Virat Kohli : ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರುದ್ಧ ಸಿಟ್ಟಿಗೆದ್ದ ವಿರಾಟ್ ಕೊಹ್ಲಿ!
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಉತ್ತಮ ತಂಡವನ್ನೇ ಕಟ್ಟಿದೆ, ಬೌಲಿಂಗ್ ವಿಭಾಗ ಬಲಪಡಿಸಲು ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್‌ರನ್ನು ಖರೀದಿ ಮಾಡಿದೆ. ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಜೊತೆಗೆ ವಿಲ್ ಜ್ಯಾಕ್ಸ್‌ರನ್ನು ಖರೀದಿ ಮಾಡದೇ ಇರುವುದು ಅಭಿಮಾನಿಗಳಿಗೆ ಮತ್ತೊಂದು ಆಘಾತವಾಗಿದೆ.
ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರುದ್ಧ ವಿರಾಟ್ ಕೊಹ್ಲಿ ಕೂಡ ಸಿಟ್ಟಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಮೆಗಾ ಹರಾಜಿಗಾಗಿ ಕೆಲವು ಆಟಗಾರರನ್ನು ಖರೀದಿ ಮಾಡುವಂತೆ ವಿರಾಟ್ ಕೊಹ್ಲಿ ಕೊಟ್ಟಿದ್ದ ಸಲಹೆಯನ್ನು ಫ್ರಾಂಚೈಸಿ ಪರಿಗಣಿಸದೇ ಇರುವುದು ಕೊಹ್ಲಿ ಸಿಟ್ಟಿಗೆ ಕಾರಣ ಎನ್ನಲಾಗಿದೆ.

ಕೊಹ್ಲಿ ಆಪ್ತರ ಕಡೆಗಣನೆ
ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ ಕೆಎಲ್ ರಾಹುಲ್‌ರನ್ನು ಖರೀದಿ ಮಾಡುವಂತೆ ಆಡಳಿಯ ಮಂಡಳಿಗೆ ಸಲಹೆ ಕೊಟ್ಟಿದ್ದರು ಎನ್ನಲಾಗಿದೆ. ಆದರೆ ಮ್ಯಾನೇಜ್‌ಮೆಂಟ್ ಕೆಎಲ್ ರಾಹುಲ್‌ಗಾಗಿ ಅಷ್ಟೇನೂ ಆಸಕ್ತಿ ತೋರಿಸಲಿಲ್ಲ. 10 ಕೋಟಿ ರೂಪಾಯಿಯವರೆಗೆ ಹರಾಜಿನಲ್ಲಿ ಕೂಗಿದರೂ ಬಳಿಕ ಸುಮ್ಮನಾದರು. 14 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಕೆಎಲ್ ರಾಹುಲ್‌ರನ್ನು ಖರೀದಿ ಮಾಡಲು ಯಶಸ್ವಿಯಾಯಿತು.
ಕೆಎಲ್ ರಾಹುಲ್‌ರನ್ನು ಖರೀದಿ ಮಾಡದೇ ಇರುವುದಕ್ಕೆ ವಿರಾಟ್ ಕೊಹ್ಲಿ ಮ್ಯಾನೇಜ್‌ಮೆಂಟ್ ವಿರುದ್ಧ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಕೆಎಲ್ ರಾಹುಲ್ ಮಾತ್ರವಲ್ಲ ಮೊಹಮ್ಮದ್ ಸಿರಾಜ್‌ರನ್ನು ಖರೀದಿ ಮಾಡಲು ಕೂಡ ಕೊಹ್ಲಿ ಸಲಹೆ ನೀಡಿದ್ದು ಮ್ಯಾನೇಜ್‌ಮೆಂಟ್ ಅದನ್ನೂ ಕೂಡ ಕಡೆಗಣಿಸಿದೆ. ಇದರಿಂದಾಗಿ ಸಿರಾಜ್ ಗುಜರಾತ್ ಟೈಟಾನ್ಸ್ ಪಾಲಾಗಿದ್ದು 2025ರ ಐಪಿಎಲ್‌ನಲ್ಲಿ ಕೊಹ್ಲಿ ವಿರುದ್ಧ ಬೌಲಿಂಗ್ ಮಾಡಲಿದ್ದಾರೆ.
2025ರ ಐಪಿಎಲ್‌ನಲ್ಲಿ ಆರ್ ಸಿಬಿ ತಂಡಕ್ಕೆ ನಾಯಕ ಯಾರು ಎನ್ನುವ ಪ್ರಶ್ನೆ ಎದುರಾಗಿದೆ. ತಂಡದಲ್ಲಿ ಈಗ ನಾಯಕರಾಗುವ ಸಾಮರ್ಥ್ಯ ಕೊಹ್ಲಿಗೆ ಮಾತ್ರ ಇದೆ ಎನ್ನಲಾಗಿದೆ. ಒಂದು ವೇಳೆ ಕೊಹ್ಲಿ ಒಪ್ಪದೇ ಇದ್ದರೆ ರಜತ್ ಪಟಿದಾರ್ ಅಥವಾ ಭುವನೇಶ್ವರ್ ಕುಮಾರ್ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಐಪಿಎಲ್ 2025ರ ಆವೃತ್ತಿಗೆ ಆರ್ ಸಿಬಿ ತಂಡ
ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ರಜತ್ ಪಟಿದಾರ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೊಬ್ ಬೆಥೆಲ್, ಸ್ವಸ್ತಿಕ್ ಚಿಕಾರ, ಜಿತೇಶ್ ಶರ್ಮಾ, ಮನೋಜ್ ಭಾಂಡಗೆ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಯಶ್ ದಯಾಳ್, ಜೋಶ್ ಹೇಜಲ್‌ವುಡ್, ಸುಯಶ್ ಶರ್ಮಾ, ನುವಾನ್ ತುಷಾರ, ಭುವನೇಶ್ವರ್ ಕುಮಾರ್, ರಸಿಕ್ ದಾರ್ ಸಲಾಮ್, ಅಭಿನಂದನ್ ಸಿಂಗ್, ರೊಮಾರಿಯೋ ಶೆಫರ್ಡ್, ಮೋಹಿತ್ ರಾಠೀ.












Click it and Unblock the Notifications