Champions Trophy: ಪಾಕ್‌ ತಂಡ ಆಡುವಾಗಲೂ ಸ್ಟೇಡಿಯಂನಲ್ಲಿ ಜನರೇ ಇಲ್ಲ, ಪಾಕಿಸ್ತಾನದಲ್ಲಿ ಎಲ್ಲವೂ ಖಾಲಿ, ಖಾಲಿ

ಪಾಕಿಸ್ತಾನದ ಸ್ಥಿತಿ ಹೇಗೆ ಆಗಿದೆ ಅಂದ್ರೆ, ಏನನ್ನೇ ಮಾಡಲು ಹೋದರೂ ಎಡವಟ್ಟು ಗ್ಯಾರಂಟಿ. ಇಂತಿಪ್ಪ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ ಎದುರಾಗಿದೆ. ದೊಡ್ಡದಾಗಿ ಪೋಸ್ ಕೊಡಲು ಹೋಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಿರುವ ಪಾಕಿಸ್ತಾನದಲ್ಲಿ ಮತ್ತೊಂದು ಶಾಕ್ ಎದುರಾಗಿದೆ. ಉದ್ಘಾಟನಾ ಪಂದ್ಯದಲ್ಲೇ ಕ್ರೀಡಾಂಗಣದ ಚೇರ್‌ಗಳು ಖಾಲಿ ಖಾಲಿಯಾಗಿ ಬಿದ್ದಿದ್ದ ವಿಡಿಯೋಗಳು ಇದೀಗ ವೈರಲ್ ಆಗುತ್ತಿವೆ.

ಪಾಕಿಸ್ತಾನ ತೀವ್ರವಾದ ಆರ್ಥಿಕ ನಷ್ಟದಲ್ಲಿ ನಲುಗಿ ಹೋಗಿದ್ದು, ತುತ್ತು ಅನ್ನಕ್ಕೂ ನರಳಾಟ ಕಂಡುಬರುತ್ತಿದೆ. ಪಾಕಿಸ್ತಾನದ ಜನರು ಉದ್ಯೋಗ ಇಲ್ಲದೆ, ತಿನ್ನಲು ಅನ್ನ ಇಲ್ಲದೆ ಪರದಾಟ ಪಡುತ್ತಿದ್ದಾರೆ. ಇಂತಹ ಸಮಯದಲ್ಲಿ ಪಾಕಿಸ್ತಾನದ ಕ್ರಿಕೆಟ್ ಬೋರ್ಡ್ ಭಾರತವನ್ನು ಎದುರು ಹಾಕಿಕೊಂಡು ' ಚಾಂಪಿಯನ್ಸ್ ಟ್ರೋಫಿ' ಆಯೋಜನೆ ಮಾಡಿದೆ. ಆದರೆ ಯಾವುದೇ ರೀತಿಯ ಮುನ್ನೆಚ್ಚರಿಕೆ ಇಲ್ಲದ ಕಾರಣ ಇದು ಕೂಡ ದೊಡ್ಡ ಫ್ಲಾಪ್ ಶೋ ಆಗುತ್ತಿದೆ.

Vaughan and Fans Discuss Empty Seats at Champions Trophy Opener

ಉದ್ಘಾಟನಾ ಪಂದ್ಯದಲ್ಲೇ ಎಲ್ಲಾ ಖಾಲಿ!

ಹೌದು, ಪಾಕಿಸ್ತಾನ & ನ್ಯೂಜಿಲೆಂಡ್ ನಡುವೆ ನಡೆದ 'ಚಾಂಪಿಯನ್ಸ್ ಟ್ರೋಫಿ' ಉದ್ಘಾಟನಾ ಪಂದ್ಯದಲ್ಲಿ ಮ್ಯಾಚ್ ನೋಡಲು ಜನರೇ ಬಂದಿರಲಿಲ್ಲ. ಹೀಗಾಗಿ ಪಾಕಿಸ್ತಾನದ ಕ್ರೀಡಾಂಗಣ ಖಾಲಿಯಾಗಿತ್ತು. ಎಲ್ಲಿ ನೋಡಿದರೂ ಬರೀ ಖಾಲಿ ಸೀಟ್‌ಗಳೇ ಕಂಡುಬಂದವು. ಈಗ ಜನ ಈ ವಿಡಿಯೋಗಳನ್ನು ನೋಡಿ ಫುಲ್ ಟ್ರೋಲ್ ಮಾಡುತ್ತಿದ್ದಾರೆ. ಹಾಗೇ ಏನಿದು ಪಾಕ್‌ನ ಕಥೆ? ಅಂತಾ ಚರ್ಚೆ ಕೂಡ ಮಾಡಲಾಗುತ್ತಿದೆ. ಹಾಗೆಯೇ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯವಾಗಿ ಸೋತು ಹೋಗಿದೆ.

320 ರನ್ ಚಚ್ಚಿದ್ದ ನ್ಯೂಜಿಲ್ಯಾಂಡ್

ಟಾಸ್ ಗೆದ್ದರೂ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಪಾಕಿಸ್ತಾನ ಪಡೆಗೆ ಕಿವೀಸ್ ದಾಂಡಿಗರು ಚಳಿ ಬಿಡಿಸಿದರು. ಪಾಕಿಸ್ತಾನದ ಬೌಲರ್‌ಗಳನ್ನು ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಪಡೆ ಓಡಾಡಿಸಿಕೊಂಡು ಬಾರಿಸಿತ್ತು. ಹೀಗೆ ನೋಡ ನೋಡುತ್ತಲೇ ನ್ಯೂಜಿಲ್ಯಾಂಡ್ ತಂಡ ಭರ್ಜರಿ ರನ್ ಕಲೆಹಾಕುವತ್ತ ಮುಂದೆ ನುಗ್ಗಿತ್ತು. ಆರಂಭಿಕ ಆಟಗಾರ ವಿಲ್ ಯಂಗ್ 107 ರನ್ ಬಾರಿಸಿದರೆ, ಟಾಮ್ ಲ್ಯಾಥಮ್ ಕೂಡ ಶತಕ ಬಾರಿಸಿ 118 ರನ್ ಕೊಡುಗೆ ನೀಡಿದರು.

ಅಂತಿಮವಾಗಿ 320 ರನ್‌ಗೆ 5 ವಿಕೆಟ್ ಕಳೆದುಕೊಂಡು ತನ್ನ ಆಟ ಮುಗಿಸಿತ್ತು ನ್ಯೂಜಿಲ್ಯಾಂಡ್ ತಂಡ. ಆದರೆ ಈ ಗುರಿ ಬೆನ್ನುಹತ್ತಿದ್ದ ಪಾಕಿಸ್ತಾನ ಕೇವಲ 260 ರನ್ ಗಳಿಸಿ ಸೋತಿದೆ. ಈ ಸೋಲಿನ ಮೂಲಕ ಪಾಕಿಸ್ತಾನ ಆರಂಭದಲ್ಲೇ ಎಡವಿದೆ. ಅಲ್ಲದೆ ಮುಂದಿನ ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಉಳಿಗಾಲ ಎನ್ನುವ ವಾತಾವರಣ ನಿರ್ಮಾಣ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+