Virat Kohli: ಐಪಿಎಲ್ ಇತಿಹಾಸದಲ್ಲೇ ವಿರಾಟ್ ದಾಖಲೆಯ ಮೇಲೆ ಕಣ್ಣು
ಐಪಿಎಲ್ 2024ರ ಮಹತ್ವದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಆರ್‌ಸಿಬಿ ಅಬ್ಬರಿಸಿದೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಜಯ ಸಾಧಿಸಿರುವ ಬೆಂಗಳೂರು ಪ್ಲೇ ಆಫ್‌ಗೆ ಎಂಟ್ರಿ ನೀಡಿದೆ. ಆರ್‌ಸಿಬಿ ಸ್ಟಾರ್ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ.
ಆರ್‌ಸಿಬಿ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಆಟಗಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಪ್ಲೇಯರ್ ಎಂದರೆ ವಿರಾಟ್ ಕೊಹ್ಲಿ. ಸದ್ಯ ಆರೆಂಜ್ ಕ್ಯಾಪ್‌ನ್ನು ತನ್ನು ಮುಕುಟದ ಮೇಲೆ ಇಟ್ಟುಕೊಂಡಿರುವ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್, ಪ್ರಸಕ್ತ ವರ್ಷ ಸೊಗಸಾದ ಫಾರ್ಮ್‌ನಲ್ಲಿದ್ದಾರೆ. ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಯಾರು ಮಾಡಲಾರದ ಸಾಧನೆಯನ್ನು ಮಾಡುವ ಹೊಸ್ತಿಲಲ್ಲಿ ನಿಂತಿದ್ದಾರೆ.

ಐಪಿಎಲ್‌ನಲ್ಲಿ ವಿರಾಟ್ ದಾಖಲೆ
ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಪ್ಲೇ ಆಫ್‌ಗೆ ಪ್ರವೇಶ ಪಡೆದಿರುವ ಆರ್‌ಸಿಬಿ, ಸ್ಥಿರ ಪ್ರದರ್ಶನ ನೀಡುತ್ತಿದೆ. ವಿರಾಟ್ ಅವರಿಗೂ ಇಷ್ಟೇ ಅವಕಾಶಗಳು ಸಿಗುವುದಂತೂ ಸುಳ್ಳಲ್ಲ. ಸದ್ಯ ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲಿ ಒಟ್ಟು 7971 ರನ್ ಗಳಿಸಿದ್ದಾರೆ. ಇದಕ್ಕಾಗಿ ಅವರು 251 ಪಂದ್ಯಗಳ 243 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಅವರ ಗರಿಷ್ಠ ಸ್ಕೋರ್ 113 ರನ್.
ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 38.69 ಸರಾಸರಿಯಲ್ಲಿ ರನ್ ಗಳಿಸಿದ್ದರೆ, ಅವರ ಸ್ಟ್ರೈಕ್ ರೇಟ್ 131.95 ಆಗಿದೆ. ಈ ಟೂರ್ನಿಯಲ್ಲಿ ಇದುವರೆಗೆ 8 ಶತಕ ಹಾಗೂ 55 ಅರ್ಧ ಶತಕ ಬಾರಿಸಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಈ ಟೂರ್ನಿಯಲ್ಲಿ ತಮ್ಮ 8000 ರನ್‌ಗಳನ್ನು ಪೂರೈಸಬಲ್ಲರು.
7 ಸಾವಿರಕ್ಕೂ ಹೆಚ್ಚು ರನ್
ಕೊಹ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. 6769 ರನ್ ಗಳಿಸಿರುವ ಶಿಖರ್ ಧವನ್ ಎರಡನೇ ಸ್ಥಾನದಲ್ಲಿದ್ದಾರೆ. ಅಂದರೆ ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಬ್ಯಾಟ್ಸ್ ಮನ್ ಕೊಹ್ಲಿ, ಈಗ 8 ಸಾವಿರ ರನ್ ಕೂಡ ಪೂರೈಸುವ ಅವಕಾಶ ಪಡೆದಿದ್ದಾರೆ. ಈ ಸಾಧನೆಯನ್ನು ಮಾಡಲು ಅವರಿಗೆ ಇನ್ನು 29 ರನ್ ಅವಶ್ಯಕತೆ ಇದೆ.

ಕೊಹ್ಲಿಗೆ ಅವಕಾಶ
ಆರ್‌ಸಿಬಿ ತಂಡ ಐಪಿಎಲ್ ಪ್ಲೇಆಫ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿದೆ. ಈಗ ಎಲಿಮಿನೇಟರ್‌ನಲ್ಲಿ ಆರ್‌ಸಿಬಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಆ ಪಂದ್ಯದಲ್ಲಿ ಕೊಹ್ಲಿ ತಮ್ಮ ಬ್ಯಾಟ್‌ನಿಂದ ದೊಡ್ಡ ಇನ್ನಿಂಗ್ಸ್ ಪಡೆಯುತ್ತಾರೆ ಮತ್ತು ಅವರು ಎಂಟು ಸಾವಿರ ರನ್‌ಗಳನ್ನು ಪೂರೈಸುತ್ತಾರೆ. ಆ ಪಂದ್ಯದಲ್ಲಿ ತಂಡ ಗೆದ್ದರೆ ಕ್ವಾಲಿಫೈಯರ್ 2 ಆಡುವ ಅವಕಾಶವೂ ಸಿಗಲಿದೆ. ಅವರು 29 ರನ್ ಗಳಿಸಿದರೆ ಈ ವರ್ಷ 8 ಸಾವಿರ ರನ್ ತಲುಪುತ್ತಾರೆ. ಒಂದು ವೇಳಿ ಈ ಸಾಧನೆ ಮಾಡಲು ಆಗದೇ ಇದ್ದಲ್ಲಿ ಮುಂದಿನ ವರ್ಷಕ್ಕೆ ಕಾಯಬೇಕು.












Click it and Unblock the Notifications