India VS Pakistan: ಕೊಹ್ಲಿ & ರಾಹುಲ್ ಭರ್ಜರಿ ಸೆಂಚ್ಯುರಿ!

ಪಾಕಿಸ್ತಾನದ ಬೌಲರ್‌ಗಳ ಬೆವರು ಇಳಿಸಿದ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್. ರಾಹುಲ್ ಜೋಡಿ ಭರ್ಜರಿ ಸೆಂಚ್ಯುರಿ ಗಳಿಸಿ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಕೊಹ್ಲಿ ಮತ್ತು ರಾಹುಲ್ ಜೋಡಿ ಹೊಸ ದಾಖಲೆ ಬರೆದಿದೆ. ಸಂಕಷ್ಟ ಸಮಯದಲ್ಲಿ ಟೀಂ ಇಂಡಿಯಾಗೆ ಭಾರತಕ್ಕೆ ಬಲ ನೀಡಿದ ವಿರಾಟ್ ಕೊಹ್ಲಿ & ಕೆ.ಎಲ್. ರಾಹುಲ್ 3ನೇ ವಿಕೆಟ್‌ಗೆ ಭರ್ಜರಿ 233 ರನ್ ಜೊತೆಯಾಟ ನೀಡುವ ಮೂಲಕ ದಾಖಲೆ ಪುಡಿ ಪುಡಿ ಮಾಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಮ್ಯಾಚ್ ಅಂದ್ರೆ ಇಡೀ ಜಗತ್ತು ಈ ಪಂದ್ಯಕ್ಕಾಗಿ ಕಾಯುತ್ತದೆ. ಆದ್ರೆ ಮಳೆ ಹಿನ್ನೆಲೆ ಪಂದ್ಯ ಏನಾಗುತ್ತೋ? ಎಂಬ ಚಿಂತೆ ಶುರುವಾಗಿತ್ತು. ಆದ್ರೆ ಈ ಚಿಂತೆ ದೂರ ಮಾಡಿದ್ದು ವಿರಾಟ್ ಕೊಹ್ಲಿ & ಕೆ.ಎಲ್. ರಾಹುಲ್ ಜೋಡಿ. ಭಾರತದ ತಂಡದ ಈ ಇಬ್ಬರು ಆಟಗಾರರು 3ನೇ ವಿಕೆಟ್ ಜೊತೆಯಾಟಕ್ಕೆ ನಿರೀಕ್ಷೆಗೂ ಮೀರಿದ ಜೊತೆಯಾಟ ನೀಡಿದ್ದು, ಇಬ್ಬರೂ ಭರ್ಜರಿ ಶತಕ ಬಾರಿಸಿದರು. ಹೀಗೆ ಕಿಂಗ್ ಕೊಹ್ಲಿ ಮತ್ತು ರಾಹುಲ್‌ಗೆ ಮತ್ತೊಂದು ಮರೆಯಲಾಗದ ಮ್ಯಾಚ್ ಸಿಕ್ಕಂತಾಗಿದೆ.

virat-kohli-and-kl-rahul-century-against-pakistan

ಇಬ್ಬರದ್ದೂ ಸಖತ್ ಸೆಂಚ್ಯುರಿ ಮಗಾ!

ಅಂತಿಮವಾಗಿ ಪಂದ್ಯ ಮುಗಿದಾಗ ಭಾರತದ ಪರ ವಿರಾಟ್ ಕೊಹ್ಲಿ 94 ಎಸೆತಗಳಲ್ಲಿ 122 ರನ್ ಗಳಿಸಿದ್ದರು. ಮತ್ತೊಂದ್ಕಡೆ ಕೆ.ಎಲ್. ರಾಹುಲ್ 106 ಎಸೆತದಲ್ಲಿ 111 ರನ್ ಗಳಿಸಿ ಔಟ್ ಆಗದೆ ಅಜೇಯರಾಗಿ ಉಳಿದರು. ಈ ಪೈಕಿ ವಿರಾಟ್ ಕೊಹ್ಲಿ 9 ಬೌಂಡರಿ & 3 ಸಿಕ್ಸ್ ಹೊಡೆದ್ರು. ಕೆ.ಎಲ್. ರಾಹುಲ್ 12 ಬೌಂಡರಿ ಸೇರಿ ಒಟ್ಟು 2 ಸಿಕ್ಸ್ ಬಾರಿಸುವ ಮೂಲಕ ಪಾಕಿಸ್ತಾನದ ಬೌಲರ್‌ಗಳಿಗೆ ಚಳಿ ಬಿಡಿಸಿದ್ದಾರೆ. ಪಂದ್ಯ ಮುಗಿದಾಗ ಭಾರತದ ಮೊತ್ತ 50 ಓವರ್‌ಗೆ 356 ರನ್ ಆಗಿತ್ತು. ಹಾಗೇ ಭಾರತ ಕೇವಲ 2 ವಿಕೆಟ್ ಕಳೆದುಕೊಂಡು ಈ ಗುರಿ ತಲುಪಿತ್ತು.

'ಏಷ್ಯಾಕಪ್‌-2023'ಕ್ಕೆ ಮಳೆ ಕಾಟ

ಶ್ರೀಲಂಕಾ ಮಳೆ ಕಾರಣಕ್ಕೆ ನಲುಗಿ ಹೋಗಿದ್ದು 'ಏಷ್ಯಾಕಪ್‌-2023'ಯ ಬಹುತೇಕ ಪಂದ್ಯ ಇದೇ ಮಳೆಗೆ ಆಹುತಿಯಾಗಿವೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಮೀಸಲಾಗಿ ಒಂದು ದಿನ ಸಿಕ್ಕಿತ್ತು. ನಿನ್ನೆ ಮ್ಯಾಚ್ ನಿಂತರೂ ಇಂದು ಪಂದ್ಯ ಶುರುವಾಗಿತ್ತು. ಹೀಗಾಗಿ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಇನ್ನೇನು ಪಾಕಿಸ್ತಾನದ ಇನ್ನಿಂಗ್ಸ್ ಕೂಡ ಶುರುವಾಗಲಿದ್ದು, ಬೃಹತ್ ಮೊತ್ತ ಬೆನ್ನತ್ತಲು ಪಾಕ್‌ನ ಆಟಗಾರರು ಪರದಾಡುವ ಸಾಧ್ಯತೆ ಇದೆ. ಹಾಗೆಯೇ ಪಿಚ್ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತಿದ್ದು, ಭಾರತದ ಪರವಾಗಿ ಸ್ಪಿನ್ ಬೌಲರ್‌ಗಳು ಮಿಂಚುವ ಲಕ್ಷಣ ಕಾಣುತ್ತಿದೆ.

virat-kohli-and-kl-rahul-century-against-pakistan

ಕೊಹ್ಲಿ.. ಕೊಹ್ಲಿ.. ಕೊಹ್ಲಿ..

ಒಟ್ನಲ್ಲಿ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಮತ್ತೊಂದು ಶತಕ ಹೊಡೆದು ಭಾರತ ತಂಡಕ್ಕೆ ಶಕ್ತಿ ತುಂಬಿದ್ದಾರೆ. ಈಗಾಗಲೇ ಕೊಹ್ಲಿ ಹಾಗೂ ರಾಹುಲ್ ಪಾಕಿಸ್ತಾನದ ಬೌಲಿಂಗ್ ಪಡೆಗೆ ಬೆವರು ಹರಿಯುವಂತೆ ಮಾಡಿದ್ದಾರೆ, ಈಗ ಪಾಕ್ ಬ್ಯಾಟ್ಸ್‌ಮನ್‌ಗಳ ಪೆವಿಲಿಯನ್ ಪರೇಡ್ ನಡೆಸಲು ಭಾರತದ ಬೌಲರ್ಸ್ ಸಜ್ಜಾಗಿದ್ದಾರೆ. ಈ ಮೂಲಕ ಮಳೆಯಲ್ಲೇ ಪಂದ್ಯ ಕೊಚ್ಚಿ ಹೋಗಬಹುದು ಎಂಬ ಬೇಸರದಲ್ಲಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ನ್ಯೂಸ್ ಸಿಕ್ಕಿದೆ. ಮತ್ತೊಂದು ಮಹತ್ವದ ಗೆಲುವಿಗೆ ಭಾರತ ತಂಡ ಸಜ್ಜಾಗಿದೆ.

ಈ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧದ ತಮ್ಮ ರನ್ ಸರಾಸರಿಯ ಬಲವನ್ನು ಹಾಗೇ ಉಳಿಸಿಕೊಂಡಿದ್ದಾರೆ. ಮೊದಲಿಂದಲೂ ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ ಉತ್ತಮವಾಗಿ ರನ್ ಸರಾಸರಿ ಹೊಂದಿದ್ದಾರೆ. ಈ ಪೈಕಿ ಭಾರತ ತಂಡಕ್ಕೆ ಸಂಕಷ್ಟ ಎದುರಾದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಬೆನ್ನೆಲುಬಾಗಿ ನಿಂತು ಪಾಕಿಸ್ತಾನದ ಕೈಯಿಂದ ಗೆಲುವು ಕಸಿದುಕೊಂಡಿದ್ದಾರೆ. ಅದೇ ರೀತಿ ಇಂದಿನ ಪಂದ್ಯ ಕೂಡ ಉತ್ತಮವಾಗಿ ಮೂಡಿ ಬಂದಿದೆ. ಕೊಹ್ಲಿ ಹಾಗೂ ರಾಹುಲ್ ಜೊತೆಯಾಟಕ್ಕೆ ಕ್ರಿಕೆಟ್ ಜಗತ್ತು ಚಪ್ಪಾಳೆ ತಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+