India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಅಭಿಮಾನಿಗಳಿಗೆ ಕ್ಲಾಸ್ ತೆಗೆದುಕೊಂಡ ವಿರಾಟ್- ಕಾರಣವೇನು ಗೊತ್ತಾ?

|
Google Oneindia Kannada News

ಭಾರತ ಮತ್ತು ಲೀಸೆಸ್ಟರ್‌ಶೈರ್ ನಡುವೆ ಕೌಂಟಿ ಮೈದಾನದಲ್ಲಿ ನಾಲ್ಕು ದಿನಗಳ ಅಭ್ಯಾಸ ಪಂದ್ಯ ನಡೆಯುತ್ತಿದೆ. ಜುಲೈ 1 ರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾದ ಸಿದ್ಧತೆಯ ದೃಷ್ಟಿಯಿಂದ ಈ ಪಂದ್ಯವನ್ನು ಅತ್ಯಂತ ಮಹತ್ವದ್ದಾಗಿ ಪರಿಗಣಿಸಲಾಗುತ್ತಿದೆ. ಆದರೆ, ಅಭ್ಯಾಸ ಪಂದ್ಯದ ಮೂರನೇ ದಿನ ಅಭಿಮಾನಿಗಳು ನಿರೀಕ್ಷೆ ಮಾಡದ ಘಟನೆ ನಡೆದಿದೆ. ವಾಸ್ತವವಾಗಿ, ಪಂದ್ಯದ ಮೂರನೇ ದಿನದ ಫೀಲ್ಡಿಂಗ್ ಸಮಯದಲ್ಲಿ, ಮೈದಾನದಲ್ಲಿದ್ದ ಕೆಲವು ಅಭಿಮಾನಿಗಳು ಕಮಲೇಶ್ ನಾಗರಕೋಟಿ ಅವರನ್ನು ಟ್ರೋಲ್ ಮಾಡುತ್ತಿದ್ದರು. ಆಗ ವಿರಾಟ್ ಕೊಹ್ಲಿಗೆ ಇದು ಇಷ್ಟವಾಗಲಿಲ್ಲ.ಅದ್ದರಿಂದ ಬಾಲ್ಕನಿಯಲ್ಲಿಯೇ ಅಭಿಮಾನಿಗಳ ಮೇಲೆ ಕೋಪ ತೋರಿಸಿದ್ದಾರೆ.

ವಿರಾಟ್ ಕೊಹ್ಲಿ ಅಭಿಮಾನಿಗಳ ಸಂಘವು ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಿದೆ. ಇದರಲ್ಲಿ ಮಾಜಿ ಭಾರತೀಯ ನಾಯಕ ಕ್ರೀಡಾಂಗಣದ ಬಾಲ್ಕನಿಯಲ್ಲಿ ಅಭಿಮಾನಿಗಳೊಂದಿಗೆ ಕೋಪದಿಂದ ಮಾತನಾಡುತ್ತಿರುವುದು ಕಂಡುಬಂದಿದೆ. ಶುಕ್ರವಾರ ಸ್ಟೇಡಿಯಂನಲ್ಲಿ ಕುಳಿತಿದ್ದ ಭಾರತೀಯ ಅಭಿಮಾನಿಗಳು ನಾಗರಕೋಟಿಯನ್ನು ನಿಂದಿಸುತ್ತಿದ್ದಾರೆ ಮತ್ತು ಯುವ ಆಟಗಾರನಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ ಎಂದು ವಿಡಿಯೊದ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಷಯ ತಿಳಿದ ವಿರಾಟ್ ತಕ್ಷಣವೇ ಬಾಲ್ಕನಿಗೆ ಬಂದು ಅಭಿಮಾನಿಗಳ ಮೇಲೆ ರೇಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಕೊಹ್ಲಿ 'ನಿಮಗಾಗಿ ಇಲ್ಲಿಗೆ ಬಂದಿಲ್ಲ, ಇಲ್ಲಿ ಪಂದ್ಯ ಆಡಲು ಬಂದಿದ್ದೇನೆ' ಎಂದು ಹೇಳುತ್ತಿರುವುದು ಕೇಳಿಬರುತ್ತಿದೆ. ಈ ಪಂದ್ಯದಲ್ಲಿ ಕಮಲೇಶ್ ನಾಗರಕೋಟಿ ಅವರು ಲೀಸೆಸ್ಟರ್‌ಶೈರ್ ಪರ ಫೀಲ್ಡಿಂಗ್ ಮಾಡುತ್ತಿದ್ದಾರೆ.

 ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ 11 ವರ್ಷದ ಸಂಭ್ರಮ: ವಿಡಿಯೋ ಹಂಚಿಕೊಂಡ 'ರನ್ ಮೆಷಿನ್' ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ 11 ವರ್ಷದ ಸಂಭ್ರಮ: ವಿಡಿಯೋ ಹಂಚಿಕೊಂಡ 'ರನ್ ಮೆಷಿನ್'

ಅಲ್ಲದೆ, ವಿರಾಟ್ ಕೊಹ್ಲಿ ಸಹ ಆಟಗಾರರಿಗೆ ಬೆಂಬಲ ನೀಡುತ್ತಿರುವುದು ಇದೇ ಮೊದಲಲ್ಲ. ಪ್ರತಿ ಬಾರಿಯೂ ವಿರಾಟ್ ಕಷ್ಟದ ಸಮಯದಲ್ಲಿ ಆಟಗಾರರ ಜೊತೆ ನಿಂತಿರುವುದನ್ನು ಕಾಣಬಹುದು. ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದಲ್ಲಿ, ಜೇಮ್ಸ್ ಆಂಡರ್ಸನ್ ಮೈದಾನದಲ್ಲಿ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ತೀವ್ರ ವಾಗ್ವಾದ ನಡೆಸಿದ್ದರು. ಆಂಡರ್ಸನ್ ಪದೇ ಪದೇ ಬುಮ್ರಾ ಅವರನ್ನು ಸ್ಲೆಡ್ಜಿಂಗ್ ಮಾಡುತ್ತಿದ್ದರು, ನಂತರ ಕೊಹ್ಲಿ ಡ್ರೆಸ್ಸಿಂಗ್ ರೂಮ್‌ನ ಬಾಲ್ಕನಿಯಿಂದ ಬುಮ್ರಾ ಅವರನ್ನು ಬೆಂಬಲಿಸಿದರು.

English summary
Virat Kohli has shown anger at some fans who were on the field during practice in the county ground.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X