ಆರ್‌ಸಿಬಿಗೆ ಇವರೇ ರಿಮೋಟ್ ಕಂಟ್ರೋಲ್: ಸ್ವಿಂಗ್ ಕಿಂಗ್‌ ಭುವನೇಶ್ವರ್ ಕುಮಾರ್ ಹೇಳಿದ್ಯಾರಿಗೆ?

Bhuvneshwar Kumar: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ (ಏಪ್ರಿಲ್‌ 27) ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಆದರೆ ಈ ಗೆಲುವಿಗಿಂತ ಹೆಚ್ಚಾಗಿ ಈಗ ಚರ್ಚೆಯಾಗುತ್ತಿರುವುದು ವಿರಾಟ್ ಕೊಹ್ಲಿ ಅವರ ಅಸಾಧಾರಣ ನಾಯಕತ್ವದ ಗುಣಗಳು ಮತ್ತು ಅವರ ಐತಿಹಾಸಿಕ 9,000 ರನ್‌ಗಳ ಸಾಧನೆ.

ತಮ್ಮ ಕ್ರಿಕೆಟ್ ವೃತ್ತಿಜೀವನ ಆರಂಭವಾದ ಅರುಣ್ ಜೇಟ್ಲಿ ಮೈದಾನದಲ್ಲೇ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದ ಹೊಸ ಪುಟವನ್ನು ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 9,000 ರನ್ ಪೂರೈಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಡೆಲ್ಲಿ ನೀಡಿದ 76 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕೊಹ್ಲಿ ಕೇವಲ 15 ಎಸೆತಗಳಲ್ಲಿ ಅಜೇಯ 23 ರನ್ ಸಿಡಿಸಿ ಪಂದ್ಯವನ್ನು ಫಿನಿಶ್ ಮಾಡಿದರು. ಪ್ರಸ್ತುತ ಈ ಸೀಸನ್‌ನಲ್ಲಿ ವಿರಾಟ್ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

Virat Kohli 9 000 IPL Runs And Leadership Praised by Bhuvneshwar Kumar RCB vs Delhi Capitals 2026

ಬೌಲರ್‌ಗಳಿಗೆ ಕೊಹ್ಲಿನೇ ರಿಮೋಟ್ ಕಂಟ್ರೋಲ್

ಪಂದ್ಯದ ನಂತರ ಮಾತನಾಡಿದ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ವಿರಾಟ್‌ ಕೊಹ್ಲಿ ಮೈದಾನದಲ್ಲಿ ಹೇಗೆ ಬೌಲರ್‌ಗಳಿಗೆ ನೆರವಾಗುತ್ತಾರೆ ಎಂಬುದನ್ನು ವಿವರಿಸಿದ್ದಾರೆ. "ವಿರಾಟ್ ಕೇವಲ ಬ್ಯಾಟಿಂಗ್ ಮಾಡುವುದಲ್ಲ, ಬೌಲರ್‌ಗಳಿಗೆ ಯಾವ ರೀತಿಯಕ್ಲಿ ಬಾಲ್‌ ಹಾಕಬೇಕು, ಎದುರಾಳಿ ಬ್ಯಾಟರ್‌ನ ದೌರ್ಬಲ್ಯವೇನು ಎಂಬುದನ್ನು ಕ್ಷಣಕ್ಷಣಕ್ಕೂ ಮಾರ್ಗದರ್ಶನ ನೀಡುತ್ತಲಿರುತ್ತಾರೆ. ಅವರು ಕೇವಲ ರನ್ ಮಷಿನ್ ಅಲ್ಲ, ಬೌಲರ್‌ಗಳ ಪಾಲಿನ ಮಾಸ್ಟರ್ ಮೈಂಡ್. ಅವರು ಮೈದಾನದಲ್ಲಿದ್ದರೆ ನಮಗೆ ಪಂದ್ಯ ಗೆಲ್ಲುವುದು ತುಂಬಾ ಸುಲಭವಾಗುತ್ತದೆ," ಎಂದು ಹೇಳಿದ್ದಾರೆ.

ಡೆಲ್ಲಿ ವಿರುದ್ಧ ಆರ್‌ಸಿಬಿ ಭರ್ಜರಿ ಗೆಲುವು

ಇನ್ನೂ ಸೋಮವಾರ ನಡೆದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಜೋಶ್ ಹ್ಯಾಜಲ್‌ವುಡ್ 4 ವಿಕೆಟ್ ಹಾಗೂ ಭುವನೇಶ್ವರ್ ಕುಮಾರ್ 3 ವಿಕೆಟ್ ಕಬಳಿದುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಕೇವಲ 75 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನೂ ಬಳಿಕ ಡೆಲ್ಲಿ ನೀಡಿದ 76 ರನ್‌ಗಳನ್ನು ಗುರಿಯನ್ನ ಆರ್‌ಸಿಬಿ ಕೇವಲ 6.3 ಓವರ್‌ಗಳಿಗೆ ಮುಗಿಸುವ ಮೂಲಕ ಭರ್ಜರಿ ಜಯ ದಾಖಲಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+