದೇ ವೇಳೆ ದಿಗ್ಗಜರ ದಾಖಲೆಗಳನ್ನು ಉಡೀಸ್ ಮಾಡಿದರು.

Virat Kohli Smashes 15 000 ODI Runs Breaks Two Massive Records vs West Indies on September 27 2026

ಎರಡು ಬೃಹತ್ ದಾಖಲೆ ಮುರಿದ ವಿರಾಟ್ ಕೊಹ್ಲಿ..

ತಿರುವನಂತಪುರಂನಲ್ಲಿ ಭಾನುವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 88 ಎಸೆತಗಳಲ್ಲಿ 10 ಬೌಂಡರಿ ಹಾಗೂ 9 ಸಿಕ್ಸರ್‌ಗಳ ಸಹಿತ ಅಜೇಯ 139 ರನ್ ಬಾರಿಸಿದರು. ಈ ಮೂಲಕ ಎರಡು ಬೃಹತ್ ದಾಖಲೆಗಳನ್ನು ಮುರಿಯುವುದಲ್ಲದೆ, ಭಾರತಕ್ಕೆ ಭರ್ಜರಿ ಜಯ ತಂದುಕೊಟ್ಟರು. ಕೊಹ್ಲಿ ಮತ್ತು ನಾಯಕ ಶುಭಮನ್ ಗಿಲ್ ಇಬ್ಬರೂ ಶತಕ ಸಿಡಿಸಿದ ನೆರವಿನಿಂದ ಭಾರತವು 296 ರನ್‌ಗಳ ಗುರಿಯನ್ನು ಕೇವಲ 41.4 ಓವರ್‌ಗಳಲ್ಲಿ ತಲುಪಿತು.

15,000 ರನ್ ಪೂರೈಸಿದ ಕಿಂಗ್ ಕೊಹ್ಲಿ

ವಿರಾಟ್‌ ಕೊಹ್ಲಿ ಅವರು ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 15,000 ರನ್ ಪೂರೈಸಿದ ಬ್ಯಾಟರ್ ಎನಿಸಿಕೊಂಡರು ಹಾಗೂ ತವರು ನೆಲದಲ್ಲಿ ಅತ್ಯಂತ ಹೆಚ್ಚು ಏಕದಿನ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಇನ್ನೂ ಈ ಪಂದದ್ಯ ಆರಂಭದಲ್ಲೇ ಜೀವದಾನ ಪಡೆದ ಗಿಲ್ 110 (108) ರನ್ ಕಲೆಹಾಕಿದರು. ಆರಂಭಿಕ ಆಟಗಾರ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದರು, 32 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ವೆಸ್ಟ್‌ ಇಂಡೀಸ್ ಪರ ಯಾರು ಎಷ್ಟು ರನ್ ಸಿಡಿಸಿದರು?

ಇದಕ್ಕೂ ಮುನ್ನ ಬ್ಯಾಟ್‌ ಬೀಸಿದ ವೆಸ್ಟ್‌ ಇಂಡೀಸ್ ತಂಡವು ಜಸ್ಟಿನ್ ಗ್ರೀವ್ಸ್ ಬಾರಿಸಿದ 101 ರನ್, ಜಾನ್ ಕ್ಯಾಂಪ್‌ಬೆಲ್ 62, ಅಮೀರ್ ಜಂಗೂ ಸಿಡಿಸಿದ ಅಜೇಯ 58(43) ರನ್‌ಗಳ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 295 ರನ್ ಕಲೆಹಾಕಿತು. ಇನ್ನು ಟೀಮ್ ಇಂಡಿಯಾ ಪರ ಬೌಲಿಂಗ್ ದಾಳಿ ನಡೆಸಿದ ಕುಲದೀಪ್ ಯಾದವ್ 4 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ 2, ನಿತೀಶ್ ಕುಮಾರ್ ರೆಡ್ಡಿ 1 ವಿಕೆಟ್ ಕಬಳಿಸಿ ವೆಸ್ಟ್‌ ಇಂಡೀಸ್‌ ತಂಡವನ್ನು 295 ರನ್‌ಗಳಿಗೆ ಕಟ್ಟಿಹಾಕಿದರು. ಒಟ್ಟಿನಲ್ಲಿ ಹೇಳುವುದಾದರೆ ವಿರಾಟ್‌ ಕೊಹ್ಲಿ ಅವರು ಮಾಡಿದ ದಾಖಲೆಗಳು ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ.

ವಿರಾಟ್‌ ಕೊಹ್ಲಿ ಅವರ ಸಾಧನೆಗೆ ಕ್ರಿಕೆಟ್‌ ದಿಗ್ಗಜರು ಹಾಗೂ ಅಭಿಮಾನಿಗಳಿಂದ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ. ಅದರಲ್ಲೂ ಕೊಹ್ಲಿ ಅವರು ಮುಂಬರುವ ಏಕದಿನ ವಿಶ್ವಕಪ್‌ ನನ್ನ ಕೊನೆಯ ಸರಣಿ ಎಂದು ಹೇಳಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದೆ.

ಟೀಮ್ ಇಂಡಿಯಾ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ರುತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್, ನಮನ್ ಧೀರ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಗುರ್ನೂರ್ ಬ್ರಾರ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+