Virat Kohli: ಆರ್‌ಸಿಬಿ ನಾಯಕನಿಗೆ ವಿರಾಟ್ ಕೊಹ್ಲಿ ಸಂದೇಶ; ಅಭಿಮಾನಿಗಳಿಗೆ ಮನವಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 2025ರ ಆವೃತ್ತಿಗೆ ಮುನ್ನ ಹೊಸ ನಾಯಕನ ಹೆಸರು ಘೋಷಣೆ ಮಾಡಿದೆ. ಮಧ್ಯಪ್ರದೇಶದ ರಜತ್ ಪಟಿದಾರ್ ತಂಡದ ನಾಯಕರಾಗಿ ನೇಮಕವಾಗಿದ್ದಾರೆ. 2022 ರಿಂದ 2024ರವರೆಗೆ ನಾಯಕರಾಗಿದ್ದ ಫಾಫ್ ಡು ಪ್ಲೆಸಿಸ್‌ರನ್ನು ಮೆಗಾ ಹರಾಜಿಗೆ ಮುನ್ನ ತಂಡದಿಂದ ಕೈಬಿಡಲಾಗಿತ್ತು, ಈಗ ಡುಪ್ಲೆಸಿಸ್ ಸ್ಥಾನಕ್ಕೆ ಪಟಿದಾರ್ ಬಂದಿದ್ದಾರೆ.

2021ಐಪಿಎಲ್ ಆವೃತ್ತಿಯಲ್ಲಿ ಆರ್ ಸಿಬಿ ಬ್ಯಾಟರ್ ಲುವ್ನಿತ್ ಸಿಸೋಡಿಯಾ ಗಾಯಗೊಂಡ ಕಾರಣ ಬದಲೀ ಆಟಗಾರನಾಗಿ ತಂಡ ಸೇರಿಕೊಂಡ ರಜತ್ ಪಟಿದಾರ್ ಇಂದು ನಾಯಕರಾಗಿ ಆಯ್ಕೆಯಾಗಿದ್ದಾರೆ. ವಿರಾಟ್ ಕೊಹ್ಲಿ ಹೊಸ ನಾಯಕನಿಗೆ ವಿಶೇಷ ಸಂದೇಶ ಕೊಟ್ಟಿದ್ದು, ಅಭಿನಂದನೆ ತಿಳಿಸಿದ್ದಾರೆ.

virat kohli message rajat patidar rcb captain ipl 2025

ಆರ್ ಸಿಬಿ ನಾಯಕನ ಹೆಸರು ಘೋಷಣೆ ಮಾಡುತ್ತಿದ್ದಂತೆ ವಿರಾಟ್ ಕೊಹ್ಲಿ ತಮ್ಮ ಸಂದೇಶವನ್ನು ಹಂಚಿಕೊಂಡಿದ್ದಾರೆ. ರಜತ್ ಪಟಿದಾರ್ ಅವರನ್ನು ಅಭಿನಂದಿಸಿದ್ದ, ಆರ್ ಸಿಬಿಗೆ ನೀಡಿದ ಕೊಡುಗೆಗಳನ್ನು ಅಭಿನಂದಿಸಿದ್ದಾರೆ. "ರಜತ್, ಮೊದಲನೆಯದಾಗಿ ನಿಮಗೆ ಅಭಿನಂದನೆಗಳು. ನಿಮಗೆ ಶುಭ ಹಾರೈಸುತ್ತೇನೆ. ಆರ್ ಸಿಬಿ ತಂಡದಲ್ಲಿ ನೀವು ಬೆಳೆದ ರೀತಿ, ಪ್ರದರ್ಶನ ನೀಡಿದ್ದು ಜಗತ್ತಿನಾದ್ಯಂತ ಇರುವ ಆರ್‌ಸಿಬಿ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿದ್ದೀರಿ ಎಂದು ಹೇಳಲು ಬಯಸುತ್ತೇನೆ. ನಿಮ್ಮ ಆಟ ನೋಡುವುದು ರೋಮಾಂಚನಕಾರಿ" ಎಂದು ಹೇಳಿದ್ದಾರೆ.

ನಾನು ಮತ್ತು ತಂಡದ ಇತರ ಆಟಗಾರರು ನಿಮ್ಮ ಹಿಂದೆ ಇದ್ದೇವೆ. ನಿಮ್ಮ ನಾಯಕತ್ವಕ್ಕೆ ನಮ್ಮೆಲ್ಲರ ಬೆಂಬಲವಿದೆ. ನೀವು ಇದನ್ನು ಶ್ರಮದಿಂದ ಪಡೆದುಕೊಂಡಿದ್ದೀರಾ. ನಾನು ಮೊದಲು ತಂಡದ ನಾಯಕನಾಗಿದ್ದೆ, ನೀವು ನಾಯಕರಾಗಿ ದೊಡ್ಡ ಯಶಸ್ಸು ಗಳಿಸುವ ವಿಶ್ವಾಸವಿದೆ. ನಿಮ್ಮ ಆಯ್ಕೆಯಿಂದ ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ನೀವು ಆಟಗಾರರಾಗಿ ಹೇಗೆ ಉನ್ನತ ಹೊಂದಿದ್ದೀರಾ ಎಂದು ನಾನು ನೋಡಿದ್ದೇನೆ. ಭಾರತ ತಂಡಕ್ಕೂ ಆಯ್ಕೆಯಾಗಿದ್ದರು. ಅವರು ಆಟ ಹಲವು ಹಂತಗಳಲ್ಲಿ ಸುಧಾರಣೆಯಾಗಿದೆ. ಈ ಅದ್ಭುತ ಫ್ರಾಂಚೈಸಿಯನ್ನು ಮುನ್ನಡೆಸುವ ಸಾಮರ್ಥ್ಯ ನಿಮ್ಮಲ್ಲಿದೆ ಎಂದು ಹೇಳಿದ್ದಾರೆ.

ಅಭಿಮಾನಿಗಳಿಗೆ ವಿರಾಟ್ ಮನವಿ

ಅಭಿಮಾನಿಗಳಿಗೂ ವಿರಾಟ್ ವಿಶೇಷ ಮನವಿ ಮಾಡಿದ್ದು, "ಎಲ್ಲಾ ಅಭಿಮಾನಿಗಳು ರಜತ್ ಪಟಿದಾರ್ ಅವರಿಗೆ ಬೆಂಬಲ ನೀಡಬೇಕು ಮತ್ತು ಬೆನ್ನಿಗೆ ನಿಲ್ಲಬೇಕು. ಪಟಿದಾರ್ ತಂಡಕ್ಕಾಗಿ ಮತ್ತು ಫ್ರಾಂಚೈಸಿಗಾಗಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ತಿಳಿಯುವಂತೆ ನಾನು ಮನವಿ ಮಾಡುತ್ತೇನೆ. ಯಾರು ಏನು ಮಾಡಿದರೂ ನಾವೆಲ್ಲರೂ ಒಟ್ಟಾಗಿ ಬೆಂಬಲ ನೀಡೋಣ, ಈ ಅದ್ಭುತ ತಂಡ ಮತ್ತು ಫ್ರಾಂಚೈಸಿಯ ಬೆಳವಣಿಗೆಗೆ ಕೆಲಸ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಿಮ್ಮನ್ನು ನೋಡಲು ಎದುರು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+