Vinesh Phogat: ನಿವೃತ್ತಿ ಘೋಷಣೆ ಮಾಡಿದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್

ನವದೆಹಲಿ, ಆಗಸ್ಟ್‌ 08: ಪ್ಯಾರಿಸ್ ಒಲಿಂಪಿಕ್ಸ್ 2024ರಿಂದ ಅನರ್ಹಗೊಂಡ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಫೈನಲ್‌ ಪ್ರವೇಶಿಸಿದ ಬಳಿಕ ಅನರ್ಹಗೊಂಡಿದ್ದ ಅವರು ಬಹಳ ನೊಂದಿದ್ದರು. ಬುಧವಾರದ ಬೆಳವಣಿಗೆಗಳ ಬಳಿಕ ವಿನೇಶ್ ಫೋಗಟ್ ನಿವೃತ್ತರಾಗುವುದಾಗಿ ಹೇಳಿದ್ದಾರೆ.

ವಿನೇಶ್ ಫೋಗಟ್ ಗುರುವಾರ ಬೆಳಗ್ಗೆ ಟ್ವೀಟ್ ಮಾಡಿ ನಿವೃತ್ತಿ ಘೋಷಣೆ ಮಾಡಿದ್ದಾರೆ, "ಕ್ಷಮಿಸಿ, ನಿಮ್ಮ ಕನಸು, ನನ್ನ ಧೈರ್ಯ ಎಲ್ಲವೂ ಮರಿದು ಹೋಗಿದೆ. ಈಗ ನನಗೆ ಇದಕ್ಕಿಂತ ಹೆಚ್ಚಿನ ಶಕ್ತಿ ಇಲ್ಲ. 2021-2024 ಕುಸ್ತಿಗೆ ವಿದಾಯ. ನಿಮ್ಮೆಲ್ಲರಿಗೂ ನಾನು ಋಣಿಯಾಗಿರುತ್ತೇನೆ" ಎಂದು ಪೋಸ್ಟ್ ಹಾಕಿದ್ದಾರೆ.

Vinesh Phogat Announces Retirement Day After Olympics 2024 Disqualification

ಹರ್ಯಾಣ ಮೂಲದ 29 ವರ್ಷದ ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತಕ್ಕೆ ಪದಕ ತಂದು ಕೊಡುವ ಭರವಸೆ ಮೂಡಿಸಿದ್ದರು. ಇದಕ್ಕೆ ಕೇವಲ ಒಂದು ಹೆಜ್ಜೆ ಬಾಕಿ ಇತ್ತು. 50 ಕೆಜಿ ಮಹಿಳಾ ಕುಸ್ತಿ ಅಖಾಡದಲ್ಲಿ ಫೈನಲ್ ಪ್ರವೇಶಿಸಿದ ಮೊದಲಿಗರು ಎಂಬ ಹೆಗ್ಗಳಿಕೆಯನ್ನು ಅವರು ಪಡೆದಿದ್ದರು.

ಆದರೆ ಬುಧವಾರ ನಡೆದ ಬೆಳವಣಿಗೆ ವಿನೇಶ್ ಫೋಗಟ್ ಮತ್ತು ಕೋಟ್ಯಾಂತರ ಭಾರತೀಯರಿಗೆ ನಿರಾಸೆ ಮೂಡಿಸಿತ್ತು. 50 ಕೆಜಿಗಿಂತ ಹೆಚ್ಚಿನ ತೂಕ ಹೊಂದಿದ ಕಾರಣಕ್ಕೆ ವಿನೇಶ್ ಫೋಗಟ್‌ ಪ್ಯಾರಿಸ್ ಒಲಿಂಪಿಕ್ಸ್ 2024ರಿಂದ ಹೊರ ಬಿದ್ದಿದ್ದರು. ಫೈನಲ್‌ಗೆ ಪ್ರವೇಶ ಪಡೆದಿದ್ದ ಅವರು ಅನರ್ಹಗೊಂಡಿದ್ದರು.

ಫೈನಲ್ ಪಂದ್ಯಕ್ಕೂ ಮುನ್ನ ಕುಸ್ತಿಪಟುಗಳ ತೂಕ ಪರೀಕ್ಷೆ ಮಾಡಲಾಗುತ್ತದೆ. ಮಂಗಳವಾರ ವಿನೇಶ್ ಫೋಗಟ್ ಅವರ ತೂಕ 52 ಕೆಜಿಯಾಗಿತ್ತು. ಅದನ್ನು ಇಳಿಸಲು ಅವರು ರಾತ್ರಿಪೂರ್ತಿ ವಿವಿಧ ವ್ಯಾಯಾಮಗಳನ್ನು ಮಾಡಿದ್ದರು. ಬುಧವಾರ ಬೆಳಗ್ಗೆ ತೂಕ ಚೆಕ್ ಮಾಡಿದಾಗ 50 ಕೆಜಿಗಿಂತ 100 ಗ್ರಾಂ ತೂಕ ಹೆಚ್ಚಿತ್ತು. ಆದ್ದರಿಂದ ಒಲಿಂಪಿಕ್ಸ್‌ನಿಂದ ಅವರು ಅನರ್ಹ ಎಂದು ಘೋಷಣೆ ಮಾಡಲಾಯಿತು.

1 ಗಂಟೆ ಸಮಯ ನೀಡಿ ತೂಕ ಕಡಿಮೆ ಮಾಡಿಕೊಂಡು ಬರುತ್ತೇನೆ ಎಂದು ಮಾಡಿದ ಮನವಿಯನ್ನು ತಿರಸ್ಕಾರ ಮಾಡಲಾಗಿತ್ತು. ಇದರಿಂದಾಗಿ ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಪದಕ ಗೆಲ್ಲುವ ಆಸೆ ಹೊಂದಿದ್ದ ವಿನೇಶ್ ಫೋಗಟ್ ಮತ್ತು ಕೋಟ್ಯಾಂತರ ಭಾರತೀಯರಿಗೆ ನಿರಾಸೆಯಾಗಿತ್ತು. ರಾತ್ರಿಪೂರ್ತಿ ತೂಕ ಇಳಿಸಿಕೊಳ್ಳಲು ವ್ಯಾಯಾಮ ಮಾಡಿದ್ದ ವಿನೇಶ್ ಫೋಗಟ್ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು.

ಬುಧವಾರದಂದು ಪ್ಯಾರಿಸ್ ಒಲಿಂಪಿಕ್ಸ್ 2024ರ 50 ಕೆಜಿ ವಿಭಾಗದ ಮಹಿಳೆಯರ ಫ್ರೀಸ್ಟೈಲ್ ಕುಸ್ತಿ ಫೈನಲ್‌ನಲ್ಲಿ ವಿನೇಶ್ ಫೋಗಟ್ ಪದಕ ಗೆಲ್ಲುವುದನ್ನು ಕಣ್ತುಂಬಿಕೊಳ್ಳಲು ಭಾರತೀಯಕರು ಕಾದು ಕುಳಿತಿದ್ದರು. ಆದರೆ ತೂಕದ ಕಾರಣಕ್ಕೆ ಅವರು ಅನರ್ಹಗೊಂಡಿದ್ದು, ಭಾರೀ ನಿರಾಸೆ ಮೂಡಿಸಿತ್ತು. ಅವರಿಗೆ ಆಡಲು ಅವಕಾಶ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು.

ಮಂಗಳವಾರ ವಿನೇಶ್ ಫೋಗಟ್ ಫೈನಲ್ ಪ್ರವೇಶಿಸಿದ್ದರು. ಅಮೆರಿಕದ ಸಾರಾ ಆನ್ ಹಿಲ್ಡ್‌ಬ್ರಾಂಟ್‌ ಅವರನ್ನು ವಿನೇಶ್ ಫೋಗಟ್ ಎದುರಿಸಬೇಕಿತ್ತು. ಫೈನಲ್ ಪಂದ್ಯದಲ್ಲಿ ಅವರು ಅಖಾಡಕ್ಕೆ ಇಳಿದಿದ್ದರೆ ಚಿನ್ನ ಅಥವ ಬೆಳ್ಳಿ ಪದಕ ಭಾರತಕ್ಕೆ ಬರುವುದು ಖಾತ್ರಿಯಾಗಿತ್ತು.

ವಿನೇಶ್ ಫೋಗಟ್ ಅನರ್ಹಗೊಂಡ ಬಳಿಕ ಪ್ರಕಟಣೆ ಹೊರಡಿಸಿದ್ದ ಪ್ಯಾರಿಸ್ ಒಲಿಂಪಿಕ್ಸ್ 2024ರ ಸಮಿತಿ ಸ್ಪರ್ಧೆಯ 2ನೇ ದಿನದ ಪರೀಕ್ಷೆಯಲ್ಲಿ ವಿನೇಶ್ ಫೋಗಟ್ ಅನರ್ಹಗೊಂಡಿದ್ದಾರೆ. ಅಂತರಾಷ್ಟ್ರೀಯ ಕುಸ್ತಿ ನಿಯಾವಳಿ ಆರ್ಟಿಕಲ್ 11ರ ಪ್ರಕಾರ ಸೆಮಿಫೈನಲ್‌ನಲ್ಲಿ ವಿನೇಶ್ ಜೊತೆ ಸೆಣಸಿದ ಕ್ಯೂಬಾದ ಗುಜ್ಮನ್ ಲೋಪಜ್ ಯುಸ್ನೆಯಿಲಿಸ್ ಫೈನಲ್ ಪ್ರವೇಶಿಸಿದ್ದಾರೆ ಎಂದು ಹೇಳಿತ್ತು. ಜಪಾನ್‌ನ ಯುಯಿ ಸುಸಾಕಿ ಮತ್ತು ಉಕ್ರೇನ್‌ನ ಒಕ್ಸಾನಾ ಲಿವಾಚ್ ಅವರು ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ ಎಂದು ತಿಳಿಸಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+