ವಿರಾಟ್ ಕೊಹ್ಲಿ ಜನರ ಪ್ರೀತಿಯ ಅರಸ: ಹೆಚ್ಚುತ್ತಿದೆ ಚೇಸಿಂಗ್ ಸ್ಟಾರ್ ಬ್ರ್ಯಾಂಡ್ ವ್ಯಾಲ್ಯೂ

ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ವಿರಾಟ್‌ ಕೊಹ್ಲಿ ಅಂಗಳದಲ್ಲಿ ಈ ವರ್ಷ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಮೈದಾನದಲ್ಲಿ ಇವರು ನೀಡುತ್ತಿರುವ ಪ್ರದರ್ಶನ, ಹೊರಗಡೆ ಅವರ ಮೌಲ್ಯವನ್ನು ಹೆಚ್ಚಿಸುತ್ತಿದೆ. ಹೌದು ವಿರಾಟ್‌ ಪ್ರಸಕ್ತ ವರ್ಷ ಅತಿ ಹೆಚ್ಚು ಬ್ರ್ಯಾಂಡ್‌ ವ್ಯಾಲ್ಯೂ ಹೊಂದಿರುವ ಸೆಲೆಬ್ರಿಟಿ ಎಂಬ ಹಣೆ ಪಟ್ಟಿಯನ್ನು ಹೊಂದಿದ್ದಾರೆ.

ಇತ್ತೀಚಿಗೆ ಭಾರತದಲ್ಲಿ ನಡೆದ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಎಲಿಮಿನೇಟರ್‌ನಿಂದ ಹೊರ ಬಿದ್ದಿದೆ. ಕೋಲ್ಕತ್ತಾ ನೈಟ್‌ ರೈಡರ್ಸ್‌ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರಬಹುದು. ಆದರೆ ಬ್ರ್ಯಾಂಡ್‌ ವ್ಯಾಲ್ಯೂ ಲೆಕ್ಕಾಚಾರದಲ್ಲಿ ವಿರಾಟ್‌ ಕೊಹ್ಲಿ, ಕೆಕೆಆರ್ ಸಹ ಮಾಲೀಕ ಶಾರೂಖ್‌ ಖಾನ್‌ ಅವರನ್ನು ಸಹ ಹಿಂದಿಕ್ಕಿದ್ದಾರೆ. ಕ್ರೋಲ್ ಸೆಲೆಬ್ರಿಟಿ ಬ್ರಾಂಡ್ ವ್ಯಾಲ್ಯೂಯೇಷನ್ ​​ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕೊಹ್ಲಿ ರಣವೀರ್ ಸಿಂಗ್ ಅವರನ್ನು ಹಿಂದಿಕ್ಕಿದ್ದಾರೆ.

Virat Kohli Leads Celebrity Charts with a Record 227 9 Million Brand Value

ವಿರಾಟ್‌ ಬ್ರ್ಯಾಂಡ್‌ ವ್ಯಾಲ್ಯೂ

ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿಯ ವೈಫಲ್ಯವು ಅವರ ಸೆಲೆಬ್ರಿಟಿ ಮೌಲ್ಯದ ಮೇಲೆ ಪರಿಣಾಮ ಬೀರಿಲ್ಲ. ಸಲಹಾ ಸಂಸ್ಥೆ ಕ್ರೋಲ್ ಪ್ರಕಾರ, ಕಳೆದ ವರ್ಷ ವಿರಾಟ್‌ನ ಒಟ್ಟಾರೆ ಬ್ರ್ಯಾಂಡ್ ಮೌಲ್ಯವು ಸುಮಾರು 29 ಪ್ರತಿಶತದಷ್ಟು ಹೆಚ್ಚಾಗಿದೆ. ಕೊಹ್ಲಿ ಬ್ರ್ಯಾಂಡ್ ವ್ಯಾಲ್ಯೂ ಕಳೆದ ವರ್ಷ 176.9 ಮಿಲಿಯನ್ ಡಾಲರ್‌ ಇತ್ತು. ಈ ಮೌಲ್ಯ ಈ ಬಾರಿ 227.9 ಮಿಲಿಯನ್ ಡಾಲರ್‌ಗೆ ಏರಿಕೆ ಆಗಿದೆ.

ಎರಡನೇ, ಮೂರನೇ ಸ್ಥಾನದಲ್ಲಿರುವವರು ಯಾರು?

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ರಣವೀರ್‌ ಸಿಂಗ್ ಇದ್ದಾರೆ. ಇವರ ಮಾರುಕಟ್ಟೆಯ ಮೌಲ್ಯ ಕಳೆದ ವರ್ಷ 181.7 ಮಿಲಿಯನ್‌ ಡಾಲರ್ ಆಗಿತ್ತು. ಅದು ಈ ಬಾರಿ 11.8 ರಷ್ಟು ಏರಿಕೆ ಆಗಿದೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕಿಂಗ್ ಖಾನ್ ಶಾರೂಖ್ ಖಾನ್‌ ಇದ್ದು, ಇವರ ಬ್ರ್ಯಾಂಡ್ ವ್ಯಾಲ್ಯೂ 120.7 ಮಿಲಿಯನ್‌ ಡಾಲರ್ ಆಗಿದೆ.

ಈ ಪಟ್ಟಿಯಲ್ಲಿ ಅಕ್ಷಯ್‌ ಕುಮಾರ್‌ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರು ಪ್ರಸಕ್ತ 111.7 ಮಿಲಿಯನ್ ಡಾಲರ್‌ ಬ್ರ್ಯಾಂಡ್‌ ಮೌಲ್ಯವಾಗಿದೆ. ಆಲಿಯಾ ಭಟ್ ಅವರ ಬ್ರ್ಯಾಂಡ್ ಮೌಲ್ಯ ಈ ವರ್ಷ 1.7 ಕುಸಿತ ಕಂಡಿದ್ದು, ಸದ್ಯ 101.1 ಮಿಲಿಯನ್ ಡಾಲರ್ ಬ್ರ್ಯಾಂಡ್ ಮೌಲ್ಯ ಹೊಂದಿದ್ದಾರೆ.

Virat Kohli Leads Celebrity Charts with a Record 227 9 Million Brand Value

ಈ ಪಟ್ಟಿಯಲ್ಲಿದೆ ಧೋನಿಗೂ ಸ್ಥಾನ

ಎಂಎಸ್ ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ. ಧೋನಿಯ ಬ್ರಾಂಡ್ ಮೌಲ್ಯ 95.8 ಮಿಲಿಯನ್ ಡಾಲರ್ ಆಗಿದ್ದರೆ, ಸಚಿನ್ 91.3 ಮಿಲಿಯನ್ ಡಾಲರ್‌ ನೊಂದಿಗೆ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ.

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಪತಿ ವಿರಾಟ್ ಕೊಹ್ಲಿ ಪ್ರಸ್ತುತ ಯುಎಸ್ ಮೂಲಕ ಕೆರಿಬಿಯನ್ ಪ್ರವಾಸದಲ್ಲಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರ ವಿರಾಟ್ ಬ್ಯಾಟ್ ಮಾಡುತ್ತಿದ್ದಾರೆ. ಟೂರ್ನಿಯ ಸೂಪರ್-8ರ ಮೊದಲ ಪಂದ್ಯವನ್ನು ಭಾರತ ಅಫ್ಘಾನಿಸ್ತಾನ ವಿರುದ್ಧ ಆಡಬೇಕಿದೆ. ಕಿಂಗ್ ಕೊಹ್ಲಿ ತಮ್ಮ ನಿರಾಶಾದಾಯಕ ಪ್ರದರ್ಶನದಿಂದ ಹೊರ ಬಂದು ಭರ್ಜರಿ ಲಯವನ್ನು ಕಂಡುಕೊಳ್ಳುವ ಅವಶ್ಯಕತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+