Virat Kohli: ‘ಸೆಡೆ’ ಆಸ್ಟ್ರೇಲಿಯನ್ನರಿಗೆ ‘ವಡೆ’ ತಿನ್ನಿಸಿದ ಮಿಸ್ಟರ್ ವಿರಾಟ್ ಕೊಹ್ಲಿ ಭರ್ಜರಿ ಸೆಂಚ್ಯುರಿ!

ಕೊಹ್ಲಿ... ಕೊಹ್ಲಿ... ಕೊಹ್ಲಿ... ಹೀಗೆ ಇಂದು ಆಸ್ಟ್ರೇಲಿಯಾದ ಪರ್ತ್ ಕ್ರೀಡಾಂಗಣದಲ್ಲಿ ಬರೀ ಕೊಹ್ಲಿ ಎಂಬ ಪದವೇ ಕ್ರೀಡಾಭಿಮಾನಿಗಳ ಕಿವಿಗೆ ರಾಚುವಂತೆ ಕೇಳಿ ಬರುತ್ತಲೇ ಇತ್ತು. ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ತಂಡಕ್ಕೆ ಇಂದು ಮತ್ತೆ ಸರಿಯಾಗಿ ಕೊಟ್ಟಿದ್ದಾರೆ, ಕೊಹ್ಲಿ & ಭಾರತದ ಆಟಗಾರರು ಕೊಟ್ಟ ಏಟಿಗೆ ಆಸ್ಟ್ರೇಲಿಯನ್ ಕ್ರಿಕೆಟ್ ತಂಡ ನಲುಗಿ ಹೋಗಿದೆ. ಈ ಸಮಯದಲ್ಲೇ, ಕನ್ನಡಿಗರ ಪ್ರೀತಿಯ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ.

ಅಂದಹಾಗೆ ಸಚಿನ್ ತೆಂಡೂಲ್ಕರ್ ಶತಕಗಳ ದಾಖಲೆ ಮುರಿಯಲು ಹತ್ತಿರದಲ್ಲೇ ಇರುವ ಈ ನಮ್ಮ ವಿರಾಟ್ ಕೊಹ್ಲಿ ಅವರು ಇಂದು ಭರ್ಜರಿಯಾಗಿ ಮತ್ತೊಂದು ಸೆಂಚುರಿ ಬಾರಿಸಿದ್ದಾರೆ. ಈ ಮೂಲಕ, 'ಸೆಡೆ' ಆಸ್ಟ್ರೇಲಿಯನ್ನರಿಗೆ 'ವಡೆ' ತಿನ್ನಿಸಿದ್ದಾರೆ ಮಿಸ್ಟರ್ ವಿರಾಟ್ ಕೊಹ್ಲಿ ಅಂತಾ ಅಭಿಮಾನಿಗಳು ಹೇಳ್ತಿದ್ದಾರೆ! ಹಾಗಾದ್ರೆ, ಸಚಿನ್ ದಾಖಲೆ ಮುರಿಯಲು ಈಗ ವಿರಾಟ್ ಕೊಹ್ಲಿ ಇನ್ನೂ ಎಷ್ಟು ಸೆಂಚ್ಯುರಿ ಬಾರಿಸಬೇಕು? ಶತಕಗಳ ಸರದಾರನ ಇಂದಿನ ಸಾಧನೆಯ ಬಗ್ಗೆ ತಿಳಿಯೋಣ ಬನ್ನಿ.

Virat Kohli Is Reached Another Level After Scoring 81st Century Against Australia

ವಿರಾಟ್ ಕೊಹ್ಲಿ ಭರ್ಜರಿ ಸೆಂಚ್ಯುರಿ!

ಆಡು ಮುಟ್ಟದ ಸೊಪ್ಪಿಲ್ಲ, ವಿರಾಟ್ ಕೊಹ್ಲಿ ಮುಟ್ಟದ ದಾಖಲೆ ಇಲ್ಲ ಅನ್ನೋ ಮಾತನ್ನ ಕೊಹ್ಲಿ ಅಭಿಮಾನಿಗಳು ಹೇಳುತ್ತಾರೆ. ಯಾಕಂದ್ರೆ ವಿರಾಟ್ ಕೊಹ್ಲಿ ತಾಕತ್ ಹಾಗಿದ್ದು, ತಮ್ಮ ಕ್ರಿಕೆಟ್ ಆಟದ ಮೂಲಕವೇ ನೂರಾರು ಕೋಟಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ ಭಾರತ ಕ್ರಿಕೆಟ್ ತಂಡದ ವಜ್ರ.

ಹೀಗಿದ್ದಾಗ, ಪಾಕಿಸ್ತಾನ ತಂಡ ಬಿಟ್ಟರೆ ಕ್ರಿಕೆಟ್ ಜಗತ್ತಿನಲ್ಲಿ ಭಾರತಕ್ಕೆ ಪರಮ ಶತ್ರು ಎಂದು ಪರಿಗಣಿಸುವ ಆಸ್ಟ್ರೇಲಿಯಾ ತಂಡವನ್ನು ವಿರಾಟ್ ಕೊಹ್ಲಿ ಬಿಡ್ತಾರಾ? ನೋ ವೇ.. ಚಾನ್ಸೆ ಇಲ್ಲ! ಚಚ್ಚಿ.. ಚಚ್ಚಿ.. ಬಿಸಾಡೋದೆ, ಇವತ್ತು ಕೂಡ ಆಸ್ಟ್ರೇಲಿಯಾ ತಂಡದ ಬೌಲಿಂಗ್ ಪಡೆಯನ್ನ ಚಚ್ಚಿ ಬಿಸಾಡಿದರು ವಿರಾಟ್ ಕೊಹ್ಲಿ!

ವಿರಾಟ್ ಕೊಹ್ಲಿ ಅಬ್ಬರಕ್ಕೆ ಎಲ್ಲಾ ಉಡೀಸ್!

ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್‌ಗೆ ಭಾರತ ತಂಡ ಆಲೌಟ್ ಆಗಿತ್ತು ಹೀಗಾಗಿ, 2ನೇ ಇನ್ನಿಂಗ್ಸ್ ಏನಾಗುತ್ತೋ? ಅನ್ನೋ ಟೆನ್ಷನ್ ಜಾಸ್ತಿ ಆಗಿತ್ತು. ಇದೀಗ ಅದಕ್ಕೆ ಉತ್ತರ ಕೂಡ ಸಿಕ್ಕುಬಿಟ್ಟಿದೆ. ಭಾರತ ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿ ಅವರ ಭರ್ಜರಿ ಶತಕ ಭಾರಿ ದೊಡ್ಡ ನೆರವನ್ನು ನೀಡಿದೆ.

143 ಬಾಲ್ ಆಡಿ, 221 ನಿಮಿಷಗಳ ಕಾಲ ಸ್ಕ್ರೀಸ್‌ನಲ್ಲಿ ನಿಂತು ಹೋರಾಡಿರುವ ಕೊಹ್ಲಿ, ಭರ್ಜರಿ 100 ರನ್ ಸಿಡಿಸಿದ್ದಾರೆ. ಅಲ್ಲದೆ, ತಮ್ಮ ಶತಕದಲ್ಲಿ ವಿರಾಟ್ ಕೊಹ್ಲಿ ಇದೇ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ & 2 ಸಿಕ್ಸರ್ ಬಾರಿಸಿದರು. ವಿರಾಟ್ ಕೊಹ್ಲಿ ಅವರಿಗೂ ಮೊದಲು ಯುವ ಕ್ರಿಕೆಟರ್ ಯಶಸ್ವಿ ಜೈಸ್ವಾಲ್ 161 ರನ್ ಚಚ್ಚಿದ್ದರು.

534 ರನ್ ಗಳಿಸಬೇಕಿದೆ ಆಸ್ಟ್ರೇಲಿಯಾ!

ಹೌದು.. ಆಸ್ಟ್ರೇಲಿಯಾ & ಭಾರತ ತಂಡದ ನಡುವೆ ಮಹತ್ವದ ಟೆಸ್ಟ್ ಸರಣಿ ಆರಂಭವಾಗಿ ಇಂದಿಗೆ 3 ದಿನ. ಆಸ್ಟ್ರೇಲಿಯಾ & ಭಾರತ ಮೊದಲ ಟೆಸ್ಟ್ ಆರಂಭವಾದ ಮೊದಲ ದಿನವೇ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ಆಗಿತ್ತು. ಯಾಕಂದ್ರೆ 150 ರನ್‌ಗೆ ಭಾರತ ತಂಡ ಆಲೌಟ್ ಆಗಿತ್ತು.

ಆದರೆ ಭಾರತ ತಂಡ ಮತ್ತೆ ಕಂಬ್ಯಾಕ್ ಮಾಡಿ ಎದುರಾಳಿ ಆಸ್ಟ್ರೇಲಿಯಾ ತಂಡವನ್ನು 104 ರನ್‌ಗಳಿಗೆ ಆಲೌಟ್ ಮಾಡಿತ್ತು. ಈ ಮೂಲಕ 2ನೇ ಇನ್ನಿಂಗ್ಸ್‌ನಲ್ಲಿ ನಮ್ಮ ಭಾರತ ತಂಡ 487 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಆಸ್ಟ್ರೇಲಿಯಾ ಈ ಸಮಯದಲ್ಲಿ ಗೆಲುವಿಗಾಗಿ 534 ರನ್ ಗಳಿಸಬೇಕಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+