Paris Olympics: ವಿಶ್ವ ಚಾಂಪಿಯನ್ ಯುಯಿ ಸುಸಾಕಿ ವಿರುದ್ಧ ಗೆದ್ದ ವಿನೇಶ್ ಫೋಗಟ್‌

ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧ ಹೋರಾಟ ಮಾಡಿ, ಬಿಜೆಪಿ ಬೆಂಬಲಿಗರಿಂದ ಟೀಕೆ, ಅವಹೇಳನಕ್ಕೆ ಒಳಗಾಗಿದ್ದ ಭಾರತದ ಹೆಮ್ಮೆಯ ಕುಸ್ತಿಪಟು ವಿನೇಶ್ ಫೋಗಟ್‌ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕದ ಭರವಸೆ ಮೂಡಿಸಿದ್ದಾರೆ. ಮಂಗಳವಾರ ನಡೆದ ರೋಚಕ ಕುಸ್ತಿ ಪಂದ್ಯದಲ್ಲಿ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಮತ್ತು ವಿಶ್ವ ಚಾಂಪಿಯನ್ ಜಪಾನ್‌ನ ಯುಯಿ ಸುಸಾಕಿಯನ್ನು 3-2 ರಿಂದ ಸೋಲಿಸಿದ್ದಾರೆ.

ಈ ಗೆಲುವಿನ ಮೂಲಕ ವಿನೇಶ್ ಫೋಗಟ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಎಂಟನೇ ಶ್ರೇಯಾಂಕಿತ ಕುಸ್ತಿಪಟು ಉಕ್ರೇನ್‌ನ ಒಕ್ಸಾನಾ ಲಿವಾಚ್ ಅವರ ವಿರುದ್ಧ ಸೆಣೆಸಲಿದ್ದಾರೆ. ಇನ್ನೆರಡು ಪಂದ್ಯ ಗೆದ್ದರೆ ಸಾಕು ವಿನೇಶ್ ಫೋಗಟ್ ಒಲಿಂಪಿಕ್‌ನಲ್ಲಿ ಪದಕವನ್ನು ಖಚಿತಪಡಿಸಿಕೊಳ್ಳಲಿದ್ದಾರೆ.

Vinesh Phogat Triumphs Over World Champion Yui Susaki in Paris Olympics

ವಿಶ್ವ ಚಾಂಪಿಯನ್ ಜಪಾನ್‌ನ ಯುಯಿ ಸುಸಾಕಿ ಮತ್ತು ವಿನೇಶ್ ಫೋಗಾಟ್ ಪಂದ್ಯ ನಿಧಾನವಾಗಿ ಆರಂಭವಾಯಿತು. ಆರಂಭದ ಕೆಲ ಸಮಯ ಇಬ್ಬರು ಮಹತ್ವದ ಮೂವ್‌ಗಳನ್ನು ಮಾಡಿದರು. ವಿನೇಶ್‌ಗೆ ರೆಫರಿಂದ ಎಚ್ಚರಿಕೆ ಸಿಕ್ಕಿದೆ. ವಿನೇಶ್ ಹೆಚ್ಚು ರಕ್ಷಣಾತ್ಮಕವಾಗಿ ಆಡಿದ್ದರಿಂದ ರೆಫರಿ ಯುಯಿಗೆ ಮೊದಲ ಅಂಕ ನೀಡಿದರು. ವಿನೇಶ್ 30 ಸೆಕೆಂಡ್‌ ಸಮಯದಲ್ಲಿ ಸ್ಕೋರ್ ಗಳಿಸಲು ವಿಫಲವಾದರು.

ಯುಯಿ ಮೊದಲ ಪಾಯಿಂಟ್ ಗಳಿಸಿದ ಬಳಿಕ ಹೆಚ್ಚು ಸಕ್ರಿಯವಾಗಿ ಆಡಿದರು. ಆದರೆ ವಿನೇಶ್ ಫೋಗಟ್ ರಕ್ಷಣಾತ್ಮಕವಾಗಿ ಆಡುವ ಮೂಲಕ ಎದುರಾಳಿಯ ಸ್ಕೋರ್ ಹೆಚ್ಚಾಗದಂತೆ ನೋಡಿಕೊಂಡರು. ಮೊದಲು ಮೂರು ನಿಮಿಷಗಳಲ್ಲಿ ಸ್ಕೋರ್ 1-0 ಆಗಿತ್ತು.

ಕೊನೆಯ ಎರಡು ನಿಮಿಷ ಇರುವಾಗ ವಿನೇಶ್‌ಗೆ ರೆಫರಿ ಕಡೆಯಿಂದ ಮತ್ತೊಂದು ಎಚ್ಚರಿಕೆ ಸಿಕ್ಕಿದೆ. ಯುಯಿ ಮತ್ತೊಂದು ಪಾಯಿಂಟ್ ಗಳಿಸಿದರು. ಇನ್ನೇನು ವಿನೇಶ್ ಫೋಗಟ್ ಸೋಲು ಖಚಿತ ಎಂದೇ ಭಾವಿಸಲಾಗಿತ್ತು, ಆದರೆ ಕೊನೆಯ 10 ಸೆಕೆಂಡ್‌ಗಳಲ್ಲಿ ಪಂದ್ಯದ ಫಲಿತಾಂಶವೇ ಬದಲಾಯಿಗಿ ಹೋಯಿತು.

ವಿನೇಶ್ ಹೆಚಚು ಆಕ್ರಮಣಕಾರಿಯಾಗಿ ಆಡಿದರು ಮತ್ತು ಯುಯಿ ಅವರನ್ನು ಅಂಕದಿಂದ ಹೊರಗೆ ತಳ್ಳಿದರು. ಇದರಿಂದ ಅವರು ಎರಡು ಅಂಕ ಪಡೆದುಕೊಂಡರು, ಬಳಿಕ ರೆಫರಿ ವಿನೇಶ್‌ಗೆ ಒಂದು ಅಂಕವನ್ನು ಬಹುಮಾನವಾನಿ ನೀಡಿದರು ಮತ್ತು 3-2 ಅಂತರದಲ್ಲಿ ರೋಚಕ ಗೆಲುವು ಸಾಧಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+