ಆರ್‌ಸಿಬಿ ಅಭಿಮಾನಿಗಳನ್ನ ಕೆಣಕಿ ಕೆಟ್ಟ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್: ವಿರಾಟ್ ಕೊಹ್ಲಿ ಪ್ರತ್ಯುತ್ತರಗಳು ಹೀಗಿವೆ
IPL 2025 RCB: ಕ್ರಿಕೆಟ್‌ನಲ್ಲಿ ಕರ್ಮ ಬಿಟ್ರು ಕೊಹ್ಲಿ ಬಿಡಲ್ಲ ಎಂಬ ಮಾತೇ ಇದೆ. ಇತ್ತೀಚೆಗಷ್ಟೇ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿಯು ಪಂಜಾಬ್ ವಿರುದ್ಧ ಸೋತಾಗ ಶ್ರೇಯಸ್ ಅಯ್ಯರ್ ಇನ್ನೂ ಜೋರಾಗಿ ಕೂಗಿ ಎಂದು ಅಭಿಮಾನಿಗಳ ಕಡೆ ಕಿವಿ ಕೊಟ್ಟು ನಿಂತಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಕೊಹ್ಲಿ ಮುಟ್ಟಿನೋಡಿಕೊಳ್ಳುವ ಹಾಗೆ ತಿರುಗಟೂ ಕೊಟ್ಟಿದ್ದಾರೆ. ತಿರುಗೇಟಿನ ಒಂದೊಂದು ತುಣುಗಳು ಇಲ್ಲಿವೆ ಗಮನಿಸಿ.
ಏಪ್ರಿಲ್ 18ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ತವರು ಮೈದಾನ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಲನುಭವಿಸಿತ್ತು. ಇದೇ ಸೋಲಿನ ಸೇಡನ್ನು ಅದೇ ಪಂಜಾಬ್ ವಿರುದ್ಧ 37ನೇ ಪಂದ್ಯದಲ್ಲಿ ತೀರಿಸಿಕೊಂಡಿತು.

ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಪಂಜಾಬ್ ಮೊದಲು ಬ್ಯಾಟಿಂಗ್ ಆರಂಭಿಸಿತು. ಪಂಜಾಬ್ ತಂಡದ ಒಂದೊಂದು ವಿಕೆಟ್ ಬಿದ್ದಾಗಲೂ ವಿರಾಟ್ ಕೊಹ್ಲಿ ಸಂಭ್ರಮಿಸುವ ಮೂಲಕ ಶ್ರೇಯಸ್ ಅಯ್ಯರ್‌ಗೆ ಉರಿಸಿದರು. ಅಲ್ಲದೆ, ನಂತರ ಆರ್‌ಸಿಬಿ ಪರ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಔಟ್ ಆಗದೆ ತಂಡವನ್ನು ಗೆಲುವಿನ ದಡ ಸೇರಿಸಿದಾಗಲೂ ಪಂಜಾಬ್ ಕಿಂಗ್ಸ್ ಆಟಗಾರರಿಗೆ ತಮ್ಮ ರಿಯಾಕ್ಷನ್ ಮೂಲಕವೇ ಉರಿಸಿಬಿಟ್ರು.
ಮೊದಲೇ ಕರ್ಮ ಬಿಟ್ಟರೂ ನಾನು ಮಾತ್ರ ಬಿಡಲ್ಲ ಎನ್ನುವ ಕ್ಯಾಟಗರಿ ವಿರಾಟ್ ಕೊಹ್ಲಿ ಅವರದ್ದು. ಆದ್ದರಿಂದ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಅವರನ್ನು ಕೆಣಕಲು ತುಂಬಾ ಬಾರಿ ಯೋಚನೆ ಮಾಡುತ್ತಾರೆ. ಈ ನಡುವೆಯೂ ಶ್ರೇಯಸ್ ಅಯ್ಯರ್ ಕೆಣಕಿ ಉಲ್ಟಾ ಮತ್ತೆ ತಿರುಗೇಟು ಕೊಡಿಸಿಕೊಂಡ ಘಟನೆ ಚಂಡೀಗಢದ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದೆ. ತಿರುಗೇಟು ಕೊಟ್ಟ ಒಂದೊಂದು ಅದ್ಭುತ ದೃಶ್ಯಗಳು ಇಲ್ಲಿವೆ.
* ಆರ್‌ಸಿಬಿ ಪರ ಬೌಲಿಂಗ್ ಮಾಡಿ ಸುಯೇಶ್ ಶರ್ಮಾ ಪಂಜಾಬ್ ತಂಡದ ನೆಹಾಲ್ ವಧೇರಾ ವಿಕೆಟ್ ಪಡೆದಾಗ ವಿರಾಟ್ ಕೊಹ್ಲಿ ಇಷ್ಟೇನಾ ನಿನ್ ಪವರ್ ಎನ್ನುವ ರೀತಿಯಲ್ಲಿ ರಿಯಾಕ್ಷನ್ ಕೊಟ್ಟು ಸಂಭ್ರಮಿಸಿದರು.
* ಪಂಜಾಬ್ ವಿರುದ್ಧ ಚೊಚ್ಚಲ ಅರ್ಧ ಶತಕ ಸಿಡಿಸಿ ಬ್ಯಾಟ್ ತೋರಿಸುವ ಮೂಲಕ ಸಂಭ್ರಮಿಸಿದರು. ಅಲ್ಲದೆ, ಐಪಿಎಲ್‌ನಲ್ಲಿ ಅತೀ ಹೆಚ್ಚು ಅರ್ಧ ಶತಕ ಸಿಡಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದರು.
* ನೀನು ಬೆಂಗಳೂರಿನಲ್ಲಿ ನಾನು ನಿಮ್ಮನ್ನು ಚಂಡೀಗಢದಲ್ಲಿ ಪ್ರತ್ಯುತ್ತರ ಕೊಟ್ಟಿದ್ದೇನೆ ಎಂದು ಕೊಹ್ಲಿ ಶ್ರೇಯಸ್ ಅಯ್ಯರ್ ಬಳಿ ಹೇಳಿದಂತಿದೆ.
* ಪಂಜಾಬ್ ವಿರುದ್ಧ ಕೊನೆಯವರೆಗೂ ಬ್ಯಾಟಿಂಗ್ ಆಡಿ ಆರ್‌ಸಿಬಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ ಬಳಿಕ ಮಂಡಿಯೂರಿ ಬ್ಯಾಟ್ ನೆಲಕ್ಕಿಟ್ಟು ಕೊಹ್ಲಿ ಸಂಭ್ರಮಿಸಿದರು. ಅಷ್ಟೇ ಅಲ್ಲದೆ, ಇದು ಆರ್‌ಸಿಬಿ ಪವರ್ ಎಂಬ ಸಂಕೇತವನ್ನು ಕೊಟ್ಟರು. ಈ ಮೂಲಕ ಪಂಜಾಬ್ ಆಟಗಾರರನ್ನು ಉರಿಸಿದರು.
* ಪಂದ್ಯ ಗೆದ್ದ ಬಳಿಕ ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರು ವಿರಾಟ್ ಕೊಹ್ಲಿ ಬಳಿ ಕೆಣಕ್ಕಿದ್ದಕ್ಕೆ ಕ್ಷಮಿಸಿಬಿಡು ಗುರು ಎಂದು ಕೇಳಿಕೊಂಡಂತಿರುವ ದೃಶ್ಯ ಕೂಡ ಸೆರೆಯಾಗಿದೆ.












Click it and Unblock the Notifications