ಆರ್‌ಸಿಬಿ ಮಾಜಿ ಓನರ್ 1,00,000 ಕೋಟಿ ರೂಪಾಯಿ ಬ್ಯುಸಿನೆಸ್, ವಿಜಯ್ ಮಲ್ಯಗೆ ದ್ರೋಹ ಮಾಡಿದ್ದು ಯಾರು... Vijay Mallya
ವಿಜಯ್ ಮಲ್ಯ ಭಾರತದ ಬಹುದೊಡ್ಡ ಉದ್ಯಮಗಳನ್ನು ಕಟ್ಟಿ ಬೆಳೆಸಿದರು, ಅದರಲ್ಲೂ ವಿಜಯ್ ಮಲ್ಯ ಭಾರತದಲ್ಲಿ ಮದ್ಯ ಅಂದ್ರೆ ಲಿಕ್ಕರ್ ಬ್ಯುಸಿನೆಸ್‌ಗೆ ಹೊಸ ರೂಪ ನೀಡಿದ್ದರು. ಹೀಗೆ ವಿಜಯ್ ಮಲ್ಯ ಇಡೀ ಜಗತ್ತೇ ತಿರುಗಿ ನೋಡುವ ರೀತಿ ಭಾರತೀಯ ಮದ್ಯ ಉದ್ಯಮ ಬೆಳೆಸುವ ಗುರಿ ಹೊಂದಿದ್ದರು. ಆದರೆ ಕಿಂಗ್‌ಫಿಶರ್ ಏರ್‌ಲೈನ್ಸ್ ಅವರಿಗೆ ಬಹುದೊಡ್ಡ ನಷ್ಟ ಮಾಡಿತ್ತು, ಕೊನೆಗೆ ವಿಜಯ್ ಮಲ್ಯ ಭಾರತ ಬಿಟ್ಟು ಲಂಡನ್‌ಗೆ ಹೋಗುವ ಪರಿಸ್ಥಿತಿ ಕೂಡ ಬಂದು ಬಿಟ್ಟಿತು... ಹೀಗಿದ್ದಾಗಲೇ, ಆರ್‌ಸಿಬಿ ಮಾಜಿ ಓನರ್ 1,00,000 ಕೋಟಿ ರೂಪಾಯಿ ಬ್ಯುಸಿನೆಸ್, ವಿಜಯ್ ಮಲ್ಯಗೆ ದ್ರೋಹ ಮಾಡಿದ್ದು ಯಾರು...
9,000 ಕೋಟಿ ಸಾಲ..... ಅಂದಹಾಗೆ ಇದು ವಿಜಯ್ ಮಲ್ಯ ವಿರುದ್ಧ ಕೇಳಿ ಬಂದಿದ್ದ ಗಂಭೀರ ಆರೋಪ ಆಗಿತ್ತು. ವಿಜಯ್ ಮಲ್ಯ ಶತಕೋಟಿ ಭಾರತೀಯರ ಕಣ್ಣಿಗೆ ವಿಲನ್ ಆಗಿದ್ದರು, ವಿಜಯ್ ಮಲ್ಯ ಸಾಲ ಮಾಡಿ ಓಡಿ ಹೋಗಿದ್ದಾರೆ ಅನ್ನೋ ಕಳಂಕ ಅವರಿಗೆ ಮೆತ್ತಿಕೊಂಡಿತ್ತು. ಕನ್ನಡ ನಾಡಿನ ಅತಿದೊಡ್ಡ ಉದ್ಯಮಿ ಆಗಿದ್ದ ವಿಜಯ್ ಮಲ್ಯ ಅವರಿಗೆ ಈ ಕೆಟ್ಟ ಹೆಸರು ಕಂಗಾಲಾಗುವ ರೀತಿ ಮಾಡಿತ್ತು. ಇದೆಲ್ಲವನ್ನೂ ಮೀರಿ ನಿಂತಿದ್ದ ವಿಜಯ್ ಮಲ್ಯ ಕೊನೆಗೆ ದೇಶವನ್ನೇ ಬಿಟ್ಟು ಹೋಗುವ ಪರಿಸ್ಥಿತಿ ಬಂತು. ಆದರೆ ಇದೀಗ ತಮ್ಮ ಜೀವನದ ಬಗ್ಗೆ ಮನಸ್ಸು ಬಿಚ್ಚಿ ಖಾಸಗಿ ಸಂದರ್ಶನ ನೀಡಿರುವ ಇದೇ ವಿಜಯ್ ಮಲ್ಯ, ಬ್ಯುಸಿನೆಸ್ ಲಾಸ್ ಆಗಿದ್ದು ಹೇಗೆ? ಯಾರಿಂದ? ಅನ್ನೋ ಘೋರ ಸತ್ಯವನ್ನು ಬಯಲು ಮಾಡಿದ್ದಾರೆ...

ಮದ್ಯದ ದೊರೆ ವಿಜಯ್ ಮಲ್ಯ...
ಹೌದು, ಬಹುತೇಕರಿಗೆ ನೆನಪು ಇದೆ ಅಂತಾ ಕಾಣುತ್ತದೆ & ಅದು ಏನಂದ್ರೆ ವಿಜಯ್ ಮಲ್ಯ ಅವರ ಹೆಸರು ಹೇಳುವಾಗ ಮದ್ಯದ ದೊರೆ ಅನ್ನೋ ಪದವನ್ನ ಕೂಡ ಬಳಸುತ್ತಿದ್ದರು. ಯಾಕಂದ್ರೆ ವಿಜಯ್ ಮಲ್ಯ ಮದ್ಯದ ಉದ್ಯಮದಲ್ಲಿ ಭಾರಿ ದೊಡ್ಡ ಹೆಸರು ಮಾಡಿದ್ದರು. ಹೀಗಾಗಿಯೇ ವಿಜಯ್ ಮಲ್ಯ ಮದ್ಯದ ದೊರೆಯಾಗಿ ಬೆಳೆದರು. ಆದರೆ ಇಂತಹ ಬೃಹತ್ ಉದ್ಯಮ ಕಟ್ಟಿ ಬೆಳೆಸಿದ್ದ ಉದ್ಯಮಿ & ಕನ್ನಡಿಗ ವಿಜಯ್ ಮಲ್ಯ ಅವರನ್ನು ತುಳಿದಿದ್ದು ಯಾರು? ತಮಗೆ ಆಗಿರುವ ಆ ಮೋಸದ ಬಗ್ಗೆ ಮಲ್ಯ ಹೇಳಿದ್ದು ಏನು?
ಸರ್ಕಾರಗಳೇ ವಿಜಯ್ ಮಲ್ಯಗೆ ಮೋಸ ಮಾಡಿದ್ವಾ?
ವಿಜಯ್ ಮಲ್ಯ ತಮ್ಮ ವಿರುದ್ಧ ಕೇಳಿ ಬಂದಿದ್ದ ಆರೋಪಗಳಿಗೆ ತಕ್ಕ ಉತ್ತರ ನೀಡಿದ್ದು, ಯಾವ ರೀತಿಯಾಗಿ ತಮಗೆ ಈ ಉದ್ಯಮದಲ್ಲಿ ಮೋಸ ಮಾಡಿದ್ರು? ಅನ್ನೋ ಆರೋಪವನ್ನ ಮಾಡಿದ್ದಾರೆ. ಬಹುತೇಕ ಕೇಂದ್ರ ಸರ್ಕಾರ & ಕೇಂದ್ರದ ವಿತ್ತ ಸಚಿವರು ಅಂದ್ರೆ ಆಗಿನ ಕಾಲದ ಹಣಕಾಸು ಸಚಿವರ ವಿರುದ್ಧವೇ ಆರೋಪ ಮಾಡಿದ್ದಾರೆ. ಇದರ ಜೊತೆಗೆ ರಾಜ್ಯಗಳೂ ಹಾಕುತ್ತಿದ್ದ ಸ್ಥಳೀಯ ತೆರಿಗೆ ಕೂಡ ತಮ್ಮ ಉದ್ಯಮಕ್ಕೆ ಪೆಟ್ಟು ಕೊಟ್ಟಿತ್ತು, ಏರ್‌ಲೈನ್ಸ್ ಉದ್ಯಮವನ್ನು ದೊಡ್ಡ ಮಟ್ಟಿಗೆ ತೆಗೆದುಕೊಂಡು ಹೋಗುವ ಕನಸು ನನ್ನದಾಗಿತ್ತು. ಆದರೆ ಎಲ್ಲವನ್ನೂ ಹಾಳು ಮಾಡಲಾಯಿತು ಅಂತಾ ಪರೋಕ್ಷವಾಗಿ ಕೇಂದ್ರದಲ್ಲಿ ಹಲವು ವರ್ಷಗಳ ಹಿಂದೆ ಅಧಿಕಾರ ನಡೆಸುತ್ತಿದ್ದ ಮಂತ್ರಿಗಳ ವಿರುದ್ಧ ಪರೋಕ್ಷವಾಗಿ ವಿಜಯ್ ಮಲ್ಯ ಬೇಸರ ಹೊರ ಹಾಕಿದ್ದಾರೆ...












Click it and Unblock the Notifications